News

ರೋಣ: ವನಮಹೋತ್ಸವ ಮತ್ತು ಪರಿಸರ ದಿನಾಚರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೋಣ/ನರಗುಂದ ತಾಲೂಕಿನ ಗಜೇಂದ್ರಗಡದ ಗವಿಸಿದ್ದೇಶ್ವರ ದೇವಸ್ಥಾನದಲ್ಲಿ ಜೂನ್ 5 ರಂದು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಣ್ಯರಾದ ಮಂಜುನಾಥ ನಾಯಕ ಹಾಗೂ ಡಿ. ವಾಯ್, ದೊಡಮನಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸುಮಾರು 60 ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪರಿಸರದಲ್ಲಿ ಗಿಡಗಳ ಪಾತ್ರ ಹಾಗೂ ಆಮ್ಲಜನಕ, ನೀರಿನ ಸಮಸ್ಯೆಯ ಕುರಿತು ಸಂದೇಶ ನೀಡಲಾಯಿತು. ತೆಂಗು, ಪೇರಲ, ಚಿಕ್ಕು ತಳಿಗಳ 15 ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಯಿತು ಹಾಗೂ ನಾಟಿ ಮಾಡಲಾಯಿತು. ಬೇವು ಹಾಗೂ ಹುಣಸೆ ಜಾತಿಗೆ ಸೇರಿದ 1200 ಕ್ಕೂ ಹೆಚ್ಚು ಬೀಜದುಂಡೆಗಳನ್ನು ವಿತರಿಸಲಾಯಿತು.

ರೋಣ ತಾಲೂಕಿನ ಶಾಂತಗೇರಿ ವಲಯದ ಕಣಕಿಕೊಪ್ಪದಲ್ಲ ಜೂನ್ 17 ರಂದು ಕೆರೆ ಅರಣ್ಯೀಕರಣ ಕಾರ್ಯಕ್ರಮ ನಡೆಯಿತು. ನಂದಿ ಒಕ್ಕೂಟದ ಅಧ್ಯಕ್ಷೆ ಕವಿತಾ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆರೆ ಅರಣ್ಯೀಕರಣದ ಪ್ರಯೋಜನ, ಮಣ್ಣು ಸವಕಳಿ ತಡೆಗೆ ಅನುಕೂಲ, ಪರಿಸರ ಕಾಳಜಿಯ ಕುರಿತು ಸಂದೇಶ ನೀಡಲಾಯಿತು. ಹೊಂಗೆ, ಬೇವು ಮೊದಲಾದ ತಳಿಗಳಿಗೆ ಸೇರಿದ 40ಕ್ಕೂ ಅಧಿಕ ಗಿಡಗಳನ್ನು ವಿತರಿಸಲಾಯಿತು. ಐದು ಗಿಡಗಳನ್ನು ನಾಟಿ ಮಾಡಲಾಯಿತು. ಮಾಹಿತಿಪೂರ್ಣವಾಗಿದ್ದ ಕೆರೆ ಅರಣ್ಯೀಕರಣ ಕಾರ್ಯಾಗಾರ ಪರಿಸರ ಕಾಳಜಿ ಮೂಡಿಸುವಲ್ಲಿ ಸಫಲವಾಯಿತು.

ರೋಣ ತಾಲೂಕಿನ ಮಲ್ಲಾಪುರ (ಚಿಕ್ಕಮಣ್ಣೂರ) ವಲಯದ ರಡ್ಡೇರ ನಾಗನೂರ ಗ್ರಾಮ ಪಂಚಾಯತ್‍ನಲ್ಲಿ ಜೂನ್ 9 ರಂದು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಸ್ಥಳೀಯರಾದ ಚಂಪಾವತಿ ಹಿರೇಮಠ, ಮಹಾಂತೇಶ ಹಿರೇಮಠರವರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಮಲ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 90 ಮಂದಿ ಭಾಗವಹಿಸಿದ್ದರು. ಬೇವು, ಹೊಂಗೆ, ಚತ್ರಿ ಪ್ರಭೇದಕ್ಕೆ ಸೇರಿದ ಸುಮಾರು 25 ಗಿಡಗಳನ್ನು ವಿತರಿಸಲಾಯಿತು ಹಾಗೂ ಅಷ್ಟೇ ಸಂಖ್ಯೆಯ ಗಿಡಗಳನ್ನು ನೆಡಲಾಯಿತು. ಹೊಂಗೆ ಪ್ರಭೇಧಕ್ಕೆ ಸೇರಿದ 1,000 ಬೀಜದುಂಡೆಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ತಾಲೂಕಿನ ಮೇಲ್ಮಠ (ಹೊಳೆಆಲುರ) ವಲಯದ ಮಾರುತಿ ದೇವಸ್ಥಾನದಲ್ಲಿ ಜೂನ್ 16 ರಂದು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ (ಗ್ರಾಮ ಮಾಹಿತಿ) ನಡೆಯಿತು. ಕಮೇಠಿ ಮೇಲ್ಮಠ, ಮಾರುತಿ ದೇವಸ್ಥಾನದ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಭಾಗವಹಿಸಿದ್ದರು. ಶಿಕ್ಷಕ ಪಿ.ಬಿ ಹೊಸಳ್ಳಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೀಜದುಂಡೆಗಳ ತಯಾರಿ ವಿಧಾನ, ಪರಿಸರ ಸಂರಕ್ಷಣೆ, ಗಿಡ ನಾಟಿ, ಪೋಷಣೆಯ ಬಗ್ಗೆ ಮಾಹಿತಿ ನೀಡಿದರು. ಬೇವು, ಹುಣಸೆ ಜಾತಿಗೆ ಸೇರಿದ 1500 ಬೀಜದುಂಡೆಗಳನ್ನು ವಿತರಿಸಲಾಯಿತು.

ರೋಣ ತಾಲೂಕಿನ ಮಲ್ಲಾಪುರ (ಚಿಕ್ಕಮಣ್ಣೂರ) ವಲಯದ ಬಸವೇಶ್ವರ ದೇವಸ್ಥಾನ ಹೊರಕೇರಿ (ಒಣಿ ನರಗುಂದ)ದಲ್ಲಿ ಜೂನ್ 11 ರಂದು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಬಸವೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕ ಮಂಜುನಾಥ ನಾಯಕ ಮತ್ತು ಪುರಸಭೆ ಸದಸ್ಯ ಉಮೇಶ್ ಕುಡಿಯನ್ನವರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಪರಿಸರ ಅಸಮತೋಲನೆ ತಡೆ ಕುರಿತು ಮಾಹಿತಿ, ಪರಿಸರ ಸ್ವಚ್ಛತೆ, ಮರ ಬೆಳೆಸುವಿಕೆ ಹಾಗೂ ಘೋಷಣೆ ಮಾಡುವ ಬಗ್ಗೆ ಸಂದೇಶ ನೀಡಲಾಯಿತು. ಬೇವು ಜಾತಿಯ ಸುಮಾರು 80 ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 40 ಬೇವಿನ ಸಸಿಗಳನ್ನು ವಿತರಿಸಲಾಯಿತು, 5 ಸಸಿಗಳನ್ನು ನೆಡಲಾಯಿತು.

ರೋಣ ತಾಲೂಕಿನ ರಡ್ಡೇರ ನಾಗನೂರ (ಕೊಣ್ಣೂರ) ಕಾರ್ಯಕ್ಷೇತ್ರದ ರಡ್ಡೇರ ನಾಗನೂರ ಗ್ರಾಮ ಪಂಚಾಯತ್‍ನಲ್ಲಿ ಜೂನ್ 12 ರಂದು ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು. ಸುಮಾರು 60 ಮಂದಿ ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಸ್ಥಳೀಯರಾದ ಮಂಜುನಾಥ ನಾಯಕ ಹಾಗೂ ಡಿ. ವಾಯ್. ದೊಡಮನಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪರಿಸರ ರಕ್ಷಣೆ ಹಾಗೂ ನೀರಿನ ಸಮಸ್ಯೆ ನಿವಾರಿಸುವ ಕುರಿತು ಸಂದೇಶ ನೀಡಿದರು. ತೆಂಗು, ಪೇರಲ, ಚಿಕ್ಕು ತಳಿಗಳ 15 ಗಿಡಗಳನ್ನು ವಿತರಿಸಿದರೆ, 15 ಗಿಡಗಳ ನಾಟಿ ಮಾಡಲಾಯಿತು. ಸುಮಾರು 1200 ಬೀಜದುಂಡೆಗಳನ್ನು ವಿತರಿಸಲಾಯಿತು.