News

ಸಂಘಗಳ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ದಿನಾಂಕ 06.08.2017 ರಂದು ಹಿರಿಯ ಪ್ರಾಥಮಿಕ ಶಾಲೆ, ಬಿ.ಬೆಟ್ಟಹಳ್ಳಿಯಲ್ಲಿ ಯೋಜನೆಯ ಪಾಲುದಾರರಿಗೆ ತಮ್ಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲು ಅಗತ್ಯವಿರುವ ಹಣವನ್ನು ದೊರಕಿಸಿಕೊಡಲು ಮತ್ತು ಅವರಲ್ಲಿ ಉಳಿತಾಯ ಮತ್ತು ಆರ್ಥಿಕ ವ್ಯವಹಾರದ ಶಿಸ್ತನ್ನು ಮೂಡಿಸಲು ಯೋಜನೆಯು ತಮ್ಮ ಪ್ರಗತಿನಿಧಿ ಕಾರ್ಯಕ್ರಮದ ಮುಖೇನ ಸಹಾಯ ಹಸ್ತ ನೀಡುತ್ತಿದೆ. ಈ ಉದ್ದೇಶವನ್ನು ಅರ್ಥ ಮಾಡಿಕೊಂಡ ಸಂಘಗಳಲ್ಲಿ ಬಿ.ಬೆಟ್ಟಹಳ್ಳಿ ಸಂಘಗಳು ಸೇರಿದ್ದು, ಇದರ ಸವಿನೆನಪಿನಲ್ಲಿ 05 ವರ್ಷದ ವಾರ್ಷಿಕೋತ್ಸವ ನಡೆಸಲಾಯಿತು.

ಶ್ರೀಮತಿ ಸುನೀತಾಪ್ರಭು, ಯೋಜನಾಧಿಕಾರಿ ಉದ್ಘಾಟಿಸಿ ತಾಲೂಕಿನಾದ್ಯಂತ 2800 ಸಂಘಗಳಲ್ಲಿ 33 ಸಾವಿರ ಫಲಾನುಭವಿ ಸದಸ್ಯರಿದ್ದಾರೆ. ಕುಟುಂಬದ ಪ್ರಗತಿಗೆ ನಿರಂತರ ತಿಳುವಳಿಕೆ ಕೊಡುವ ಕೆಲಸ ಶ್ರೀ ಕ್ಷೇತ್ರದ ಯೋಜನೆ ಮಾಡುತ್ತಿದೆ. ಪ್ರಸ್ತುತ ಬಿ.ಬೆಟ್ಟಹಳ್ಳಿಯಲ್ಲಿ 22 ಸಂಘಗಳಿದ್ದು, 5 ವರ್ಷಗಳಿಂದ ಉತ್ತಮ ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಇದುವರೆಗೆ ಬಿ.ಬೆಟ್ಟಹಳ್ಳಿ ಕಾರ್ಯಕ್ಷೇತ್ರಕ್ಕೆ ಸುಮಾರು 2 ಕೋಟಿ ಪ್ರಗತಿನಿಧಿ ಸಾಲ ನೀಡಿದ್ದು, ಶೇಕಡಾ 100% ಮರುಪಾವತಿ ಆಗುತ್ತಿದೆ. ಗ್ರಾಮದಲ್ಲಿ 6 ಫಲಾನುಭವಿಗೆ ತಿಂಗಳ ಮಾಸಾಶನ ಯೋಜನೆಯಿಂದ ನೀಡಲಾಗುತ್ತಿದೆ. ಜ್ಞಾನ ವಿಕಾಸ ಕೇಂದ್ರದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ, ರೈತರಿಗೆ ಅಧ್ಯಯನ ಪ್ರವಾಸ, ಒಕ್ಕೂಟದ ಸದಸ್ಯರಿಗೆ ತರಬೇತಿ ಮುಂತಾದ ಕಾರ್ಯಕ್ರಮಗಳು ನಿರಂತವಾಗಿ 5 ವರ್ಷಗಳಿಂದ ನಡೆಸುತ್ತಾ ಬಂದಿದ್ದು, 5ವರ್ಷ ಪೂರ್ತಿಗೊಂಡ ಸಂಘಗಳು ಸ್ವತಂತ್ರವಾಗಿ ಸಂಘದ ವ್ಯವಹಾರ ನಡೆಸುವ ಜ್ಞಾನ ಪಡೆದುಕೊಳ್ಳಬೇಕು. ವಾರದ ಸಭೆ, ವಾರದ ಸಂಗ್ರಹಣೆ, ತಪ್ಪದೇ ಮಾಡುವುದು ಸಂಘದ ಉತ್ತಮ ಪ್ರಗತಿಗೆ ಅನುಕೂಲ ಎಂದು ತಿಳಿಸಿದರು. ವಾರ್ಷಿಕೋತ್ಸವಕ್ಕೆ ಶುಭಕೋರಿದರು.
ಶ್ರೀನಾಗಸುಂದರ್ ಮುಖ್ಯೋಪಧ್ಯಾಯರು ಹಿರಿಯ ಪ್ರಾಥಮಿಕ ಶಾಲೆ, ಬಿ.ಬೆಟ್ಟಹಳ್ಳಿ ಮಾತನಾಡಿ ಒಂದು ಕುಟುಂಬದ ಪ್ರಗತಿಗೆ ಮಹಿಳೆಯ ಪಾತ್ರ ಪ್ರಮುಖ ಈ ಯೋಜನೆ ಕುಟುಂಬದ ಪ್ರಗತಿಗೆ ಒತ್ತುಕೊಟ್ಟು, ಮಹಿಳೆಯರನ್ನು ಸ್ವಸಹಾಯ ಸಂಘಗಳ ಮೂಲಕ ಪ್ರೇರೇಪಿಸುವುದು, ವ್ಯವಹಾರ ನಡೆಸಲು ಸಹಕರಿಸುವುದು ಉತ್ತಮಕಾರ್ಯ ಎಂದು ಸಂಘಗಳ ಸದಸ್ಯರಿಗೆ ಶುಭ ಹಾರೈಸಿದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಸವಿತಾಜಯರಾಮ್ ಶುಭಹಾರೈಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾರವರು ಡೆಂಗ್ಯೂ ಜ್ವರದ ಬಗ್ಗೆ ಎಚ್ಚರವಹಿಸುವಂತೆ, ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.

ಒಕ್ಕೂಟದ ಅಧ್ಯಕ್ಷರಾದ ಲತಾರವರು ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯರಾದ ರಂಗಸ್ವಾಮಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಸುಬ್ಬೇಗೌಡ, ಡೈರಿ ಅಧ್ಯಕ್ಷರಾದ ನಾಗೇಶ್, ಮೇಲ್ವಿಚಾರಕರಾದ ಯೋಗೀಶ್.ಕೆ, ಸೇವಾಪ್ರತಿನಿಧಿ ಮಂಗಳಮ್ಮ, ಸವಿತ, ಒಕ್ಕೂಟದ ಪದಾಧಿಕಾರಿಗಳು, ಸಂಘಗಳ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *