AgricultureNews

ವಿಚಾರ ಸಂಕಿರಣ ಕಾರ್ಯಕ್ರಮ

 

ರೈತರ ಕೃಷಿ ಭೂಮಿಯನ್ನು ಹಸನಾಗಿ ಮಾಡುವಲ್ಲಿ ನಿರಂತರ ಪ್ರೇರಣೆ, ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದು, ಕೃಷಿಕರಲ್ಲಿ ಲಾಭದಾಯಕ ಕೃಷಿ ಮಾಡುವ ದೃಷ್ಟಿಯಲ್ಲಿ ಕೃಷಿಯಲ್ಲಿ ಯಾಂತ್ರೀಕರಣದ ಮಹತ್ವ ಮತ್ತು ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಕಂಡುಕೊಂಡು ವಿಚಾರ ಸಂಕಿರಣಗಳ ಮೂಲಕ ರೈತರಿಗೆ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಯಿಸಿ ಮಾಹಿತಿ ನೀಡುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ತಿ.ನರಸೀಪುರ ತಾಲ್ಲೂಕು ವತಿಯಿಂದ ದಿನಾಂಕ:07.07.2017ರಂದು ಬನ್ನೂರಿನ ಎ.ಪಿ.ಎಂ.ಸಿ ಆವರಣದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಶ್ರೀಯುತ ಸುಧೀರ್, ಜಿ.ಪಂ.ಸದಸ್ಯರು ತುರುಗನೂರು ಕ್ಷೇತ್ರ ಕಾರ್ಯಕ್ರಮ ಉದ್ಘಾಟಿಸಿ “ರೈತರಿಗೆ ಕೃಷಿ ಮಾಡುವುದೇ ಮುಖ್ಯ ಬದುಕು”. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬರಗಾಲದಿಂದ ಕಂಗಾಲಾಗಿರುವ ರೈತನಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸುವ ನಿಟ್ಟಿನಿಂದ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದ ಮೂಲಕ ನಮ್ಮನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ. ನಮ್ಮ ರೈತರು ಕೃಷಿಯಲ್ಲಿ ಯಂತ್ರಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆ ಬೆಳೆಯಲು ಇಂತಹ ವಿಚಾರ ಸಂಕಿರಣಗಳು ಸಹಕಾರಿಯಾಗುತ್ತವೆ. ಕೃಷಿಯೊಂದಿಗೆ ಭೂಮಿಯ ಫಲವತ್ತತೆ ಕಾಪಾಡುವುದು ಮತ್ತು ನೀರಿನ ಮಿತಬಳಕೆ ಮಾಡಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ ಆದ್ದರಿಂದ ಸಾವಯವ ಕೃಷಿ ಕಡೆಗೆ ಒಲವು ವ್ಯಕ್ತಪಡಿಸುವಂತೆ ರೈತರಿಗೆ ಕರೆ ನೀಡಿದರು. 
 ಶ್ರೀಯುತ ವಿ.ವಿಜಯ್ ಕುಮಾರ್ ನಾಗನಾಳ, ಜಿಲ್ಲಾ ನಿರ್ದೇಶಕರು, ಶ್ರೀ ಕ್ಷೇ.ಧ.ಗ್ರಾ.ಯೋ(ರಿ.) ಮೈಸೂರು ಜಿಲ್ಲೆ. ರೈತರು ಪ್ರಕೃತಿದತ್ತವಾಗಿ ಸಿಗುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿಯಲ್ಲಿ ಲಾಭಗಳಿಸುವುದು, ಕೃಷಿಯಿಂದ ರೈತರು ವಿಮುಖರಾಗುವ ಸಂದರ್ಭದಲ್ಲಿ ಅವರಲ್ಲಿ ಕೃಷಿಯಲ್ಲಿ ಆಸಕ್ತಿ ಮೂಡಿಸಲು ಸರಕಾರ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಜೊತೆಜೊತೆಯಾಗಿ ಕೃಷಿಯಂತ್ರಧಾರೆ ಕಾರ್ಯಕ್ರಮ ಹಮ್ಮಿಕೊಂಡಿರುತ್ತದೆ. ಇದನ್ನು ಸದುಪಯೋಗಪಡಿಸಿಕೊಂಡು ಯುವ ಜನತೆ ಕೃಷಿಯಲ್ಲಿ ತೊಡಗುವುದರಿಂದ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಬಹುದು.  ರೈತರು ಸ್ವಾವಲಂಭಿಗಳು ತನ್ನ ಮನೆಗೆ ಬೇಕಾದ ಎಲ್ಲಾ ಆಹಾರ ಧಾನ್ಯಗಳನ್ನು ತಾವೇ ಉತ್ಪಾದನೆ ಮಾಡುವುದು, ಲಭ್ಯವಿರುವ ನೀರನ್ನು ಹಿತಮಿತವಾಗಿ ಬಳಸಿ ಕೃಷಿಯ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚು ಲಾಭಗಳಿಸಲು ಬೇಕಾದ ಮಾಹಿತಿ ಮಾರ್ಗದರ್ಶನಗಳನ್ನು ಪಡೆದುಕೊಂಡು ಅದನ್ನು ಅನುಷ್ಠಾನ ಮಾಡುವಂತೆ ತಿಳಿಸಿದರು. 
ಗೋಷ್ಠಿ:-01 “ಕೃಷಿ ಯಂತ್ರಧಾರೆ ಬಳಕೆ ಮತ್ತು ರೈತರ ನೋಂದಾವಣೆ”
ಸಂಪನ್ಮೂಲ ವ್ಯಕ್ತಿಗಳು: ಶ್ರೀನಾರಾಯಣ್, ಸಮನ್ವಯಾಧಿಕಾರಿ, ಸಿ,ಹೆಚ್.ಎಸ್.ಸಿ ಪ್ರಾದೇಶಿಕ ಕಛೇರಿ, ಮೈಸೂರು. ಕೃಷಿ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಕಳೆದ ಮೂರು ವರ್ಷದಿಂದ ರಾಜ್ಯದ 164 ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಪ್ರಾರಂಭಿಸಿ ಆ ಭಾಗದ ರೈತರಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಕಡಿಮೆ ದರದಲ್ಲಿ ಟ್ರ್ಯಾಕ್ಟರ್, ಕಲ್ಟೀವೇಟರ್, ರೋಟೊವೇಟರ್, ಪವರ್‍ಟಿಲ್ಲರ್ ಮತ್ತು ಭತ್ತ ಕಟಾವುಯಂತ್ರ ಇತ್ಯಾದಿ ಯಂತ್ರಗಳು ಬಾಡಿಗೆಗೆ ನೀಡುತ್ತಿದ್ದೇವೆ. ಕಾರ್ಯಕ್ರಮದ ನೀತಿ ನಿಯಮಗಳು ಮತ್ತು ಅದನ್ನು ಬಳಸಿಕೊಳ್ಳಲು ರೈತರು ಗಮನಿಸಬೇಕಾದ ಅಂಶಗಳ ಬಗ್ಗೆ ವಿವರವಾಗಿ ತಿಳಿಸಿದರು.ಗೋಷ್ಠಿ:-02 “ಬೀಜೋಪಚಾರದ ಮಹತ್ವ ಮತ್ತು ಸಸಿಮಡಿ ತಯಾರಿ”
ಸಂಪನ್ಮೂಲ ವ್ಯಕ್ತಿಗಳು: ಶ್ರೀ ಎನ್.ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ತಿ.ನರಸೀಪುರ.ಕೃಷಿ ಇಲಾಖೆಯಿಂದ ಸಿಗುವ ಗೊಬ್ಬರ, ಬಿತ್ತನೆ ಬೀಜಗಳು, ಮಣ್ಣಿನ ಪೌಷ್ಟಿಕತೆಗೆ ಬೇಕಾದ ಜಿಪ್ಸಂ, ಬೋರಾನ್, ಜಿಂಕ್‍ಸಲ್ಫೇಟ್ ಮುಂತಾದ ಪೋಷಕಾಂಶಗಳನ್ನು ಮಣ್ಣಿಗೆ ಕೊಡಬೇಕು ಎಂದು ತಿಳಿಸಿದರು. ಪ್ರಸ್ತುತ ಯಂತ್ರದ ಮೂಲಕ ಭತ್ತ ನಾಟಿ ಮಾಡುವ ರೈತರಿಗೆ ಸರಕಾರ ನೀಡುವ ಪ್ರೋತ್ಸಾಹಧನದ ಬಗ್ಗೆ ಮಾಹಿತಿ ನೀಡಿದರು. ಸಸಿಮಡಿ ತಯಾರಿ ಮತ್ತು ಬೀಜೋಪಚಾರದ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ರೈತರಿಗೆ ತೋರಿಸಿ ಕೊಟ್ಟರು. ರೈತರ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ ಫಸಲು ಭೀಮಾ ಯೋಜನೆ ಬಗ್ಗೆ ವಿವರಿಸಿದರು. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಅನುಭವ ಹಂಚಿಕೆ:- ಬನ್ನೂರು ನಾರಾಯಣ್, ಜಿಲ್ಲಾ ಯಂತ್ರಧಾರೆ ಸಮಿತಿ ಸದಸ್ಯರು. ಬಾಡಿಗೆ ಯಂತ್ರ ಕೇಂದ್ರ ಬಸವನಹಳ್ಳಿಯಲ್ಲಿ ಸ್ಥಾಪನೆಯಾಗಿರುವುದು ಇಲ್ಲಿನ ರೈತರಿಗೆ ತುಂಬಾ ಅನುಕೂಲಕರವಾಗಿದ್ದು, ನಿಯಮ ಪಾಲನೆಯೊಂದಿಗೆ ಪಾರದರ್ಶಕವಾಗಿ ನಡೆಯುತ್ತಿದೆ. ಈ ಕಾರ್ಯಕ್ಕೆ ನಮ್ಮ ಗ್ರಾಮಸ್ಥರು ಯಾವತ್ತು ಚಿರರುಣಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *