NewsTrainingWomen Empowerment

ಜ್ಞಾನ ವಿಕಾಸ ಮಹಿಳಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ಗರ್ಗೇಶ್ವರಿ ವಲಯದ ಕುಪ್ಯಾ ಗ್ರಾಮದಲ್ಲಿದಿನಾಂಕ:14.07.2017ರಂದು ಜ್ಞಾನ ವಿಕಾಸ ಮಹಿಳೆಯರಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ಏರ್ಪಡಿಸಿ ಅದರಲ್ಲಿ ಡೆಂಗ್ಯೂವಿನ ಗುಣಲಕ್ಷಣಗಳು ಅದರ ಪರಿಣಾಮಗಳ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಶ್ರೀಮತಿ ಜಯಲಕ್ಷ್ಮಮ್ಮ ಗ್ರಾ.ಪಂ.ಅಧ್ಯಕ್ಷರು ಕುಪ್ಯಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶುಭ ಹಾರೈಸಿದರು. ಶ್ರೀಯುತ ಡಾ. ಚಂದ್ರಶೇಖರ್ ಪ್ರಾಥಮಿಕ ಆರೋಗ್ಯದ ವೈದ್ಯಾಧಿಕಾರಿಗಳು ಉದ್ಘಾಟಿಸಿ ಡೆಂಗ್ಯೂ ಎಂದರೆ ಏನು..? ಡೆಂಗ್ಯೂ ಹೇಗೆ ಹರಡುತ್ತದೆ, ಮತ್ತು ಇದರ ಗುಣಲಕ್ಷಣಗಳು, ಡೆಂಗ್ಯೂ ಜ್ವರ ಬಂದಾಗ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು, ಇದನ್ನು ತಡೆಗಟ್ಟಲು ಮನೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಇವುಗಳ ಬಗ್ಗೆ ಸಂಪೂರ್ಣವಾಗಿ ಸವಿಸ್ತಾರವಾಗಿ ಮಾಹಿತಿಯನ್ನು ಸದಸ್ಯರಿಗೆ ನೀಡಿದರು.

ಶ್ರೀಯುತ ಪ್ರಭುಸ್ವಾಮಿ ಜಿಲ್ಲಾ ಜನಜಾಗೃತಿ ಸದಸ್ಯರು ಜ್ಞಾನ ವಿಕಾಸ ಕಾರ್ಯಕ್ರಮದ ಬಗ್ಗೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಗ್ರಾಮಾಭಿವೃದ್ಧಿ ಯೋಜನೆಯು ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರನ್ನು ಜಾಗೃತಿಗೊಳಿಸುತ್ತಿದೆ. ಇದರ ಸದುಪಯೋಗ ಪಡಕೊಳ್ಳುವಂತೆ ತಿಳಿಸಿದರು.

ಶ್ರೀಮತಿ ಸುನೀತಾಪ್ರಭು, ಯೋಜನಾಧಿಕಾರಿ, ಜ್ಞಾನ ವಿಕಾಸ ಕಾರ್ಯಕ್ರಮವು ತಿ.ನರಸೀಪುರ ತಾಲೂಕಿಗೆ ಬಂದು 5ವರ್ಷ ಕಳೆದಿದ್ದು, ದುರ್ಬಲ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣೆಯ ಜಾಣ್ಮೆ, ಹಣಕಾಸು ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣ, ಪೌಷ್ಠಿಕ ಆಹಾರ ಮತ್ತು ವೈಯಕ್ತಿಕ ಸ್ವಚ್ಛತೆ, ಶುಚಿತ್ವ, ಸ್ವ-ಉದ್ಯೋಗ, ನಾಗರೀಕ ಸೌಲಭ್ಯ ಬಳಕೆ ಮುಂತಾದ ಗುರಿಗಳನ್ನು ಇರಿಸಿಕೊಂಡು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಡೆಂಗ್ಯೂ ಜ್ವರ ಅತ್ಯಧಿಕವಾಗಿದ್ದು, ಈ ಬಗ್ಗೆ ವೈಯಕ್ತಿಕ ಸ್ವಚ್ಛತೆ, ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ, ಅಲ್ಲಿಲ್ಲಿ ನೀರು ನಿಲ್ಲದ ಹಾಗೆ, ರಾತ್ರಿ ಸಮಯ ಮಲಗುವ ಮುನ್ನ ಸೊಳ್ಳೆ ಪರದೆ ಬಳಸುವಂತೆ ಎಚ್ಚರಿಕೆ ನೀಡಿದರು.

ಕಾರ್ಯಕ್ರಮವನ್ನು ಕಬ್ಬುಬೆಳೆಗಾರರ ಉಪಾಧ್ಯಕ್ಷರು ಶ್ರೀಜವಯ್ಯ, ಒಕ್ಕೂಟದ ಅಧ್ಯಕ್ಷರಾದ ಪುಟ್ಟರಾಜಮ್ಮ ಹೀಗೆ ಮುಂತಾದವರು ಪಾಲ್ಗೊಂಡಿದ್ದರು. ವಲಯದ ಮೇಲ್ವಿಚಾರಕರಾದ ಮಮತ ಸ್ವಾಗತಿಸಿ, ಸೇವಾಪ್ರತಿನಿಧಿ ಪದ್ಮಾವತಿ ವಂದಿಸಿದರೆ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ.ಟಿರವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *