ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕು ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆ ಹಾಗೂ ಮೂಕಾಂಬಿಕ ಯುವಕ ಮಂಡಲ ಈದು ಇವರ ಸಂಯುಕ್ತ ಆಶ್ರಯದಲ್ಲಿ ಈದು ಗ್ರಾಮದಲ್ಲಿ ದಿನಾಂಕ 21.05.2017 ರಿಂದ 29.06.2017 ರವರೆಗೆ 2 ತಿಂಗಳು ಸಂಚಾರಿ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಯಿತು. ಇದರ ಪ್ರಯೋಜನವನ್ನು ಗ್ರಾಮದ ಸದಸ್ಯರುಗಳು ಉತ್ತಮ ರೀತಿಯಲ್ಲಿ ಪಡೆದುಕೊಂಡಿರುತ್ತಾರೆ. ಕಾರ್ಯಕ್ರಮದ ಸಮಾರೋಪ ಸಮಾರಂಭ ಕಾರ್ಯಕ್ರಮವು ದಿನಾಂಕ 29.06.17 ರಂದು ಜನಜಾಗೃತಿ ನಿಕಟಪೂರ್ವ ಅಧ್ಯಕ್ಷರು ಹಾಗೂ ಮುಜಿಲ್ನಾಯ ಅನುದಾನಿತ ಶಾಲೆಯ ಸಂಚಾಲಕರಾದ ಪ್ರೇಮ್ ಕುಮಾರ್ ಜೈನ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮುಖ್ಯ ಅತಿಥಿಗಳಾಗಿ ಬಿ.ಜೆ.ಪಿ ಜಿಲ್ಲಾ ಯುವ ಮೋರ್ಚಾ ಮಂಗಳೂರು ಇದರ ಅಧ್ಯಕ್ಷರಾದ ಹರೀಶ್ ಪೂಂಜ, ಶೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಶ್ಪತ್ರೆಯ ಕಾರ್ಯದರ್ಶಿಯಾದ ಶಿಶುಪಾಲ್ ಪೂವಾಣಿ, ಭಾರತೀಯ ಜೀವ ವಿಮಾ ನಿಗಮ ಇದರ ಶಾಖಾಧಿಕಾರಿ ಶ್ರೀ ಯೋಗೇಂದ್ರ ಆರ್ ಡಿ., ಅಭಿವೃದ್ಧಿ ಅಧಿಕಾರಿ ಶ್ರೀ ಎ ಜಯದೇವ, ಯೋಜನಾಧಿಕಾರಿ ಕೃಷ್ಣ ಟಿ, ವೈದ್ಯಧಿಕಾರಿ ಡಾ| ನಾರಾಯಣ ಪ್ರಭು, ಮಾಜಿ ಪಂಚಾಯತ್ ಸದಸ್ಯರಾದ ನಾರಾವಿ ವಸಂತ ಪಡ್ಡಾಯಪು ಹಾಗೂ ಕೇಂದ್ರ ಸಮಿತಿ ಅಧ್ಯಕ್ಷರಾದ ಜಯಕುಮಾರ್ ಜೈನ್, ಮೇಲ್ವಿಚಾರಕರಾದ ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು.
ಈದು ಗ್ರಾಮದಲ್ಲಿ 2 ತಿಂಗಳು ಸಂಚಾರಿ ಆಸ್ಪತ್ರೆಯಿಂದ ಉಚಿತ ವೈದ್ಯಕೀಯ ಶಿಬಿರ
