ಜೀವನದಲ್ಲಿ ಕೈಹಿಡಿದ ಕೃಷಿ ಹೊಂಡ

Posted on Posted in success story, Women Empowerment

ಅರಸೀಕರೆ ತಾಲೂಕಿನ ಗಂಡಸಿ ವಲಯದ ಲಾಳನಕೆರೆ ಗ್ರಾಮದ ವಾಸಿಯಾದ ಪ್ರೇಮ c/o ಜಯಣ್ಣನವರು ಸಂಘ ಸೇರುವ ಮೊದಲು ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಯೋಜನೆಗೆ ಬಂದ ನಂತರ ಸಂಘ ಮತ್ತು ಜ್ಞಾನವಿಕಾಸ ಕೇಂದ್ರಕ್ಕೆ ಸೇರಿ ಅಲ್ಲಿ ನೀಡಿದ ಮಾಹಿತಿ ಪಡೆದು ಪ್ರಗತಿನಿಧಿ ಖರ್ಚಿಗೆ ಮೊದಲಿಗೆ 10,000 ರೂ ಪ್ರಗತಿನಿಧಿ ಪಡೆದಿರುತ್ತಾರೆ. ನಂತರ 25000, 45000 ಸಾವಿರದವರೆಗೂ ಸಾಲ ಪಡೆದು ತಮ್ಮ ಆರ್ಥಿಕ ಜೀವನಕ್ಕೆ ಭದ್ರ ಅಡಿಪಾಯ ಹಾಕಿ ನಂತರ ಸಾಲವನ್ನು ಮರುಪಾವತಿ ಮಾಡುತ್ತಾರೆ.

ಅಲ್ಲಿಗೆ ನಿಲ್ಲದೆ ಅವರು ಹಸು ಸಾಕಾಣಿಕೆಗೆ ಕೈ ಹಾಕುತ್ತಾರೆ. ಅದಕ್ಕೆ ಪುನಃ 1,00,000 ಸಾಲ ಪಡೆದು ಹಸು ಖರೀದಿ ಮಾಡಿರುತ್ತಾರೆ. ಇದರಿಂದ ಒಳ್ಳೆಯ ಆದಾಯ ಸಂಪಾದಿಸುತ್ತ ಮನೆ ನಿರ್ಮಾಣ ಕೂಡ ಮಾಡಿರುತ್ತಾರೆ.

ಕರ್ನಾಟಕ ರಾಜ್ಯದ ಬರಪರಿಸ್ಥಿತಿ ಇವರನ್ನು ದೃತಿಗೆಡುವಂತ ಮಾಡುವುದಿಲ್ಲ. ಇದಕ್ಕಾಗಿ ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ಕೃಷಿ ಹೊಂಡ ನಿರ್ಮಿಸುತ್ತಾರೆ. ಇಂತಹ ಬರಗಾಲದ ಪರಿಸ್ಥಿತಿಯಲೂ ಕೃಷಿ ಹೊಂಡದಲ್ಲಿ ನೀರು ಇದ್ದುದರಿಂದ ಕ್ರೃಷಿ ಹೊಂಡಕ್ಕೆ ಪಂಪ್ ಅಳವಡಿಕೆ ಮಾಡಿಕೊಂಡು ಹೈನುಗಾರಿಕೆ ಮತ್ತು ಮನೆ ಕೆಲಸಗಳಿಗೆ ನೀರು ಒದಗಿದೆ. ಹೀಗೆ ಎಲ್ಲಾ ರೀತಿಯಲ್ಲು ಉತ್ತಮವಾದ ಸೌಲಭ್ಯ ಪಡೆದುಕೊಂಡು ಅಭಿವೃದ್ದಿ ಹೊಂದಿರುತ್ತಾರೆ.