ಮಹಿಳೆಯರ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ
ಶಿಕಾರಿಪುರ ಯೋಜನಾ ವ್ಯಾಪ್ತಿಯ ಜ್ಞಾನವಿಕಾಸ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾತ್ತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡು ಬಿ.ಪಿ. ಮತ್ತು ಶುಗರ್ ಕಾಯಿಲೆಯ ಬಗ್ಗೆ ಪರೀಕ್ಷೆ ಮಾಡಲಾಗಿತ್ತು. ಹಾಗೂ ಈ ಕಾರ್ಯಕ್ರಮದಲ್ಲಿ ಬಿ.ಪಿ ಮತ್ತು ಶುಗರ್ ಕಾಯಿಲೆಗೆ ಕಾರಣ ಮತ್ತು ತಡೆಗಟ್ಟುವ ಬಗ್ಗೆ ಸದಸ್ಯರ ಮನಮುಟ್ಟುವಂತೆ ಮಾಹಿತಿ ನೀಡಿ ಭಾಗವಹಿಸಿದ ಸದಸ್ಯರೊಂದಿಗೆ ಕಾಯಿಲೆಯ ಕುರಿತು ಚರ್ಚಿಸಲಾಯಿತು. ಸುಮಾರು 80 ಸದಸ್ಯರು ಭಾಗವಹಿಸಿದ್ದು ಸಾರ್ವಜನಿಕ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪೌಷ್ಟಿಕ ಆಹಾರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ:
ಕುಂದಾಪುರ ಯೋಜನಾ ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮದ ಮುಖಾಂತರ ಮಕ್ಕಳು, ಹದಿಹರೆಯದವರು, ಮದ್ಯ ವಯಸ್ಕರು, ವೃದ್ದರು ವಿವಿಧ ಹಂತಗಳಲ್ಲಿ ಯಾವ ರೀತಿ ಪೌಷ್ಟಿಕ ಆಹಾರಗಳನ್ನು ಸ್ವೀಕರಿಸಬೇಕು ಎನ್ನುವುದರ ಕುರಿತು ಮಾಹಿತಿ ನೀಡಲಾಯಿತು. ಅಲ್ಲದೆ ಕೈತೋಟ ರಚನೆ ಮಾಡಿ ಉತ್ತಮ ಆಹಾರ ಸೇವಿಸುವುದರ ಕುರಿತು ಮಾಹಿತಿ ನೀಡಲಾಯಿತು. ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ನಡೆಸಿ ಉತ್ತಮ ಪ್ರಾತ್ಯಕ್ಷಿಕೆಗೆ ಬಹುಮಾನ ನೀಡಲಾಯಿತು.
ಶ್ರೀ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ
ರಾಯಚೂರು ಯೋಜನಾ ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕೇಂದ್ರಗಳ ಮುಖಾಂತರ ಸಾಮೂಹಿಕ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಹಿಳೆಯರೆಲ್ಲರು ಆಸಕ್ತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜಾ ತಯಾರಿ ಮತ್ತು ಅಲಂಕಾರ ಮಾಡಿದರು. ಸಂಪನ್ಮೂಲ ವ್ಯಕ್ತಿಗಳು ಶ್ರಾವಣ ಮಾಸದ ವೈಶಿಷ್ಟತೆ ಮತ್ತು ಶ್ರೀ ವರಮಹಾಲಕ್ಷ್ಮಿ ವೃತ್ತ ಪೂಜೆಯ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ 60 ಮಂದಿ ಮಹಿಳೆಯರು ಭಾಗವಹಿಸಿದರು.
ಅಧ್ಯಯನ ಪ್ರವಾಸ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮವು ಉತ್ತಮವಾಗಿ ಮೂಡಿ ಬಂದಿರುತ್ತದೆ. ಕೇಂದ್ರದ ಮಹಿಳೆಯರಿಗೆ ಕಾನೂನಿನ ಬಗ್ಗೆ ಮಾಹಿತಿ ತಿಳಿಸುವ ನಿಟ್ಟಿನಲ್ಲಿ ಕೋರ್ಟ್ ಭೇಟಿ ಮಾಡಲಾಯಿತು. ಅಲ್ಲಿರುವ ಬಂಧಿಖಾನೆ,ನ್ಯಾಯ ನಡೆಯುವ ಕೊಠಡಿ, ಯಾವ ರೀತಿಯಲ್ಲಿ ನ್ಯಾಯವನ್ನು ದೊರಕಿಸಿಕೊಡಲಾಗುತ್ತದೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕವಾಗಿ ಸದಸ್ಯರಿಗೆ ನ್ಯಾಯಧೀಶರಿಂದ ಮಾಹಿತಿಯನ್ನು ನೀಡಲಾಯಿತು. ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಭೇಟಿ ಮಾಡಿಸಲಾಯಿತು. ಅಲ್ಲಿ ಅಂಗನವಾಡಿ ಮಕ್ಕಳಿಗೆ ಸಂಬಂಧ ಪಟ್ಟಂತಹ ವಿಷಯಗಳ ಬಗ್ಗೆ ಭಾಗ್ಯಲಕ್ಷ್ಮೀ ಯೋಜನೆ, ಸ್ತ್ರೀ ಶಕ್ತಿ ಸಂಘಗಳ ಬಗ್ಗೆ ಮಕ್ಕಳಿಗೆ ದೊರಕುವ ಪೌಷ್ಠಿಕ ಆಹಾರದ ಬಗ್ಗೆ ಮಕ್ಕಳಿಗೆ ದೊರಕುವ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಲಾಯಿತು. ಹಾಗೂ ಚಿಪ್ಸ್ ತಯಾರಿ, ಹಾಳೆ ತಟ್ಟೆ ತಯಾರಿಕೆ ಸ್ವ ಉದ್ಯೋಗ ಮಾಡಿದ ಕುಟುಂಬಗಳಿಗೆ ಭೇಟಿ ಮಾಡಲಾಯಿತು. ಅಧ್ಯಯನ ಪ್ರವಾಸದಿಂದಾಗಿ ಸದಸ್ಯರಿಗೆ ಕೋರ್ಟ್ಗಳಲ್ಲಿ ನ್ಯಾಯ ಯಾವ ರೀತಿ ಒದಗಿಸುತ್ತಾರೆ ಮತ್ತು ಇಲಾಖಾ ಸೌಲಭ್ಯಗಳ ಕುರಿತು ಮಾಹಿತಿ ತಿಳಿದುಕೊಂಡಿರುತ್ತಾರೆ ಅಲ್ಲದೆ ಸ್ವ ಉದ್ಯೋಗ ಕುಟುಂಬಗಳ ಭೇಟಿಯ ಪರಿಣಾಮವಾಗಿ ಇದೀಗ ಸದಸ್ಯರು ಸ್ವ ಉದ್ಯೋಗ ಮಾಡುವ ಆಸಕ್ತಿಯನ್ನು ಹೊಂದಿರುತ್ತಾರೆ.