NewsWomen Empowerment

ಕೆಂಪಯ್ಯನಹುಂಡಿ ಗ್ರಾಮದಲ್ಲಿ ಜ್ಞಾನ ವಿಕಾಸ ಮಹಿಳಾ ವಾರ್ಷಿಕೋತ್ಸವ ಕಾರ್ಯಕ್ರಮ

ಜ್ಞಾನ ವಿಕಾಸ ಕಾರ್ಯಕ್ರಮ ತಾಲೂಕಿನಲ್ಲಿ ಪ್ರಾರಂಭವಾಗಿ 05 ವರ್ಷಗಳನ್ನು ಪೂರೈಸಿದ್ದು, ಇದರ ಪ್ರಯಕ್ತ ಮಹಿಳಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದಿನಾಂಕ 12.07.2017 ಗರ್ಗೇಶ್ವರಿ ವಲಯದ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಯಿತು. ಮಹಿಳೆಯರಿಗೆ ಆಟೋಟ ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಬಹುಮಾನ ವಿತರಿಸಲಾಯಿತು.

ಶ್ರೀಮತಿ ಸುನೀತಾಪ್ರಭು ಯೋಜನಾಧಿಕಾರಿಗಳು ಮಾತನಾಡಿ ಜ್ಞಾನ ವಿಕಾಸ ಕಾರ್ಯಕ್ರಮವು ಮಹಿಳೆಯರ ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಅವರಿಗೆ ಧೈರ್ಯ, ನಂಬಿಕೆ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇಂದಿನ ದಿನ ನೀವೆಲ್ಲಾ ಇಷ್ಟು ಬದಲಾವಣೆಯಾಗಲು ಕಾರಣ ಜ್ಞಾನ ವಿಕಾಸ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ನಿಮಗೆ ಒದಗಿಸಿಕೊಟ್ಟಿರುವ ಮಾತೃಶ್ರೀ ಹೇಮಾವತಿ ಅಮ್ಮನವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಾಲೂಕಿನಲ್ಲೇ ನಿಮ್ಮ ಜ್ಞಾನ ವಿಕಾಸ ಕೇಂದ್ರ ಉತ್ತಮವಾಗಿರಬೇಕೆಂದು ತಿಳಿಸಿದರು.

ಶ್ರೀಯುತ ರೇವಣ್ಣ ವಾರ್ತಭಾರತಿ ವರದಿಗಾರರುಕಾರ್ಯಕ್ರಮ ಉದ್ಘಾಟಿಸಿದರು. ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಹಣಕಾಸಿನ ವ್ಯವಹಾರವನ್ನು ನಡೆಸುವ ಸಂಘವಲ್ಲ ಇದರ ಜೊತೆ ಇತರ ಕಾರ್ಯಕ್ರಮಗಳಾದ ಕುಟುಂಬದ ಅಭಿವೃದ್ಧಿ ಹಾಗೂ ಗ್ರಾಮಗಳ ಅಭಿವೃದ್ಧಿ ಮಾಡಲು ಸಹಕಾರವಾಗುತ್ತಿದೆ. ಇಂತಹ ಒಳ್ಳೆಯ ಕಾರ್ಯಕ್ರಮಗಳ ಇನ್ನು ಹೆಚ್ಚು ಹೆಚ್ಚಾಗಿ ನಮ್ಮ ತಾಲೂಕಿನಲ್ಲಿ ಮಾಡುವುದರ ಮೂಲಕ ಮಹಿಳೆಯರ ಜ್ಞಾನವು ಹೆಚ್ಚಾಗಲಿ ಎಂದು ಕಾರ್ಯಕ್ರಮದ ಕುರಿತು ಶುಭಹಾರೈಸಿದರು.

ಶ್ರೀಯುತ ಗುಂಡಶೆಟ್ಟಿ ಗ್ರಾ.ಪಂ.ಸದಸ್ಯರುಮಾತನಾಡಿ – ಮಹಿಳೆಯರು ಮೊದಲು ಮನೆಯಿಂದ ಹೊರಬರುವುದೇ ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಮಹಿಳೆಯರ ಜ್ಞಾನವನ್ನು ಹೆಚ್ಚಿಸಲು ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿದ್ದು, ಅದರಲ್ಲಿ ವಿಶೇಷವಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿರುವ ಮಹಿಳೆಯರು ಜ್ಞಾನ ವಿಕಾಸ ಕಾರ್ಯಕ್ರಮಗಳ ಮೂಲಕ ಮುಂದೆ ಬರುತ್ತಿದ್ದು, ಕಾರ್ಯಕ್ರಮ ಅತ್ಯುತ್ತಮವಾಗಿರುವುದರ ಬಗ್ಗೆ ತಿಳಿಸಿದರು.

ವಸಂತ, ಸೇವಾಪ್ರತಿನಿಧಿ, ಕೆಂಪಯ್ಯನಹುಂಡಿ ಅನಿಸಿಕೆ ವ್ಯಕ್ತಪಡಿಸಿದರು. ಹಿಂದೆ ಮಹಿಳೆಯರು ಮನೆಗಳಿಗೆ ಸರ್ವೆ ಮಾಡಲು ಹೋದಾಗ ಮನೆಯಿಂದ ಹೊರಗೆ ಬಂದು ಮಾಹಿತಿ ಕೊಡಲು ಕೂಡ ತುಂಬಾ ಭಯಪಡುತ್ತಿದ್ದರು. ಆದರೆ 5 ವರ್ಷದಿಂದ ಈ ಜ್ಞಾನ ವಿಕಾಸ ಕಾರ್ಯಕ್ರಮವನ್ನು ನಾನು ವೀಕ್ಷಿಸುತ್ತಿದ್ದು, ದಿನೇ ದಿನೆ ಮಹಿಳೆಯರು ಎಲ್ಲಾ ರೀತಿಯಲ್ಲಿ ಮುಂದೆ ಬಂದಿದ್ದು, ಜೊತೆಯಲ್ಲಿ ಆಟೋಟ ಸ್ಪರ್ಧೆಯಲ್ಲಿ ಕೂಡ ತಮ್ಮ ವಯಸ್ಸನ್ನು ಮರೆತು ಸಕ್ರಿಯವಾಗಿ ಭಾಗವಹಿಸಿದ್ದನ್ನು ಕಂಡು ನನಗೆ ತುಂಬಾ ಹೆಮ್ಮಿಯಾಗುತ್ತದೆ. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಯುತ ಮಹದೇವಶೆಟ್ಟಿ ಊರಿನ ಮುಖಂಡರು, ಶ್ರೀಮತಿ ಆಶಾ.ಟಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ, ವಲಯದ ಮೇಲ್ವಿಚಾರಕರಾದ ಶ್ರೀಮತಿ ಮಮತ, ಸೇವಾಪ್ರತಿನಿಧಿ ವಸಂತ ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *