ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕು ವ್ಯಾಪ್ತಿಯ ಹೊಸ್ಮಾರು ವಲಯದ ವಿಶ್ವಕರ್ಮ ಸಮುದಾಯ ಭವನದಲ್ಲಿ ಜೂನ್ 25 ರಂದು ಪರಿಸರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷ ಜಯಕುಮಾರ್ ಜೈನ್ ಮಾತನಾಡಿ ನೀರು ಸಂರಕ್ಷಣೆ ನಮ್ಮೆಲ್ಲರ ಹೊಣೆ.
ಮಳೆ ನೀರನ್ನು ಜಮೀನಿನಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮಟ್ಟವನ್ನು ಅಭಿವೃದ್ಧಿಪಡಿಸುವ ಕುರಿತು, ವಿವಿಧ ರೀತಿಯಲ್ಲಿ ನೀರಿನ ಸದ್ಭಳಕೆ ಮತ್ತು ಅತೀ ಹೆಚ್ಚು ಗಿಡಗಳನ್ನು ನಾಟಿ ಮಾಡುವ ಮುಖಾಂತರ ಪ್ರಕೃತಿಯ ಸಮತೋಲನವನ್ನು ಕಾಪಾಡಬೇಕು ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷ ರತ್ನಾಕರ ಆಚಾರ್ಯ, ವಿಶ್ವಕರ್ಮ ಸಮಾಜಭವನದ ಅಧ್ಯಕ್ಷ ಗಣೇಶ್ ಆಚಾರ್ಯ, ಮೇಲ್ವಿಚಾರಕ ದಿನೇಶ್ ಹೆಗ್ಡೆ ಮತ್ತು ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ 60 ವಿವಿಧ ತಳಿಯ ಗಿಡಗಳನ್ನು ನಾಟಿ ಮಾಡಲಾಯಿತು.
ಯೋಗ ತರಬೇತಿ ಸಮಾರೋಪ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಜಗೋಳಿ ವಲಯ, ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಜಗೋಳಿ ಇದರ ಜಂಟಿ ಆಶ್ರಯದಲ್ಲಿ ಜೂನ್ 27 ರಂದು ಬಜಗೋಳಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಹೇಶ್ ಭಾರತ್ ಸೇವಾದಳ ಜಿಲ್ಲಾ ಸಂಘಟಕ ಮಹೇಶ್, ದೇಹ, ಮನಸ್ಸು, ಬುದ್ಧಿ ಹಿಡಿತಕ್ಕೆ ಯೋಗ ಸಂಜೀವಿನಿ ಅತ್ಯಂತ ಪರಿಣಾಮಕಾರಿ. ಯೋಗಕ್ಕೆ ಅನೇಕ ಕಾಯಿಲೆ ದೂರ ಮಾಡುವ ಶಕ್ತಿ ಇದೆ, ಪ್ರತಿಯೊಬ್ಬರೂ ಯೋಗ ಅನುಸರಿಸಬೇಕು, ಎಂದರು.
ಯೋಜನೆಯ ಯೋಜನಾಧಿಕಾರಿ ಕೃಷ್ಣ ಟಿ ಮಾತನಾಡಿ ಅರೋಗ್ಯಪೂರ್ಣ ಜೀವನಕ್ಕೆ ಯೋಗದ ಅನಿವಾರ್ಯತೆಯಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ, ಯೋಜನೆಯಿಂದ ಸಮಾಜದಲ್ಲಿ ಅದ್ಭುತ ಬದಲಾವಣೆಯಾಗಿದೆ. ಶಾಲಾ ವಜ್ರ ಮಹೋತ್ಸವಕ್ಕೆ ರೂ. 15,000 ಅನುದಾನ ನೀಡಿದ ಧರ್ಮಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.