News

ಕಾರ್ಕಳ ತಾಲೂಕಿನ ಬಜಗೋಳಿ ಮಳೆಕೊಯ್ಲು -ಬಾವಿಗೆ ನೀರಿಂಗಿಸುವ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ತಾಲೂಕಿನ ಬಜಗೋಳಿ ವಲಯದ ಮುಡಾರು ಬಿ ಪ್ರಗತಿಬಂಧು ಒಕ್ಕೂಟದ ಜಂಟಿ ಆಶ್ರಯದಲ್ಲಿ ಸೇವಾಪ್ರತಿನಿಧಿ ಪ್ರಭಾರವರ ಮನೆಯಲ್ಲಿ ಮಳೆಕೊಯ್ಲು -ಬಾವಿಗೆ ನೀರಿಂಗಿಸುವ ಕಾರ್ಯಕ್ರಮವನ್ನು ದಿನಾಂಕ 02.07.17 ರಂದು ನಡೆಸಲಾಯಿತು. ಸದ್ರಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯ ಉದಯ ಕೋಟ್ಯಾನ್‍ರವರು ಉದ್ಘಾಟಿಸಿ ಖಾವಂದರ ದೂರದೃಷ್ಠಿ ಜಲ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯ ಸುಲಭ ವಿಧಾನ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ವಿವಿಧ ರೀತಿಯಿಂದ ಜಲಮರುಪೂರಣ ಅಗತ್ಯ ಇದೆ ಎಲ್ಲರೂ ಎಚ್ಚೆತ್ತುಕೊಂಡು ತೊಡಗಿಸಿಕೊಳ್ಳೋಣ ಎಂದರು.

ಸಂಪನ್ಮೂಲ ವ್ಯಕ್ತಿ ನಿವೃತ್ತ ಅದ್ಯಾಪಕರು ಶ್ರೀ ರಂಗ ಜೋಷಿಯವರು ನೀರಿಂಗಿಸುವ ವಿಧಾನದ ಬಗ್ಗೆ ಮಾತನಾಡುತ್ತಾ ಈಗಿನ ಕಾಲದಲ್ಲಿ ಅತಿಯಾದ ನೀರಿನ ಬಳಕೆ ಹಾಗೂ ಜನಸಂಖ್ಯೆ ಹೆಚ್ಚಳದಿಂದ ನೀರಿನ ಆಭಾವ ಎದುರಿಸುತ್ತಿದ್ದೇವೆ. ಈ ಬಗ್ಗೆ ಜಾಗೃತರಾಗಿ ನೀರು ಉಳಿಸುವುದಕ್ಕೆ ಪ್ರಯತ್ನ ಮಾಡೋಣ ಎಂದರು.

ಪೂಜಾ ಸಮಿತಿ ಗೌರವಾಧ್ಯಕ್ಷರಾದ ಶರತ್ ಶೆಟ್ಟಿಯವರು ಗಿಡನೆಟ್ಟು, 200 ಮಂದಿಗೆ ಒಂದೊಂದು ಸಾಗುವಣಿ ಗಿಡ ವಿತರಿಸಿ ಮಾತನಾಡಿ 15-20 ವರ್ಷವಾಗುವಾಗ ಉತ್ತಮ ಬೆಳೆಬಾಳುವ ಮರವಾಗಿ ನಮಗೆ ಆದಾಯ, ಪ್ರಕೃತಿ ರಕ್ಷಣೆ ಮಾಡುವ ಕಾರ್ಯಕ್ರಮ ಯೋಜನೆಯ ಉತ್ತಮ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮದಲ್ಲಿ ಜನಜಾಗೃತಿ ವಲಯಾಧ್ಯಕ್ಷರಾದ ಅನಿಲ್ ಎಸ್ ಪೂಜಾರಿ, ಒಕ್ಕೂಟದ ನಿಕಟಪೂರ್ವ ವಲಯಾಧ್ಯಕ್ಷರಾದ ಸದಾನಂದರವರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ವಾರಿಜ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಮೇಲ್ವಿಚಾರಕರಾದ ಶಶಿಕಿರಣ್ ಪ್ರಸ್ತಾವಿಕವಾಗಿ ಮಾತನಾಡಿದರು. ಮುಡಾರು ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಸ್ವಾಗತಿಸಿ ನೆಲ್ಲಿಕಾರು ಸೇವಾಪ್ರತಿನಿಧಿ ಗೀತಾ ವಂದಿಸಿದರು.