News

ವನಮಹೋತ್ಸವ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ತಾಲೂಕಿನ, ಮಾರುಕೇರಿ ಕಾರ್ಯಕ್ಷೇತ್ರದ ಶ್ರೀ ಶಿವ ಶಾಂತಿಕಾ ಪ್ರೌಢಶಾಲಾ ಆವರಣದಲ್ಲಿ ಜೂನ್ 5 ರಂದು ವನಮಹೋತ್ಸವ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಹೊನ್ನಾವರ- ಭಟ್ಕಳ ಯೋಜನಾಧಿಕಾರಿ ಈಶ್ವರ ಎಮ್.ಎಸ್ ಕಾರ್ಯಕ್ರಮ ಉದ್ಘಾಟಿಸಿದರೆ, ಶ್ರೀ ಶಿವ ಶಾಂತಿಕಾ ಪ್ರೌಢಶಾಲಾ ಕಮಿಟಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆವರಣದಲ್ಲೇ ಸುಮಾರು 50 ಗಿಡಗಳನ್ನು ನಾಟಿ ಮಾಡಿ, ಸಸ್ಯ ಮತ್ತು ಪರಿಸರಕ್ಕಿರುವ ಅವಿಭಾಜ್ಯ ನಂಟು, ಅರಣ್ಯ ನಾಶದಿಂದ ಆಗುವ ಅಪಾಯಗಳನ್ನು ವಿವರಿಸಲಾಯಿತು. ಪ್ರತಿಯೊಬ್ಬರೂ ಒಂದೊಂದು ಗಿಡ ನೆಡುವ ಮೂಲಕ ಎಲ್ಲರೂ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡೋಣ, ಎಂದು ಉದ್ಘಾಟಕರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಒಟ್ಟು 200 ಮಂದಿ ಭಾಗವಹಿಸಿದ್ದರು. ತಾಲ್ಲೂಕು ಪಂಚಾಯತ್ ಸದಸ್ಯೆ ಜಯಲಕ್ಷ್ಮೀ ಗೊಂಡ, ಭಟ್ಕಳ ಗ್ರಾಮ ಪಂಚಾಯತ್ ಸದಸ್ಯೆ ನಾಗವೇಣಿ ಗೊಂಡ, ಒಕ್ಕೂಟದ ಅಧ್ಯಕ್ಷ ನಾಗರಾಜ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.