NewsNews on Groups

ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾರ್ಷಿಕೋತ್ಸವ ಮತ್ತು ಇನ್ನಿತರ ಕಾರ್ಯಕ್ರಮಗಳು

ಸಂಕನೂರು ಸ್ಪೂರ್ತಿ  ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾರ್ಷಿಕೋತ್ಸವ & ವರಮಾಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಮಾನ್ಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಗಂಗಧರ್ ರೈ ಹಾಗೂ ಶ್ರೀ ಚಂದ್ರಶೇಖರ ಶಾಸ್ತ್ರಿಗಳು ಉದ್ಘಾಟನೆ ಮಾಡಿ ಮಾತನಾಡಿದರು, ಮಹಿಳೆಯರು ಧರ್ಮಸ್ಥಳದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿವರ್ತನೆ ಆಗುತ್ತಿದ್ದಾರೆ ಹಾಗೂ ಊರಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಭಾಗವಹಿಸುತ್ತಿರುವ ಸಂತೋಷವಾದ ವಿಷಯವಾಗಿದೆ ಎಂದು ಮಾತನಾಡಿದರು. ಮಹಿಳೆಯರಿಗಾಗಿ ಬಸ್ಟಾಂಡ್ ಬ್ಲಾಸ್ಟ್, ಮ್ಯೂಜಿಕಲ್ ಚೇರ್, ರಂಗೋಲಿ, ಜನಪದ ಹಾಡು, ಇನ್ನಿತರ ಸ್ಪರ್ದೆಗಳನ್ನು ಎರ್ಪಡಿಸಿ ಬಹುಮಾನಗಳನ್ನು ನೀಡಲಾಯಿತು.ಶ್ರೀ ಗಂಗಾಧರ್ ರೈ ,ಪ್ರಾದೇಶಿಕ ನಿರ್ದೇಶಕರು, ಕೊಪ್ಪಳ ತಾಲೂಕಿನ ಯೋಜನಾಧಿಕಾರಿಯವರು ಶ್ರೀ ರಾಜೇಶ್, ಶ್ರೀಮತಿ ಅನಿತಾ ಪೋಲಿಸ್ ಪಾಟಿಲ್, ಪಂಚಾಯಿತಿ ಉಪಾಧ್ಯಕ್ಷರು, ಶ್ರೀಮತಿ ದ್ರಾಕ್ಷಯನಮ್ಮ, ಒಕ್ಕೂಟದ ಅಧ್ಯಕ್ಷರು, ಶ್ರೀ ಮಂಜುನಾಥ, ಮೇಲ್ವಿಚಾರಕರು, ತಾಲೂಕಿನ ಸಮನ್ವಯಧಿಕಾರಿಗಳಾದ ಸುಧಾ ಎಸ್‍ಹೆಚ್, ಸೇವಾ ಪ್ರತಿನಿಧಿಯಾದ ಶಾಂತ, ಇತರರು ಹಾಜರಿದ್ದರು

ಕಲ್ಲೂರು  ಕಾರ್ಯಕ್ಷೇತ್ರದ ಬಿಂದು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವರಮಹಾಲಕ್ಷ್ಮಿ ಪೂಜಾ   ಕಾರ್ಯಕ್ರಮವನ್ನು ಯಲಬುರ್ಗಾ ಯೋಜನಾಧಿಕಾರಿಗಳಾದ ರಾಜೇಶ್ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು.ತಾಲೂಕಿನ ಯೋಜನಾಧಿಕಾರಿಯವರು ಶ್ರೀ ರಾಜೇಶ್, ಪ್ರಾದೇಶಿಕ ಕಛೇರಿಯ ತಾಂತ್ರಿಕ ಪ್ರಬಂಧಕರು ಕುಮಾರಿ ವೈಷ್ಣವಿ, ರೇಣಮ್ಮ ಕವಳಕರ್ ಕೇಂದ್ರದ ಸಧ್ಯಕ್ಷರು, ಶರಣಮ್ಮಒಕ್ಕೂಟದ ಅಧ್ಯಕ್ಷರು, ಸುಧಾ ಹೊಸಳ್ಳಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ, ಸವಿತಾ ಮೇಲ್ವಿಚಾರಕರು, ಶಿವಕಲಾ ಕವಳಕೇರಿ ಮಾಲಾಶ್ರೀ ಸೇವಾ ಪ್ರತಿನಿದಿ ಹಾಜರಿದ್ದರು.

ಕೆಸರ್ದ ಗೊಬ್ಬು ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ  ತಾಲೂಕು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪಳ್ಳಿ ನಿಂಜೂರು, ಇವರ ಆಶ್ರಯದಲ್ಲಿ ಕೆಸರ್ದ ಗೊಬ್ಬು ಕಾರ್ಯಕ್ರಮವನ್ನು ನಡೆಸಲಾಯಿತು. ಶ್ರೀಮತಿ ಸಂಗೀತ ನಾಯಕ್ ಅಧ್ಯಕ್ಷರು ಗ್ರಾಮ ಪಂಚಾಯತ್ ಪಳ್ಳಿ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಕಮಲಾಕ್ಷ  ನಾಯಕ್, ಯೋಜನಾಧಿಕಾರಿ ಕೃಷ್ಣ ಟಿ ಶ್ರೀ ಜಗದೀಶ್ ಹೆಗ್ಡೆ ಆಡಳಿತ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಳ್ಳಿ, ಶ್ರೀ ಸೂಡ ಸದಾನಂದ ಶೆಣೈ,  ಶ್ರೀ ವಿಶ್ವನಾಥ ಭಂಡಾರಿ,  ಶ್ರೀ ಹರೀಶ್ ಶೆಟ್ಟಿ,  ಶ್ರೀ ಗೋಪಿನಾಥ್ ನಾಯಕ್ ಉದಮಿಗಳು ಪಳ್ಳಿ ತಾಲೂಕು ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಸಲಾಂ, ಅಧ್ಯಕ್ಷರು,  ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರಾದ ಪ್ರವೀಣ್ ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *