Communnity DevelopmentNews

ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮ

71 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದಾದ್ಯಂತ ಶ್ರದ್ಧಾ ಕೇಂದ್ರಗಳ ಸ್ವಚ್ಚತಾ ಕಾರ್ಯಕ್ರಮಗಳನ್ನು ಊರಿನ ಗಣ್ಯರ, ಸಂಘ ಸಂಸ್ಥೆಗಳ, ಸಂಘದ ಸದಸ್ಯರ ಸಹಕಾರದಿಂದ ನಡೆಸಲಾಗುತ್ತಿದ್ದು, ದಿನಾಂಕ 13.08.17 ರಂದು ಕಾರ್ಕಳ ತಾಲೂಕಿನ ನೀರೆ ಬಿ ಒಕ್ಕೂಟದ ನಾಗಬ್ರಹ್ಮ ದೇವಸ್ಥಾನದ ಸುತ್ತಮುತ್ತಲಿನ ಪರಿಸರವನ್ನು ಸ್ವಚತೆಯನ್ನು ಮಾಡಲಾಯಿತು. ದೇವಸ್ಥಾನದಲ್ಲಿ ಈ ಸಂಕ್ರಾಂತಿಯಿಂದ ಮುಂದಿನ ಸಂಕ್ರಾಂತಿವರೆಗೆ ಪ್ರತಿ ದಿನ 1 ತಿಂಗಳು ವಿಶೇಷ ಪೂಜೆ ಭಜನಾ ಕಾರ್ಯಕ್ರಮವಿದ್ದು, ದೇವಸ್ಥಾನದ ಸ್ವಚ್ಚಗೊಳಿಸಿರುವುದರಿಂದ ಜನರಲ್ಲಿ ಧಾರ್ಮಿಕ ಪ್ರಜ್ನೆ ಮೂಡಿಸುವಲ್ಲಿ ಸಹಕಾರಿಯಾಗಿದೆ. ಪೂಜ್ಯರ ಈ ವಿಶೇಷ ಸ್ವಚ್ಚತಾ ಕಾರ್ಯಕ್ರಮವು ಜನರಲ್ಲಿ ಸ್ವಚ್ಚತೆಯ ಬಗ್ಗೆ ನಿರಂತರತೆಯನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸುಭಾಶ್ ಶೆಟ್ಟಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಒಕ್ಕೂಟದ ಅಧ್ಯಕ್ಷರಾದ ಸಂದೇಶ್ ಶೆಟ್ಟಿ, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರಾದ ಪ್ರವೀಣ್, ಸ್ವಸಹಾಯ ಸಂಘದ ಸದಸ್ಯರು ಹಾಗೂ ಸೇವಾಪ್ರತಿನಿಧಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *