Communnity DevelopmentNews

ಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟನೆ

ದಿನಾಂಕ: 16.08.2017 ರಂದು ಗದ್ದನಕೇರಿ ವಲಯದ ಎಸ್ ಆರ್ ಎನ್ ಕಲಾ & ಎಂ ಬಿ ಎಸ್ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟ ಸಾಂಸ್ಕತಿಕ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಬಾಗಲಕೋಟ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.

ಇಂದು ಯುವಜನತೆ ಮಾದಕ ದ್ರವ್ಯ & ಮದ್ಯಪಾನ ದಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಸಮಾಜ ಬೆಳವಣಿಗೆಗಳಲ್ಲಿ ಬಹು ದೊಡ್ಡ ಹೊಡೆತ ಉಂಟಾಗುತ್ತಿದೆ. ದೇಶದ ಪ್ರಗತಿಗೆ ಪ್ರಮುಖವಾಗಿ ಸ್ವಸ್ಥ ಜನರ ಅವಶ್ಯಕತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಪಿ ಗಂಗಾಧರ ರೈ ರವರು ನುಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ದುಶ್ಚಟಗಳ ವಿರುದ್ಧ ಶಾಲಾ ಕಾಲೇಜುಗಳಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಬಾಗಲಕೋಟೆಯ ಎಸ್ ಆರ್ ನರಸಾಪೂರ ಕಲಾ& ಎಂ ಬಿ ಶಿರೂರ ಮಹಾವಿದ್ಯಾಲಯದಲ್ಲಿ ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮೂಲಕ ಶಾಲಾ ಕಾಲೇಜುಗಳಲ್ಲಿ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಅಧ್ಯಕ್ಷತೆಯನ್ನು ವಿದ್ಯಾಲಯದ ಪ್ರಾಚಾರ್ಯರಾದ ಡಾ|| ಜಿ ಬಿ ಕುಲಕರ್ಣಿ ರವರು ವಹಿಸಿದರು. ಶಿಭಿರಾಧಿಕಾರಿ ನಂದ ಕುಮಾರ ಮಾಹಿತಿ ನೀಡಿದರು. ಶ್ರೀಮತಿ ಆರ್ ಆರ್ ದೇಶಮುಖ ರವರು ಸ್ವಾಗತಿಸಿದರು. ಶ್ರೀಮತಿ ವಿಜಯಲಕ್ಷ್ಮೀ ಮಠ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಉಪನ್ಯಾಸಕವೃಂದ ಗ್ರಾಮಾಭಿವೃದ್ಧಿ ಯೋಜನೆ ಬಾಗಲಕೋಟಯ ಜಿಲ್ಲಾ ನಿರ್ದೇಶಕರಾದ ಶ್ರೀ ಶಂಕರಶೆಟ್ಟಿ ಎಂ, ಮಂಜುನಾಥ್ ಬಿ ಯೋಜನಾಧಿಕಾರಿ, ಜೆ ವಿ ಕೆ ಸಮನ್ವಯಾಧಿಕಾರಿ ಜಯಶ್ರೀ ಎಸ್ ಎಂ, ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ರವರು ಉಪಸ್ಥಿತರಿದ್ದರು.

ಭವ್ಯ ಭಾರತ ನಿರ್ಮಾಣದಲ್ಲಿ ದುಶ್ಚಟ ಮುಕ್ತ ಯುವಕರ ಪಾತ್ರ ದೊಡ್ಡದು

ದುಶ್ಚಟ ಮುಕ್ತ ಸಮಾಜವೇ ನಮ್ಮ ದೇಶದ ಅಭಿವೃದ್ಧಿಗೆ ಮೂಲ ಮಂತ್ರ. ಈ ಕನಸನ್ನು ಮಹಾತ್ಮ ಗಾಂಧೀಜಿಯವರು ಕಂಡರು. ಆದರೂ ಸ್ವಾತಂತ್ರ ದೊರೆತು ಇಷ್ಟು ವರ್ಷವಾದರೂ ನಾವುಗಳು ದುಶ್ಚಟ ಮುಕ್ತ, ಮದ್ಯಮುಕ್ತ ಸಮಾಜವನ್ನಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಸಮಾಜದ ಸ್ವಾಸ್ಥ್ಯಕ್ಕಾಗಿ ವಿದ್ಯಾರ್ಥಿ ದೆಶೆಯಲ್ಲಿಯೇ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಹೈದ್ರಾಬಾದ್ ಕರ್ನಾಟಕ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಪಿ ಗಂಗಾಧರ ರೈ ರವರು ನುಡಿದರು. ಅವರು ಶಿರೂರಿನ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಕಾಲೇಜು ಶಿರೂರ ಇಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ಅನೇಕ ಕಾರ್ಯಕ್ರಮ ನಡೆಸಲಾಗುತ್ತಿದ್ದು ಈ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಶ್ಚಟದ ಕುರಿತು ಮಾಹಿತಿ ನೀಡುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಗುತ್ತದೆ. ಶಿಬಿರಾಧಿಕಾರಿ ನಂದಕುಮಾರ, ಬಾಗಲಕೋಟ ನಿರ್ದೇಶಕರಾದ ಶ್ರೀ ಶಂಕರ ಶೆಟ್ಟಿ ಎಂ, ಯೋಜನಾಧಿಕಾರಿ ಮಂಜುನಾಥ್ ಬಿ. ಗಣ್ಯರಾದ ಬಸವರಾಜ ಬಿಲ್ಲಾರ, ಕಲ್ಲಪ್ಪ ಭಗವತಿ, ಸೇವಾಪ್ರತಿನಿಧಿಯಾದ ಚಿನ್ನಮ್ಮ , ಶಾರದಾ ಮಾಚಾ ಮುಂತಾದವರು ಭಾಗವಹಿಸಿದ್ದರು. ಕಾಲೇಜಿನ ಮುಖ್ಯ ಗುರುಗಳಾದ ಶ್ರೀಮತಿ ಎಲ್ ಟಿ ಪೂಜಾರಿ ಯವರು ಅಧ್ಯಕ್ಷತೆ ವಹಿಸಿದ್ದರು. ಮೇಲ್ವಿಚಾರಕರಾದ ಶ್ರೀಕಾಂತ ಆರ್ ಎಂ ನಿರೂಪಿಸಿದರು. ಸೇವಾಪ್ರತಿನಿಧಿ ಬಸಮ್ಮ ವಂದಿಸಿದರು.

Leave a Reply

Your email address will not be published. Required fields are marked *