ಕಾರ್ಕಳ : ಜಿಲ್ಲಾ ಪಂಚಾಯತ ಉಡುಪಿ, ಕೃಷಿ ಇಲಾಖೆ ಕಾರ್ಕಳ ಮತ್ತು ಶ್ರೀ.ಕ್ಷೇ.ಧ.ಗ್ರಾ.ಸಂಸ್ಥೆಯ ತರಬೇತಿ ಸಂಸ್ಥೆಯ ಜಂಟಿ ಆಶ್ರಯದಲ್ಲಿ ರೈತ/ರೈತ ಮಹಿಳೆಯರ 1 ದಿನದ ಸಾಂಸ್ಥಿಕ ತರಬೇತಿಯನ್ನು ನಾಡ್ಪಾಲದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಾಡ್ಪಾಲ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಜಲಜಾ ಪೂಜಾರಿ, ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ನುಡಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಶೋಭಾ ಪೂಜಾರಿ ಕು, ಸುಮಲತಾ ಪೂಜಾರಿ, ವಿಜಯ ಶೆಟ್ಟಿ ಹಾಗೂ ತರಬೇತಿ ಕೇಂದ್ರದ ಉಪನ್ಯಾಸಕರಾದ ಶ್ರೀ ಗುರುಬಸಪ್ಪ ಹೆಬ್ರಿ ವಯಲದ ಮೇಲ್ವಿಚಾರಕರಾದ ಶ್ರೀ ಹರೀಶ ಸೇವಾಪ್ರತಿನಿಧಿಯಾದ ಶ್ರೀ ಸಂತೋಷ ಶೆಟ್ಟಿ ರೈತ/ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.