AgricultureNews

ತಿ.ನರಸೀಪುರದಲ್ಲಿ ಸ್ವ-ಉದ್ಯೋಗ  ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮ

ಸ್ವ-ಉದ್ಯೋಗ  ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕನಕಸಮುದಾಯಭವನ, ಬಿಳಿಗಿರಿಹುಂಡಿ ಗ್ರಾಮ, ತಿ.ನರಸೀಪುರದಲ್ಲಿ ದಿನಾಂಕ 05.09.2017ರಂದು ನಡೆಸಲಾಯಿತು.

ಯೋಜನೆಯಿಂದ ಸ್ವ-ಉದ್ಯೋಗಕ್ಕೆ ವಿಶೇಷ ಉತ್ತೇಜನ ನೀಡಲಾಗುತ್ತಿದೆ. ಸಣ್ಣ ಮತ್ತು ಅತಿ ಸಣ್ಣ ಕೃಷಿಕರನ್ನು ಸಂಘಟಿಸಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವ-ಉದ್ಯೋಗಕ್ಕೆ ಪೂರಕವಾಗಿ ಲಾಭದಾಯಕ ಹೈನುಗಾರಿಕೆಯನ್ನು ಮಾಡುವ ವಿಧಾನ, ಗುಣಮಟ್ಟದ ಹಾಲು ಉತ್ಪಾದನೆ, ಆರ್ಥಿಕ ಪ್ರಗತಿಗೆ ಸ್ವ-ಉದ್ಯೋಗದ ಕುರಿತು ಮಾಹಿತಿ ನೀಡಲಾಯಿತು.

 ಶ್ರೀಯುತ ರಮೇಶ್ ತಾಲೂಕು ಪಂಚಾಯಿತಿ ಸದಸ್ಯರು ಉದ್ಘಾಟಿಸಿದರು.ಹಿಂದಿನ ಕಾಲದಲ್ಲಿ “ಉದ್ಯೋಗಂ ಪುರುಷ ಲಕ್ಷಣಂ” ಪ್ರಸ್ತುತ ಕಾಲದಲ್ಲಿ “ಉದ್ಯೋಗಂ ಮನುಷ್ಯ ಲಕ್ಷಣಂ” ಎಂದು ವ್ಯಾಖ್ಯಾನಿಸುತ್ತೇವೆ. ಮಹಿಳೆಯರು ಕೇವಲ ಸಂಘಕ್ಕೆ ಸೇರಿ ಸಾಲ ಪಡೆದು ಮರುಪಾವತಿ ಮಾಡುವುದರ ಜೊತೆಗೆ ಇಂತಹ ಸ್ವ-ಉದ್ಯೋಗ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ, ಮಹಿಳೆಯಾದ ನಾನು ತನ್ನ ಕಾಲ ಮೇಲೆ ನಿಂತು ಕುಟುಂಬವನ್ನು ನಿರ್ವಹಣೆ ಮಾಡಬಹುದು ಮಹಿಳೆಯರು ಆರ್ಥಿಕವಾಗಿ ಮತ್ತು ಸಮಾಜಿಕವಾಗಿ ಸಬಲವಾಗಬೇಕು ಎಂದು ತಿಳಿಸಿದರು. ಸ್ವ-ಉದ್ಯೋಗ ಮಾಡಿ ಕುಟುಂಬದಲ್ಲಿ ಅಭಿವೃದ್ದಿ ಹೂಂದಬಹುದು ಎಂದು ತಿಳಿಸುತ್ತಾ ಕಾರ್ಯಕ್ರಮವನ್ನು ಕುರಿತು ಶುಭ ಹಾರೈಸಿದರು.

ಶ್ರೀಮತಿ ಸುನೀತಾಪ್ರಭು ಯೋಜನಾಧಿಕಾರಿಪ್ರಾಸ್ತಾವಿಕ ಮಾತನಾಡಿ. ನಮ್ಮ ತಾಲೂಕಿನಲ್ಲಿ ಪ್ರಗತಿಬಂಧು ಮತ್ತು ಸ್ವ-ಸಹಾಯ ಸಂಘಗಳು ಸೇರಿ 28000 ಜನ ಸದಸ್ಯರು ಫಲಾನುಭವಿಗಳಾಗಿರುತ್ತಾರೆ. ಯೋಜನೆಯಿಂದ ಪಡೆದ ಸಾಲವನ್ನು ಆರ್ಥಿಕ ಪ್ರಗತಿಗೆ ಉಪಯೋಗಿಸಿಕೊಂಡು ಉತ್ತಮ ರೀತಿಯಲ್ಲಿ ಮರುಪಾವತಿ ಮಾಡುತ್ತಿದ್ದಾರೆ. ಇವತ್ತಿನ ತರಬೇತಿಗೆ ಪೂರಕವಾಗಿ ಮಹಿಳೆಯರು ಟಿ.ವಿ.ಯಲ್ಲಿ ಸೀರಿಯಲ್ ಮತ್ತು ಇತರ ಕಾರ್ಯಕ್ರಮ ನೋಡಿ ದಿನವನ್ನು ಕಳೆಯುತ್ತಿದ್ದು, ಈ ಬಗ್ಗೆ ಪ್ರಗತಿಯದಾರಿಯ ತೋರಿಸುವ ನಿಟ್ಟಿನಲ್ಲಿ ಇವತ್ತು ಸ್ವ-ಉದ್ಯೋಗದ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪ್ರಯೋಜನವನ್ನು ನೀವೆಲ್ಲಾ ಪಡೆದುಕೊಂಡು ನಿಮ್ಮ ಕುಟುಂಬವನ್ನು ಜವಾಬ್ದಾರಿಯಿಂದ ನಡೆಸಿಕೊಂಡು ಹೋಗಬೇಕು. ಸ್ವ-ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಮನೆಯಲ್ಲಿ ಕುಳಿತು ಪ್ಯಾನ್ಸಿ ಬಳೆ, ಓಲೆ ತಯಾರಿ ಮಾಡುವುದು ಮತ್ತು ಸೀರೆಗಳಿಗೆ ಕುಚ್ಚು ಹಾಕುವುದು ತಿಂಡಿ-ತಿನಿಸು ತಯಾರಿ, ಗೊಂಬೆಗಳನ್ನು ತಯಾರಿ ಮಾಡುವುದು ಹಾಗೂ ಹಸು, ಕುರಿ, ಕೋಳಿಗಳನ್ನು ಸಾಕುವುದು ಸಹ ಲಾಭದಾಯಕವಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ- ಡಾ|ಹರೀಶ್, ಪಶುವೈದ್ಯಾಧಿಕಾರಿಗಳು, ತಿ.ನರಸೀಪುರ.ಮಾತನಾಡಿ “ಲಾಭದಾಯಕ ಹೈನುಗಾರಿಕೆಯಲ್ಲಿ ಗುಣಮಟ್ಟದ ಹಾಲು ಉತ್ಪಾದನೆ” ಹಾಲಿನಿಂದ ದುಡ್ಡು ಲಾಭ ಎಂದು ಹೇಳಲಾಗದು, ಉಪ ಉತ್ಪನ್ನಗಳ ಮೂಲಕ ಲಾಭವನ್ನಾಗಿ ಪರಿವರ್ತಿಸಬೇಕು. ಅಥವಾ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಹಾಲು ಲಾಭವಾಗಬಹುದು. ಆದಾಯ ದೃಷ್ಠಿಯಿಂದ ಜೆರ್ಸಿ, ಎಚ್.ಎಫ್.ಹಸು ಸಾಕಾಣೆ ಸಾಮಾನ್ಯ, ಜೆರ್ಸಿಹಾಲು ಹೆಚ್ಚಿನ ಕೊಬ್ಬಿನ ಅಂಶದಿಂದ ಕೂಡಿರುತ್ತದೆ. ಎಚ್.ಎಫ್.ಹಾಲು ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಹಾಗಾಗಿ ಡಿಗ್ರಿ ಬರುವುದಿಲ್ಲವೆಂಬ ಸಮಸ್ಯೆ ಸಾಮಾನ್ಯವಾಗಿದೆ. 2.5ಲೀ.ಹಾಲಿನ ಉತ್ಪಾದನೆ ಸರಾಸರಿ 1 ಕೆ.ಜಿ ಸಮತೋಲನ ಪೌಷ್ಠಿಕ ಪಶು ಆಹಾರ ನೀಡಬೇಕು. ಸಿದ್ದ ಪಶು ಆಹಾರಗಳು, ಲವಣಾಂಶಗಳನ್ನು ನೀಡುವುದಾದರೆ ಖರ್ಚು ಹೆಚ್ಚಾಗಬಹುದು. ಸ್ವತಃ ತಯಾರಿಸಿ ಮಾಡುವುದಾದರೆ ಒಂದು ಕೆ.ಜಿ.ಯಲ್ಲಿ 0.5 ಕೆ.ಜಿ ಹಿಂಡಿ, ಉಳಿದ 0.5 ಕೆ.ಜಿ ಅಕ್ಕಿನುಚ್ಚು, ಎಲೆಬೂಸ, ರವೆಬೂಸ, ಹತ್ತಿಬೀಜ, ಕಡ್ಲೆಹೊಟ್ಟು, ಕಾಳುಗಳಪುಡಿ, ಉಪ್ಪಿನ ಅಂಶ ಇತ್ಯಾದಿ ಸೇರಿಸಿ ಕೊಡಬಹುದು. ಅವಕಾಶ ಇದ್ದವರು ಹಸಿರು ಹುಲ್ಲು ಬೆಳೆಸಿ ಕೊಡಬೇಕು. ಹಸಿರು ಹುಲ್ಲು ಒಂದೇ ಹಾಲಿನ ಉತ್ಪಾದನೆ ಮಾಡಲ್ಲ, ನಾರಿನ ಅಂಶ ಇರುವ ಒಣಹುಲ್ಲು ಕೊಡಾ ಕೊಡಬೇಕು. ಒಣಹುಲ್ಲು ಕೊಡುವವರು ಕಡ್ಲೆಹೊಟ್ಟು ಕೊಡುವ ಅವಶ್ಯಕತೆ ಇಲ್ಲ ಯಾಕೆಂದರೆ ಅವೆರಡೂ ನಾರಿನ ಅಂಶಗಳನ್ನು ಹೊಂದಿರುತ್ತದೆ. ನಮ್ಮಲ್ಲಿರುವ ಸಂಪನ್ಮೂಲ ಬಳಸಿ ಪಶು ಆಹಾರದ ಜೊತೆಗೆ ತಪ್ಪದೆ ಲವಣಾಂಶ, ಖನಿಜಾಂಶ ನೀಡಿದಾಗ ಗುಣಮಟ್ಟದ ಹಾಲಿನ ಉತ್ಪಾದನೆ ಸಾಧ್ಯವಾಗುತ್ತದೆ. ಹಸುವಿನ ಮನೋಧರ್ಮ, ವಾತಾವರಣ ಅವಲಂಭಿಸಿ ಗಾಬರಿಮಾಡದೆ ಸಮಯಕ್ಕೆ ಸರಿಯಾಗಿ ಹಾಲು ಕರೆಯಬೇಕು. ಹಸು ನೋಡಿಕೊಳ್ಳುವವರು ಕೊಟ್ಟಿಗೆ ಶುಚಿತ್ವ, ಹಸುವಿನ ಹಾಲು ಕರೆಯುವಾಗ ಕೆಚ್ಚಲನ್ನು ಶುಚಿತ್ವ ಮಾಡಿ ಹಾಲು ಕರೆಯುವುದರಿಂದ ಕೆಚ್ಚಲು ಬಾವು ತಡೆಗಟ್ಟಬಹುದು. ಕಾಲುಬಾಯಿ ಜ್ವರ, ಗಳತಿ ರೋಗ, ಚಪ್ಪರೋಗ ಇತ್ಯಾದಿ ಮಾರಕ ರೋಗಗಳಿಗೆ ವರ್ಷಕ್ಕೆ 2 ಬಾರಿ ರೋಗನಿರೋಧಕ ಲಸಿಕೆಗಳನ್ನು ಹಾಕುವುದರ ಮೂಲಕ ಮುನ್ನೆಚ್ಚರಿಕೆ ವಹಿಸಬೇಕು. ರಕ್ಷಣೆಗಾಗಿ ಹಸುವಿಗೆ ಜೀವ ವಿಮೆ ಮಾಡಿಸಬೇಕು. ಎಂದು ತಿಳಿಸಿದರು. ಇಲಾಖೆಯ ಪಶು ಭಾಗ್ಯ ಕೃಷಿ ಭಾಗ್ಯ ಇತ್ಯಾದಿ ಮಾಹಿತಿಗಳನ್ನು ನೀಡಿ ರೈತರ ಜೊತೆ ಸಂವಾದ ನಡೆಸಿದರು.

ಶಿಲ್ಪ ಮತ್ತು ವಸಂತರವರಿಂದಸ್ವ-ಉದ್ಯೋಗದ ಬಗ್ಗೆ ಪ್ರಾತ್ಯಕ್ಷತೆ.ಮಹಿಳೆಯರು ಸಮಯದ ಪ್ರಜ್ಞೆ ಇಲ್ಲದೆ ಅಡಿಗೆ ಕೆಲಸ ಮತ್ತು ಟಿ.ವಿ ಮುಂದೆ ಕುಳಿತು ಸಮಯದ ಅಪವ್ಯಯ ಮಾಡುತ್ತಿರುವ ಈ ಕಾಲದಲ್ಲಿ ಮನೆಯಲ್ಲೇ ಬಿಸಾಡುವಂತಹ ಪ್ಲಾಸ್ಟಿಕ್, ದಾರ ಮತ್ತು ಪೇಪರ್ ನಿಂದ ಬೇರೆ ಬೇರೆ ಗೃಹ ಬಳಕೆಯ ಮತ್ತು ಅಲಂಕಾರಿಕೆ ವಸ್ತುಗಳನ್ನು ತಯಾರಿ ಮಾಡಿ ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡುವುದರೊಂದಿಗೆ ತನ್ನ ಕಾಲಿನ ಮೇಲೆ ತಾನು ನಿಂತುಕೊಳ್ಳಬಹುದು. ಈ ಬಗ್ಗೆ 2-3 ಸಂಘದ ಸದಸ್ಯರನ್ನು ಸೇರಿಸಿ ತರಬೇತಿ ಕೊಟ್ಟು ಸ್ವ-ಉದ್ಯೋಗಕ್ಕೆ ಪ್ರೇರಣೆಯನ್ನು ನೀಡಬಹುದು ಎಂಬ ಬಗ್ಗೆ ಸ್ವ-ಉದ್ಯೋಗದ ಬಗ್ಗೆ ಪ್ರಾತ್ಯಕ್ಷತೆ ಮೂಖಾಂತರ ಶಿಲ್ಪ ಮತ್ತು ವಸಂತ ರವರು ಮನೆಯಲ್ಲಿ ಕುಳಿತು ಪ್ಯಾನ್ಸಿ ಬಳೆ, ಓಲೆ, ಸೀರೆಗಳಿಗೆ ಕುಚ್ಚು ಹಾಕುವುದನ್ನು ಪ್ರಾಯೋಗಿಕವಾಗಿ ತಿಳಿದರು.

ಕಾರ್ಯಕ್ರಮವನ್ನು ಕೃಷಿ ಮೇಲ್ವಿಚಾರಕರು ಮಧುರಾಜ್‍ರವರು ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ.ಟಿ, ವಲಯದ ಮೇಲ್ವಿಚಾರಕರಾದ ಸಂದೇಶ್, ಹಾಲಿನ ಡ್ಯೆರಿ ಅದ್ಯಕ್ಷರು ವೆಂಕಟಸ್ವಾಮಿ, ಕಾರ್ಯದರ್ಶಿ ಶಿವರುದ್ರೇಗೌಡ್ರು. ಸಂಘದ ಸದಸ್ಯರು ಸೇರಿದಂತೆ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *