AgricultureCommunnity DevelopmentNews

ಉತ್ತರ ಕರ್ನಾಟಕ ಭಾಗಗಳಲ್ಲಿ ಗೇರು ಗಿಡಗಳ ನಾಟಿಗೆ ಚಾಲನೆ

ದೇಶದಲ್ಲಿ ಲಕ್ಷ ಎಕರೆಯಲ್ಲಿ ಗೇರು ನೆಟ್ಟರೂ ಅದಕ್ಕೆ ಬೇಡಿಕೆಯಿದೆ. ಇತರ ಬೆಳೆಗಳ ಫಸಲು ಹಾಗೂ ಆದಾಯ ಇಲ್ಲದೇ ಇರುವ ಎಪ್ರಿಲ್ ತಿಂಗಳಿನಲ್ಲಿ ಗೇರು ಫಲ ಹೊತ್ತು ನಿಂತಿರುತ್ತದೆ. ಕಾಸು ಒದಗಿಸಿಕೊಡುತ್ತದೆ. ಕಡಿಮೆ ಖರ್ಚಿನಲ್ಲಿ ಬೆಳೆಸಬಹುದಾದಂತಹ ಗೇರು ಕೃಷಿಗೆ ರೈತರು ಮುಂದಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ, ಕರ್ನಾಟಕ ಗೇರು ಉತ್ಪಾದಕ ಸಂಘ, ವಿಜಯಲಕ್ಷ್ಮಿ ಪ್ರತಿಷ್ಠಾನ ಮೂಡಬಿದ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ವೃಕ್ಷರಕ್ಷಾ ವಿಶ್ವ ರಕ್ಷಾ’ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಕಾದಲಗಾ ಗ್ರಾಮದ ಅನುರಾಧಾ ಅರುಣ ಘಾಡಿ ಹಾಗೂ ಗಂಗಾವಳಿ ಗ್ರಾಮದ ಪರಶುರಾಮ ವಿಠ್ಠಲ್ ಗೊಧೋಳಕರ್ ಇವರ ಜಮೀನಿನಲ್ಲಿ ಗೇರು ಗಿಡಗಳನ್ನು ನಾಟಿ ಮಾಡುವುದರ ಮೂಲಕ ವೃಕ್ಷರಕ್ಷಾ ವಿಶ್ವ ರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ದೇಶದಲ್ಲಿ ಲಕ್ಷ ಎಕರೆಯಲ್ಲಿ ಗೇರು ನೆಟ್ಟರೂ ಅದಕ್ಕೆ ಬೇಡಿಕೆಯಿದೆ. ಇತರ ಬೆಳೆಗಳ ಫಸಲು ಹಾಗೂ ಆದಾಯ ಇಲ್ಲದೇ ಇರುವ ಎಪ್ರಿಲ್ ತಿಂಗಳಿನಲ್ಲಿ ಗೇರು ಫಲ ಹೊತ್ತು ನಿಂತಿರುತ್ತದೆ. ಕಾಸು ಒದಗಿಸಿಕೊಡುತ್ತದೆ. ಕಡಿಮೆ ಖರ್ಚಿನಲ್ಲಿ ಬೆಳೆಸಬಹುದಾದಂತಹ ಗೇರು ಕೃಷಿಗೆ ರೈತರು ಮುಂದಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಪರ್ಯಾಯ ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ, ಕರ್ನಾಟಕ ಗೇರು ಉತ್ಪಾದಕ ಸಂಘ, ವಿಜಯಲಕ್ಷ್ಮಿ ಪ್ರತಿಷ್ಠಾನ ಮೂಡಬಿದ್ರೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ‘ವೃಕ್ಷರಕ್ಷಾ ವಿಶ್ವ ರಕ್ಷಾ’ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಕಾದಲಗಾ ಗ್ರಾಮದ ಅನುರಾಧಾ ಅರುಣ ಘಾಡಿ ಹಾಗೂ ಗಂಗಾವಳಿ ಗ್ರಾಮದ ಪರಶುರಾಮ ವಿಠ್ಠಲ್ ಗೊಧೋಳಕರ್ ಇವರ ಜಮೀನಿನಲ್ಲಿ ಗೇರು ಗಿಡಗಳನ್ನು ನಾಟಿ ಮಾಡುವುದರ ಮೂಲಕ ವೃಕ್ಷರಕ್ಷಾ ವಿಶ್ವ ರಕ್ಷಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.   

 ವಿಶ್ವದ ಬಹುದೊಡ್ಡ ಚಿಂತೆ ಪರಿಸರ. ಪರಿಸರದಲ್ಲಿ ಏರುಪೇರು ಗಮನಿಸುತ್ತಿದ್ದೇವೆ. ಮಳೆ ಕಡಿಮೆಯಾಗುತ್ತಿದೆ. ಬಿಸಿ ಏರುತ್ತಿದೆ. ಮಳೆ ಬಂದರೆ ಅತಿವೃಷ್ಟಿ ಕಾಡುತ್ತಿದೆ. ಒಂದು ಕಡೆ ಕಡಿಮೆ ಮಳೆ ಇನ್ನೊಂದು ಕಡೆ ಅತಿವೃಷ್ಠಿ ಈ ರೀತಿಯ ಪರಿಸರದ ಅಸಮತೋಲನ ಉಂಟಾಗುತ್ತದೆ. ಇದನ್ನು ಕಡಿಮೆ ಮಾಡಲು ವೃಕ್ಷ ಬೆಳೆಸುವತ್ತ ಚಿತ್ತ ಹರಿಸಬೇಕು. ಆಯಾ ವಾತಾವರಣಕ್ಕೆ,  ಮಣ್ಣಿಗೆ ಹೊಂದಿಕೊಳ್ಳುವಂತಹ ಕೃಷಿ ಕೈಗೊಳ್ಳಬೇಕು. ಉತ್ತರ ಕರ್ನಾಟಕದ ಖಾನಾಪುರ ಭಾಗಗಳಲ್ಲಿ ಗೋಡಂಬಿ ವೃಕ್ಷಕ್ಕೆ ಪೂರಕವಾದ ವಾತಾವರಣವಿದೆ. ಒಳ್ಳೆಯ ಮಣ್ಣು ಇಲ್ಲಿದೆ. ಇಲ್ಲಿ ಫಸಲು ಹಾಗೂ ಗೋಡಂಬಿಯ ಗಾತ್ರ ಚೆನ್ನಾಗಿ ಬರುತ್ತದೆ ಎಂದು ಗೋಡಂಬಿ ಬೆಳೆದ ರೈತರು ಹೇಳುತ್ತಿದ್ದಾರೆ. ಹಾಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಗೇರು ಗಿಡಗಳನ್ನು  ಬೆಳೆಸಲು ಆದ್ಯತೆ ನೀಡುತ್ತಿದ್ದೇವೆ. ನಮ್ಮಲ್ಲಿ ಮೂವತ್ತೇಳು ಲಕ್ಷ ಸದಸ್ಯರಿದ್ದಾರೆ ಪ್ರತಿಯೊಬ್ಬರೂ ಐದು ಗಿಡಗಳನ್ನು ನೆಟ್ಟರೂ ಒಂದುವರೆ ಕೋಟಿಗೂ ಅಧಿಕ ಗಿಡಗಳನ್ನು ನೆಟ್ಟಂತಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರೂ  ಸಂಕಲ್ಪ ತೊಡಬೇಕು. ಮುಂದಿನ ಹದಿನೈದು ವರ್ಷಗಳಲ್ಲಿ ನೀರು ಇಂಗಿಸಿ, ಮರಗಳನ್ನು ಬೆಳೆಸಿ ಯತೇಚ್ಚ ನೀರು ಸಿಗುವಂತೆ ಮಾಡಿ ಭೂಮಿಯನ್ನು ಸಮೃದ್ದವಾಗಿರುವಂತೆ ಮಾಡೋಣ ಎಂದು ಎಂದು ಕರೆಕೊಟ್ಟರು.    ಲಕ್ಷ್ಮೀ ಪ್ರತಿಷ್ಠಾನದ ಅನಂತ ಕ್ರಷ್ಣ ರಾವ್ ಇವರು ಮಾತನಾಡಿ ನಮ್ಮ ರಾಜ್ಯದಲ್ಲಿ ನಾಲ್ಕು ನೂರಕ್ಕೂ ಅಧಿಕ ಗೇರು ಉದ್ದಿಮೆಗಳಿವೆ. ಇವುಗಳಿಗೆ ಪ್ರತೀ ವರ್ಷ ಎರಡುವರೆಯಿಂದ ಮೂರು ಸಾವಿರ ಟನ್ ಗೇರು ಬೀಜಗಳ ಅಗತ್ಯವಿದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ 50-60 ಟನ್ ಮಾತ್ರ ಉತ್ಪಾದನೆಯಾಗುತ್ತಿದೆ. ಉದ್ದಿಮೆಗಳಿಗೆ ಅಗತ್ಯವಿರುವ 25% ಮಾತ್ರ ನಮ್ಮಲ್ಲಿ ಉತ್ಪಾದನೆಯಾಗುತ್ತಿದ್ದು ಅಗತ್ಯವಿರುವ ಉಳಿಕೆ ಗೇರು ಬೀಜಗಳನ್ನು ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಉತ್ಪಾದನೆ ಹೆಚ್ಚಿಸಲು ನಮ್ಮ ಸಂಸ್ಥೆಯಿಂದ ಪ್ರತೀ ವರ್ಷ ಎರಡರಿಂದ ಮೂರು ಸಾವಿರ ಗಿಡ ವಿತರಿಸಲಾಗುತ್ತಿತ್ತು ಆದರೆ ಇದರಿಂದ ಉತ್ಪಾದನೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿರಲಿಲ್ಲ. ಗಿಡಗಳನ್ನು ವ್ಯಾಪಕವಾಗಿ ವಿತರಿಸಿ ಉತ್ಪಾದನೆ ಮಟ್ಟ ಜಾಸ್ತಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಉಡುಪಿಯ ಪೇಜಾವರ ಶ್ರೀಗಳ ಐದನೆಯ ಪರ್ಯಾಯ ರಾಜ ದರ್ಬಾರ ಸಭೆಯಲ್ಲಿ ನೀರ್ಣಯಿಸಿದಂತೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಹಕಾರದಿಂದ ಗೇರು ಕ್ಷೇತ್ರ ವಿಸ್ತರಣೆಯಲ್ಲಿ ತೊಡಗಿದ್ದೇವೆ. ಕಳೆದ ವರ್ಷ 52,000 ಗಿಡಗಳನ್ನು ವಿತರಿಸಲಾಗಿತ್ತು, ಈ ವರ್ಷ ಐದು ಲಕ್ಷ ಗೇರು ಗಿಡಗಳನ್ನು  ವಿತರಿಸುವ ಗುರಿ ಹೊಂದಿದ್ದೇವೆ. ನವನೀತ ನರ್ಸರಿಯಿಂದ ಉತ್ತಮ ಗಿಡಗಳನ್ನು ಆಯ್ದು ರೈತರಿಗೆ ಒದಗಿಸಿಕೊಡುತ್ತಿದ್ದೇವೆ ಎಂದರು.

ಖಾನಾಪುರ ಶಾಸಕರಾದ ಅರವಿಂದ ಪಾಟೀಲ್ ಮಾತನಾಡಿ ಧರ್ಮಸ್ಥಳ ಸಂಸ್ಥೆಯವರು ಉಚಿತವಾಗಿ ಗಿಡಗಳನ್ನು ಕೊಡುತ್ತಾರೆಂದು ನಿರ್ಲಕ್ಷ ತಾಳಬೇಡಿ. ಕಳೆದ ಮೂರು ವರ್ಷಗಳಲ್ಲಿ ನೀರಿನ ಕೊರತೆಯ ಬರವನ್ನು ನಾವು ಸಾಕಷ್ಟು ಅನುಭವಿಸಿದ್ದೇವೆ. ಮುಂದಿನ ದಿನಗಳು ಸುಂದರವಾಗಿರಬೇಕೆಂದರೆ ಗಿಡ ನಾಟಿಗೆ ಹೆಚ್ಚಿನ ಕಾಳಜಿ ವಹಿಸಬೇಕು. ನಾವು ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. ಪೇಜಾವರ ಮಠ ಉಡುಪಿಯ ಸಂಪರ್ಕಾಧಿಕಾರಿ ವಾಸುದೇವ್ ಭಟ್, ಕರ್ನಾಟಕ ಗೇರು ಉತ್ಪಾದಕರ ಸಂಘದ ಅದ್ಯಕ್ಷರಾದ ಗಣೇಶ ಕಾಮತ್, ಕೃಷಿ ಇಲಾಖೆಯ ಪ್ರಭುಲಿಂಗ ಡಿ ಎಸ್, ಪ್ರಾದೇಶಿಕ ನಿರ್ದೇಶಕರಾದ ಜಯಶಂಕರ್ ಶರ್ಮಾ, ನಿರ್ದೇಶಕರಾದ ಶೀನಪ್ಪ ಎಮ್, ದಿನೇಶ ಎಮ್, ಪ್ರಹ್ಲಾದ್ ರೇಮಾಣಿ, ಪ್ರಮೋದ್ ಕೋಚೇರಿ, ವಿಠ್ಠಲ್ ಹಲಗೇರ್ ಕರ್, ಕೃಷಿ ಅಧಿಕಾರಿ ಸತೀಶ್ ಹಾದಿಮನಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *