NewsWomen Empowerment

ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ 5 ಕೇಂದ್ರಗಳಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಕೇಂದ್ರದ ಸದಸ್ಯರುಗಳು ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರುಗಳು ಗ್ರಾಮಸ್ಥರು, ಹಿರಿಯರು, ಗ್ರಾ.ಪಂ. ಸದಸ್ಯರುಗಳು ಉಪಸ್ಥಿತರಿದ್ದು ಪೂಜಾ ಕಾರ್ಯಕ್ರಮವನ್ನು ವಿಧಿ ವಿಧಾನದ ಪ್ರಕಾರ 5 ಕೇಂದ್ರದಲ್ಲಿಯೂ ಅರ್ಚಕರಿಂದ ಮಂತ್ರ ಘೋಷಗಳೊಂದಿಗೆ ಪೂಜೆ ನೇರವೇರಿಸಲಾಯಿತು. ಸದಸ್ಯರೆಲ್ಲರೂ ಪೂಜೆಗೈದಿದ್ದು, ಸೇರಿದ ಎಲ್ಲಾ ಮುತ್ತೈದೆಯರಿಗೆ ಅರಿಶಿನ ಕುಂಕುಮ, ಬಳೆ, ಹೂವು, ವಿತರಿಸಿ ನಂತರ ಪ್ರಸಾದ ವ್ಯವಸ್ಥೆಯನ್ನು ಮಾಡಿಸಲಾಗಿತ್ತು.

ನಂತರ 5 ಕಡೆಯಲ್ಲಿಯೂ ಅವಳನ್ನು ಆದಿಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ಧೈರ್ಯ ಲಕ್ಷ್ಮಿ, ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮಿ, ಸರ್ವಸಂಪತ್ತನ್ನು ಕರುಣಿಸುವವಳು ಎಂದು ವಿವಿಧ ರೂಪದಲ್ಲಿ ಅವಳನ್ನು ವರ್ಣಿಸುತ್ತಾರೆ.

ಲಕ್ಷ್ಮಿದೇವಿ ಎಂದರೆ ವೇದಗಳ ಪ್ರತಿ ಪಾದ್ಯನಾದ ಭಗವಂತನೊಂದಿಗೆ ಬೆರೆತಿರುವ ಶಕ್ತಿ ಸ್ವರೂಪಿಣಿ ಆಗಿದ್ದಾಳೆ, ಎನ್ನುವುದನ್ನು ಋಷಿ ದರ್ಶನ ಪರಬ್ರಹ್ಮನೊಂದಿಗೆ ಅವಿನಾಭಾವತೆಯಿಂದ ಸೇರಿಕೊಂಡಿರುವ ಪ್ರಕೃತಿ ತತ್ವವೇ ಶ್ರೀ ಮಹಾಲಕ್ಷ್ಮಿ , ಲಕ್ಷ್ಮೀ ಎಂದರೇ ಸಂಪತ್ತು , ಸಿರಿ ಭಾಗ್ಯ, ಐಶ್ವರ್ಯ ಎಂಬೆಲ್ಲ ಅರ್ಥವಿದೆ.

ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗುವ ಈ ವ್ರತವನ್ನು ಸಾಕ್ಷಾತ್ ಶಿವನೇ ಶ್ರೀಪಾರ್ವತಿಗೆ ವಿವರಿಸಿದನೆಂದು ಸ್ಕಾಂದ ಪುರಾಣಗಳಲ್ಲಿ ಕೇಳಿ ಬರುತ್ತದೆ. ಶ್ರಾವಣಮಾಸದ ಶುಕ್ಲಪಕ್ಷದ ಶುಕ್ರವಾರದಂದೆ ಆಚರಣೆಗೊಳ್ಳುವ ಈ ದಿನ ಹೆಣ್ಣು ಮಕ್ಕಳಿಗೆ ಅತ್ಯಂತ ಸಂಭ್ರಮದಿಂದ ಕೂಡಿ ಬರುವ ಹಬ್ಬದ ದಿನವಾಗಿದೆ. ಈ ದಿನವನ್ನು ಬಹು ವಿಜ್ರಂಭಣೆಯಿಂದ ಆಚರಿಸುತ್ತಾರೆ. ಮಹಿಳೆಯರು ಲಕ್ಷ್ಮಿ ಮಾತೆಯನ್ನು ಆರಾಧಿಸುತ್ತಾರೆ.

ಸಂಪತ್ತು ಎಂದರೆ ಧನ ಸಂಪತ್ತು ಒಂದೇ ಅಲ್ಲ ಗುಣ, ಧೈರ್ಯ, ವಿದ್ಯೆ, ಸಂಸ್ಕಾರ, ರೂಪ, ಆರೋಗ್ಯ ಹೀಗೆ ಹತ್ತು ಹಲವಾರು ಸಂಪತ್ತನ್ನು ಅಂದರೆ ಮಾನವನ ಬದುಕಿಗೆ ಅಗತ್ಯವಿರುವ ಉದ್ದಾರಕ್ಕೆ ಬೇಕಿರುವ ಅನೇಕಾನೇಕ ಸಂಪತ್ತನ್ನು ನೀಡುವ ಮಾತೃ ದೇವತೆಯೇ ಶ್ರೀ ವರಮಹಾಲಕ್ಷ್ಮಿ, ಜ್ಞಾನ, ಕಲೆಗಳ ಒಡತಿ, ಬೇಡಿದ ವರಗಳನ್ನು ನೀಡುವ ಶ್ರೀ ವರಮಹಾಲಕ್ಷ್ಮಿ ಎಂದು ಹೇಳಬಹುದು.

ಲಕ್ಷ್ಮಿದೇವಿಯೂ ಸಮುದ್ರರಾಜನ ಮಗಳು, ಸಮುದ್ರ ಮಂಥನದಲ್ಲಿ ಜನಿಸಿದ ದೇವತೆ ಚಂದ್ರನಿಗೆ , ಸಹೋದರಿ ಕ್ಷೀರಾಬ್ಧಿ ಕನ್ನಿಕೆಯಾದ ಈಕೆಯನ್ನು ಸಿದ್ಧಲಕ್ಷ್ಮಿ, ಮೋಕ್ಷಲಕ್ಷ್ಮಿ, ಜಯಲಕ್ಷ್ಮಿ, ವಿದ್ಯಾಲಕ್ಷ್ಮಿ, ಶ್ರೀಲಕ್ಷ್ಮಿ, ವರಲಕ್ಷ್ಮಿ, ಧೈರ್ಯಲಕ್ಷ್ಮಿ, ಯಶೋಲಕ್ಷ್ಮಿ, ಪ್ರಸನ್ನ ಮಮ ಸರ್ವದಾ ಎನ್ನುತ್ತಾ ಸ್ತೋತ್ರಗೈದು ಸ್ತ್ರೀಯರು ಅವಳನ್ನು ಪೂಜಿಸುತ್ತಾರೆ. ಆದರೆ ಲಕ್ಷ್ಮಿದೇವಿಯು ಕ್ಷೀರ ಸಾಗರದಲ್ಲಿ ಜನಿಸಿರುವುದರಿಂದ ( ಕ್ಷೀರ) ಹಾಲಿನ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಮಿಶ್ರಿತ ಇರುವ ತಿಂಡಿ ತಿನಿಸುಗಳಿಂದ ನೈವೇದ್ಯ ಮಾಡಿ ಪ್ರಸಾದವನ್ನು ಹಂಚುತ್ತಾರೆ. ಆದ್ದರಿಂದ ಈ ಪೂಜೆಯನ್ನು ಭಕ್ತಿ ಶ್ರದ್ಧೆಯಿಂದ ಮಾಡಿದಲ್ಲಿ ಆ ಕುಟುಂಬ ವರ್ಗದವರಿಗೆ ಧನ ಧಾನ್ಯ ಸಂಪತ್ತು ಲಭಿಸುವುದು ಹಾಗೂ ಆರೋಗ್ಯ ವೃದ್ಧಿಯಾಗುವುದೆಂದು ಈ  ಪೂಜೆಯ ಮಹತ್ವವಾಗಿದೆ.

ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಊರಿನ ಹಿರಿಯರು ಗಣ್ಯರು ಎಲ್ಲರೂ ಯೋಜನೆಯ ಈ ಎಲ್ಲಾ ಕಾರ್ಯಕ್ರಮಗಳ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಅದರಲ್ಲಿಯು ವಿಶೇಷವಾಗಿ ಜಾಗೃತಿ ಮೂಡಿಸುತ್ತಿರುವ ಕಾರ್ಯಕ್ರಮಗಳನ್ನು ಹೆಚ್ಚು ಅತ್ಯುತ್ತಮವಾಗಿ ಜನರಿಗೆ ಉತ್ತಮ ಅಭಿಪ್ರಾಯವನ್ನು ಹೆಚ್ಚಿಸುತ್ತಿದೆ ಎಂದು ಮಹಿಳೆಯರಿಗೆ ಪೂರಕವಾದ ಸಂಸ್ಕತಿ ಸಂಸ್ಕಾರದ ಅರಿವು ಜ್ಞಾನ ತುಂಬಿರುವುದು ನಮ್ಮ ಗ್ರಾಮಸ್ಥ ಕುಟುಂಬದಲ್ಲಿ ಕಂಡು ಬರುತ್ತಿದೆ. ಆದ್ಧರಿಂದ ಇನ್ನು ಹೆಚ್ಚಿನ ಕಾರ್ಯಕ್ರಮವನ್ನು ಹಾಕಿಕೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ನಮ್ಮ ನಮ್ಮ ಗ್ರಾಮಗಳಲ್ಲಿ ನಾವೇ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತೇವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಮೂಹಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಪೂಜಾ ಕಾರ್ಯಕ್ರಮ

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ದಿನಾಂಕ 14.08.2017 ರಂದು ಕಳಲೆ ವಲಯದ ಕಳಲೆ ಕಾರ್ಯಕ್ಷೇತ್ರದ ಶ್ರೀಗೋದಾವರಿ ಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿ ಹಾಗೂ ದೇವಿರಮ್ಮನಹಳ್ಳಿ ವಲಯದ ಕತ್ವಾಡಿಪುರ ಕಾರ್ಯಕ್ಷೇತ್ರದ ಶ್ರೀ ಅಮೃತಾ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಎರಡು ಕೇಂದ್ರದ ಸದಸ್ಯರುಗಳು ಹಾಗೂ ಗ್ರಾಮಸ್ಥರು ಪ್ರಗತಿ ಬಂಧು ಸ್ವಸಹಾಯ ತಂಡಗಳ ಸದಸ್ಯರು ಗ್ರಾ.ಪಂ. ಸದಸ್ಯರುಗಳು ದೇವಸ್ಥಾನದ ಅರ್ಚಕರು, ಕಮಿಟಿ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಶ್ರೀ ಕೃಷ್ಣನು ಜಾರದ ಪರಿಪೂರ್ಣ ವ್ಯಕ್ತಿತ್ವ ಮುಗ್ಧತೆ ಚೇಷ್ಠೆಗಳಿಂದ ಎಲ್ಲರನ್ನೂ ಎಳೆವಯಸ್ಸಿನಲ್ಲೇ ಸೆಳೆದ ಗೊಲ್ಲರ ಗೋವುಗಳ ಕಾಪಿಟ್ಟು ಗೋಪಾಲನಾದ, ನಾದ ಲೋಲನಾದ, ವರ -ಶಾಪಗಳ ಸರಿದೂಗಿಸಿದ ನಂಬಿದವರಿಗೆ ಆಸರೆಯಾದ ಹೆಂಗಳೆಯರ ಕಣ್ಣೀರೊರೆಸಿ ಧೈರ್ಯ ತುಂಬಿದ ಅರಸೊತ್ತಿಗೆಗಳ ಕೊಂಡಿಯಾಗಿ, ಧರ್ಮಾಧರ್ಮಗಳನ್ನು ವಿವೇಚಿಸಿದ ,  ಜ್ಞಾನ ಬಲದ ಯಶಸ್ಸಿನ ಸೂತ್ರವೆಂದು ಸಾರಿದ ಎಷ್ಟೇ ಜಟಿಲ ಸಮಸ್ಯೆಯಾದರೂ ನಗುತ್ತಲೆ ಸ್ವೀಕರಿಸಿದ ಗೀತಾಮೃತವನ್ನು ನುಡಿಸುತ್ತಾ ಎಲ್ಲರಿಗೂ ನಗುನಗುತ್ತಾ ಸ್ಫೂರ್ತಿಯ ಸೇಲೆಯಾದ ನೂರಾರು  ಕಲೆಗಳ ಅಲೆಗಳನ್ನೆಬ್ಬಿಸಿ ಬಾಳಿನರ್ಥಕೆ ನೆಲೆಯಾದ , ಕೃಷ್ಣನ ಕಡು ಚೆಲುವು ಆತ ಸಿರವಂತ ಎಲ್ಲರಂತೆ ಸಹಜವಾಗಿ, ಸರಳವಾಗಿ, ತೆರೆದ ಪುಸ್ತಕವಾಗಿ ತುಂಬಿದ ಕೌಟುಂಬಿಕ ಜೀವನ ನಡೆಸಿದ . ಪಾಂಡವರ ಮಹಾಯಾಗದಲ್ಲಿ ಬಂದ ಅತಿಥಿಗಳ ಕಾಲು ತೊಳೆದು ಸತ್ಕರಿಸಿದ ಪಾಂಡವರಿಗೆ ಯುದ್ಧದಲ್ಲಿ ಧೈರ್ಯ ತುಂಬಿ ಯುದ್ಧಕ್ಕೆ ಬಾಗಿಯಾಗಿಸಿ ಸಂಧಾನಕ್ಕೆ ಬಂದಾಗ ವಿದುರನ ಮನೆಯಲ್ಲಿ ಗಂಜಿ ಕುಡಿದ ಬಾಲ್ಯ ಮಿತ್ರ ಕುಛೇಲನ ಬಡತನ ನೀಗಿದ, ಸಾಮಾನ್ಯರೊಡನೆ ಸಾಮಾನ್ಯನಾಗಿ ಬೆರತು ಧೈರ್ಯ ಸ್ಥೈರ್ಯ ತುಂಬಿದವನು ಶ್ರೀ ಕೃಷ್ಣ ಪರಮಾತ್ಮನೆಂದು ಹೇಳ ಬಹುದಾಗಿದೆ.

ವಿಶ್ವರೂಪನ ಅರಿವಿನ ಧರ್ಶನ ಮಾಡಿಸಿದ ಬಾಲ್ಯದಲ್ಲಿಯೇ ತಾಯಿ ಯಶೋದೆಗೆ ಮಣ್ಣು ತಿಂದ ನೆಪದಲ್ಲಿ ಬಾಯೊಳಗೆ ಬ್ರಹ್ಮಾಂಡವನ್ನೆ ತೋರಿದ ರುಕ್ಷ್ಮಿಣಿ ಕೃಷ್ಣನ ಜೊತೆ ಬಾಳುವೆನೆಂದಾಗ ತಂದೆ ಭೀಷ್ಮರ ಗೊಂದಲಕ್ಕೀಡಾದ ಅವನ ಗೊಂದಲ ಪರಿಹರಿಸಲು ವಿಶ್ವರೂಫ ತೋರಿದ ಸಾವಿರಾರು ಸವತಿಯರ ನಡುವೆ ಕೃಷ್ಣನ ಪಾಡೇನು? ಎಂದು ನೋಡಲು ಬಂದ ನಾರದರಿಗೆ ಅಚ್ಚರಿ ಮೂಡಿಸಿ ಎಲ್ಲರ ಮನೆಯಲ್ಲಿಯೂ ಏಕಕಾಲದಲ್ಲಿ ಅನೇಕ ರೂಪಗಳಲ್ಲಿ ಕಾಣಿಸಿಕೊಂಡ ಉದಂಕ ಋಷಿಯ ತಪ್ಪುಗ್ರಹಿಕೆನ್ನು ಕೇಳೀದ ಕಣ್ಣಿಲ್ಲದ ದೃತರಾಷ್ಟ್ರನಿಗೆ ಕಣ್ಣು ನೀಡಿ ವಿಶ್ವತೋಮುಖ ರೂಪ ನೋಡ ಬಯಸಿದಂದು ಗ್ರಂಥದಲ್ಲಿ ತಿಳಿಸುತ್ತದೆ.  ಜನರಿಗೆ  ಅರಿವು ಆರದಿರಲಿ ಎಂದು ಜನಗಣರಿಗೆ ತಿಳಿಸಿದ್ದು ಹಾಗೆಯೇ ಶ್ರೀ ಕೃಷ್ಣ ಪರಮಾತ್ಮನು ಕಡೆದ ಬೆಣ್ಣೆ ಕದ್ದು ಹಾಲಿನ  ಪದಾರ್ಥವನ್ನು ಬಿಟ್ಟು ಬೇರಾವ ಪದಾರ್ಥವನ್ನು ಕಳವು ಮಾಡಿದವನಲ್ಲ ಕೃಷ್ಣನು ಕಳ್ಳತನಕ್ಕೆ ಬರದಿದ್ದರೆ ಗೋಪಿಕೆಯರು ಬೇಸರಿಸಿಕೊಳ್ಳುತ್ತಿದ್ದರು. ಕಾಡು-ಮೇಡು ಪೂಜಿಸುವುದರಿಂದ ಗೋವುಗಳ ವರ್ಧನೆಗೆ ಕಾರಣವಾಗಿದ್ದು, ನದಿ ತೀರಗಳಿಂದ ಕೂಡಿದ ಗೋವರ್ಧನ ಬೆಟ್ಟ ಆದುದರಿಂದ ಉತ್ತಮ ಮಳೆ ರೈತರಿಗೆ ಬೆಳೆ ಬದುಕಿನ ಚಕ್ರದ ಬೇರಿಗೆ ನೀರೆರೆದರೆ ನೆಮ್ಮದಿ ಎಂದು ಗೋವರ್ಧನ ಗಿರಿ ಬೆಟ್ಟವನ್ನು ಪೂಜಿಸುವುದನ್ನು ನಾವು ಈಗಲೂ ಕಾಣುತ್ತೇವೆ. ಇದಕ್ಕೆ ಇಂದ್ರ ದೇವನು ಶ್ರೀ ಕೃಷ್ಣನಿಗೆ ಶರಣಾದ ಎಂದು ಹಾಗೂ ಕೃಷ್ಣನ ಹಲವಾರು ನಾಮಾಂಕಿತಗಳ ಕುರಿತು ಕಥೆ ಹೇಳಲಾಯಿತು.

ನಂತರ ಒಂದು ಕಾರ್ಯಕ್ಷೇತ್ರದಲ್ಲಿ 1 ರಿಂದ 5 ವರ್ಷದ ಮಕ್ಕಳಿಗೆ ವೇಷ ಭೂಷಣ ಹಾಕಿಸಿ ಪ್ರಶಸ್ತಿಯನ್ನು ವಿತರಿಸಲಾಯಿತು. ಸಿಹಿ ಹಂಚಲಾಯಿತು ಇನ್ನೊಂದು ಕಾರ್ಯಕ್ಷೇತ್ರದಲ್ಲಿ ಪಾಳು ಬಿದ್ದ ದೇವಸ್ಥಾನವನ್ನು ಹಿಂದಿನ ದಿನವೇ ಕೇಂದ್ರದ ಸದಸ್ಯರು ಗ್ರಾಮಸ್ಥರೆಲ್ಲರೂ ಸೇರಿ ದೇವಸ್ಥಾನ ಆವರಣವನ್ನು ಸ್ವಚ್ಚಗೊಳಿಸಿ ರಂಗೋಲಿಯಿಂದ & ಹೂಗಳಿಂದ ಅಲಂಕರಿಸಿ  ನಮ್ಮ ಸಂಸ್ಥೆ ಹಾಗೂ ಬ್ರೀಗೇಡ್ ಸಂಸ್ಥೆ  ಜಂಟಿಯಾಗಿ ಗ್ರಾಮಸ್ಥರೆಲ್ಲರೂ ಸೇರಿ ಅರ್ಚಕರಿಂದ ಪೂಜಾ ವಿಧಿ ವಿಧಾನಗಳ ಮೂಲಕ ಕಾರ್ಯಕ್ರಮವನ್ನು ನೇರವೇರಿಸಲಾಯಿತು.

Leave a Reply

Your email address will not be published. Required fields are marked *