ತಿ.ನರಸೀಪುರದಲ್ಲಿ ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮ
Posted onಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶ್ರೀನಂದಿಬಸವೇಶ್ವರ ಕಲ್ಯಾಣ ಮಂಟಪ, ಬೀಡನಹಳ್ಳಿ ಗ್ರಾಮ,ತಿ.ನರಸೀಪುರದಲ್ಲಿ ದಿನಾಂಕ:25.09.2017ರಂದು ನಡೆಸಲಾಯಿತು.
ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶ್ರೀನಂದಿಬಸವೇಶ್ವರ ಕಲ್ಯಾಣ ಮಂಟಪ, ಬೀಡನಹಳ್ಳಿ ಗ್ರಾಮ,ತಿ.ನರಸೀಪುರದಲ್ಲಿ ದಿನಾಂಕ:25.09.2017ರಂದು ನಡೆಸಲಾಯಿತು.
೨೦೦೭ರಲ್ಲಿ ಯೋಜನೆಯು ತನ್ನ ಬೆಳ್ಳಿಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಯೋಜನೆಯ ಪಾಲುದಾರ ಕುಟುಂಬಗಳ ಮಕ್ಕಳು ತಾಂತ್ರಿಕ ವಿದ್ಯಾಭ್ಯಾಸವನ್ನು ಹೊಂದಿ ಉತ್ತಮ ಬದುಕನ್ನು ಸಾಧಿಸಬೆಕೆಂಬ ಸದುದ್ದೇಶದಿಂದ ಆಯ್ದ ಮಕ್ಕಳಿಗೆ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಆರಂಭಿಸಲಾಯಿತು.ಸುಜ್ಞಾನನಿಧಿ ಶಿಷ್ಯವೇತನದ ದಶಮಾನೋತ್ಸವ ವಿತರಣಾ ಕಾರ್ಯಕ್ರಮವನ್ನು “ಭಾರತದ ಖ್ಯಾತ ವಿಜ್ಞಾನಿ, “ಭಾರತರತ್ನ ಡಾ| ಸಿ.ಎನ್.ಆರ್. ರಾವ್ ಇವರ ಸಮ್ಮುಖದಲ್ಲಿ ನೆರವೇರಿಸುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ ವೆಜ್ಞಾನಿಕ ಶಿಕ್ಷಣದ ಬಗ್ಗೆ ಹೊಸ ಶಕೆಯೊಂದನ್ನು ಆರಂಭಿಸುವಂತಾಗಿದೆ.
ತಿ.ನರಸೀಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ನೂತನವಾಗಿ ಪ್ರಾರಂಭಗೊಂಡ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ರಚನೆಗೆ ಯೋಜನೆಯ ಸಮುದಾಯ ಅಭಿವೃದ್ದಿ ಕಾರ್ಯಕ್ರಮದಡಿಯಲ್ಲಿ ಅನುದಾನ ಯೋಜನಾಧಿಕಾರಿ ವಿತರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕಿನ ಅಜೆಕಾರು ವಲಯದ ಶಿರ್ಲಾಲು ಗ್ರಾಮದ ಶ್ರೀ ಸಿದ್ದಲಕ್ಷ್ಮಿ ಸಭಾಭವನದಲ್ಲಿ ದಿನಾಂಕ 10.09.17 ರಂದು ವಲಯಮಟ್ಟದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಕರ್ನಾಟಕ ರಾಜ್ಯದ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ದಿನಾಂಕ 19.09.2017 ರಂದು ಮಹೋತ್ಸವ ಸಭಾಭವನ ಧರ್ಮಸ್ಥಳದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆಯ ಮೈಸೂರು ಜಿಲ್ಲಾ ಕಛೇರಿಯಲ್ಲಿ ನಡೆದ ಮಕ್ಕಳ ಸಂರಕ್ಷಣೆಯ ಕುರಿತು ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಕಾರ್ಯಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪುತ್ರಿಯಾದ ಶ್ರದ್ಧಾ ಅಮಿತ್ರವರು ಉದ್ಘಾಟಿಸಿದರು.
SKDRDP Welcomes all to Sujnana Nidhi Disbursement function to be held on 19th September 2017 at Mahothsava Sabhabhavan, Dharmasthala. All are cordially invited.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಶ್ರೀರಾಂಪುರ ಕಾಲೋನಿಯ 23 ವರ್ಷದ ವಯಸ್ಸಿನ ಸಾಗರ್ ಎಂಬಾತ ಆಧುನಿಕ ಪದ್ದತಿಯಲ್ಲಿ ಹೈನುಗಾರಿಕೆಯನ್ನು ನಡೆಸಿ ಸೈ ಎನಿಸಿಕೊಂಡಾತ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚುಂಚನಕಟ್ಟೆ ವಲಯದ ಶ್ರೀರಾಂಪುರ ಕಾಲೋನಿಯಲ್ಲಿ “ಜೋಡಿ ಎತ್ತು ಪ್ರಗತಿ ಬಂಧು” ತಂಡಕ್ಕೆ ಸೇರಿಕೊಂಡು ಹೈನುಗಾರಿಕೆಯನ್ನು ಆದಾಯೋತ್ಪನ್ನ ಚಟುವಟಿಕೆಯಾಗಿ ಆಯ್ಕೆ ಮಾಡಿಕೊಂಡು ಯಶಸ್ಸನ್ನು ಸಾಧಿಸಿದಾತ.
ಸಕ್ಕರೆ ನಾಡಿಗೆ ಪ್ರಸಿದ್ಧವಾದ ಮಂಡ್ಯ ಜೆಲ್ಲೆಯ ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದ ಒಣ ಭೂಮಿಯಲ್ಲಿ ಇಂಥ ಕೃಷಿ ವೈವಿಧ್ಯತೆಯಲ್ಲಿ ಸಂತಸ ಕಾಣುವುದು ಎಂ.ಪಿ.ನೀಲಕಂಠಬಾಬು & ಪ್ರಭಾವತಿ ದಂಪತಿ ಕುಟುಂಬ ನೀಲಕಂಠಬಾಬು ಸರಕಾರಿ ಶಾಲೆಯಲ್ಲಿ 9ನೇ ಕ್ಲಾಸ್ ವರೆಗೆ ವಿದ್ಯಾಭ್ಯಾಸ ಮುಗಿಸಿ ಕೃಷಿಗೆ ಒಲವು ಕೊಟ್ಟು ವ್ಯೆವಿಧ್ಯಮಯವಾಗಿ ತೋಟ ರಚಿಸಿದ್ದಾರೆ.
ಮೈಸೂರು ಜಿಲ್ಲಾ ನೂತನ ಕಛೇರಿ ಉದ್ಘಾಟನೆ ಅನುಧಾನ ವಿತರಣಾ ಕಾರ್ಯಕ್ರಮ.ಈ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದ್ದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ ಎಲ್ ಗಣಪತಿ ಉಪ ಮಹಾ ಪ್ರಬಂಧಕರು ಕಾರ್ಪೆರೇಶನ್ ಬ್ಯಾಂಕ್ ಮೈಸೂರು. ಇವರು ಸೋಲಾರ್ ಅನುದಾನಗಳನ್ನು ವಿತರಣೆ ಮಾಡಿದರು.