MicrofinanceNewsWomen Empowerment

ಒಕ್ಕೂಟ ಪದಗ್ರಹಣ ಹಾಗೂ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ

ಚಿಕ್ಕಶೆಲ್ಲಿಕೇರಿ ಗ್ರಾಮದ ಪಡಿ ಮಲ್ಲೆಶ್ವರ ದೇವಸ್ಥಾನ ಸಭಾ ಭವನದಲ್ಲಿ ಒಕ್ಕೂಟ ಪದ ಗ್ರಹಣ ಮತ್ತು ಮಹಿಳಾ ಜ್ಞಾನ ವಿಕಾಸ ವಿಚಾರ ಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಹಿಳೆಯರಿಗೆ ಆಸಕ್ತಿ ಮತ್ತು ಛಲವಿದ್ದರೆ ಮಾತ್ರ ಕುಟುಂಬ ನಿರ್ವಹಣೆ ಮತ್ತು ಅಭಿವೃದ್ಧಿ ಸಾದ್ಯವಿದೆ ಎಂದು ಕಾರ್ಯಕ್ರಮದ ಉದ್ಘಾಟಿಸಿ, ಶ್ರೀಯುತ ಎಂ. ಸಿ. ಮುನವಳ್ಳಿ ನಿವೃತ್ತ ಶಿಕ್ಷಕರು ತಿಳಿಸಿದರು. ಬ್ಯಾಂಕಿನಿಂದ ಸಿಗುವ ಸೌಲಭ್ಯಗಳಾದ ಜನಧನ್ ಖಾತೆ, ಎಪಿವಾಯ್. ಪಿ,ಎಂ.ಜೆ.ಜೆ.ವಾಯ್, ಹಾಗೂ ವಿವಿಧ ಸೌಲಭ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಎಸ್. ಜಿ. ಮೋರೆ ಆರ್ಥಿಕ ಸಾಕ್ಷರತಾ ಸಲಹೆಗಾರರು ಮಾಹಿತಿ ನೀಡಿದರು. ಯೋಜನೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಹಾಗೂ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವನ್ನು ಬೀಳಗಿ ಮತ್ತು ಬಾಗಲಕೋಟ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಮಂಜುನಾಥ,. ಬಿ. ಯಶಸ್ವಿಯಾಗಿ ನಡೆಸಿ ಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಕಾರ್ಯದರ್ಶಿಯಾದ ಶ್ರೀಯುತ. ಎಮ್. ಎ. ಕಟಗೇರಿ. ಮತ್ತು ಶ್ರೀಯುತ ಅಪ್ಪಣ್ಣ ವೆಂಕಪ್ಪ ದೊಡಮನಿ ಊರ ಗಣ್ಯರು ಒಕ್ಕೂಟದ ಅಧ್ಯಕ್ಷರಾದ ಬಾಬು ತೋಟದ ರವರು, ನಿಕಟಪೂರ್ವ ಮತ್ತು ನೂತನ ಪದಾಧಿಕಾರಿಗಳು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಜಯಶ್ರೀ ಎಸ್.ಎಂ. ಮಹಿಳಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ನಿರೂಪಿಸಿದರು. ವಲಯ ಮೇಲ್ವಿಚಾರಕರಾದ ಪ್ರಭಾವತಿ .ವಾಯ್ ಅವರು ಸ್ವಾಗತಿಸಿದರು. ತರಬೇತಿ ಮೇಲ್ವಿಚಾರಕರಾದ ಸುನಿತಾ ಮತ್ತು ಎಲ್ಲ ತಂಡದ ಸದಸ್ಯರು ಉಪಸ್ಥಿತರಿದ್ದು, ಸೇವಾ ಪ್ರತಿನಿಧಿಯಾದ ಕವಿತಾ ತೋಟದ ಅವರು ವಂದಿಸಿದರು.

Leave a Reply

Your email address will not be published. Required fields are marked *