ಬದುಕನ್ನು ಅರಳಿಸಿದ ಗುಡಿ ಕೈಗಾರಿಕೆ

Posted on Posted in success story, Women Empowerment

ಇದು ಹೊರಗಿನ ಪ್ರಪಂಚವನ್ನೇ ಅರಿಯದೆ ತನ್ನ ಗುಡಿ ಕೈಗಾರಿಕೆಯಿಂದಲೇ ನೆಮ್ಮದಿಯ ಜೀವನ ಕಂಡುಕೊಂಡ ಮಹಿಳೆಯ ಯಶೋಗಾಥೆ.

ತುರುವೇಕೆರೆ ತಾಲೂಕಿನ ಕೊಂಡಜ್ಜಿ ವಲಯದ ದೊಂಬರನಹಳ್ಳಿಯ ವಿಶಾಲಮ್ಮನವರಿಗೆ ಮನೆಯಿಂದ ಹೊರಗಡೆ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ಕಡಿಮೆ. ತಮ್ಮವರ ಸಹಕಾರವಿಲ್ಲದೆ ಹೊಸ ಪ್ರಯತ್ನ ಆರಂಭಿಸಿದಾಗ ನೆರೆಹೊರೆಯವರ ಟೀಕೆ ಎದುರಿಸಬೇಕಾಯಿತು. ಇಂತಹ ಸಂಧರ್ಭದಲ್ಲಿ ಅವರಿಗೆ ನೆರವಾದದ್ದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀ ಧನಲಕ್ಷ್ಮೀ ಸ್ವ-ಸಹಾಯ ಸಂಘ ಹಾಗೂ ಕನಕ ಜ್ಞಾನವಿಕಾಸ ಕೇಂದ್ರ.

ಜ್ಞಾನವಿಕಾಸ ಕೇಂದ್ರದ ಸದಸ್ಯರಾದ ನಂತರ ಕೇಂದ್ರದ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿಗಳಿಂದ ದೊರೆತ ಸಲಹೆಗಳಿಂದ ಸ್ವ-ಉದ್ಯೋಗ ಕೈಗೊಳ್ಳಲು ನಿರ್ಧರಿಸಿದರು. ಗೃಹಾಲಂಕಾರ ವಸ್ತು ತಯಾರಿಕೆ ಮತ್ತು ಪುಷ್ಪ ಕೃಷಿ ಮಾಡುವುದನ್ನು ಕಲಿತರು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ನೆಮ್ಮದಿ ಸಾಧಿಸುವುದರೊಂದಿಗೆ, ತಮ್ಮ ಮೈದುನನ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.

ಜ್ಞಾನವಿಕಾಸ ಮಾಹಿತಿ ಕಾರ್ಯಕ್ರಮದಲ್ಲಿ ನೀಡಿದ ಸಲಹೆಗಳನ್ನು ಕುಟುಂಬದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿ ಇನ್ನೂ ಉತ್ತಮ ಆದಾಯ ನೀಡುವತ್ತ ಗಮನಹರಿಸುತ್ತಿದ್ದಾರೆ. ಯೋಜನೆಯೂ ವಿಶಾಲಮ್ಮನವರ ಪ್ರಯತ್ನದಲ್ಲಿ ಕೈಜೋಡಿಸಿದೆ.