MicrofinanceNews

ಧರ್ಮಾಧಿಕಾರಿ ಹೆಗ್ಗಡೆಯವರಿಂದ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಹಾಗೂ ಲಾಭಾಂಶ ವಿತರಣಾ ಸಮಾರಂಭ

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಕೇಂದ್ರ ಸಮಿತಿ ಕಾರ್ಕಳ ಇದರ 4052 ಸ್ವಸಹಾಯ ಸಂಘಗಳ 143 ಒಕ್ಕೂಟಗಳ  ಪದಾಧಿಕಾರಿಗಳ ಪದಗ್ರಹಣ  ಹಾಗೂ ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ದಿನಾಂಕ  02.09.17 ರಂದು ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಸಲಾಯಿತು. ಸದ್ರಿ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಯಾದ ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದರು.  ಕಾರ್ಯಕ್ರಮದಲ್ಲಿ ಶಾಸಕರು ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ವಿ. ಸುನೀಲ್ ಕುಮಾರ್, ಮಾಜಿ ಶಾಸಕರಾದ  ಶ್ರೀ ಎಚ್. ಗೋಪಾಲ್ ಭಂಡಾರಿ, ಮುಖ್ಯ ಅತಿಥಿಗಳಾಗಿ ಮಂಗಳೂರು ವಿಜಯಾಬ್ಯಾಂಕಿನ ಪ್ರಾದೇಶಿಕ ಕಛೇರಿಯ ಉಪ ಮಹಾಪ್ರಬಂಧಕರಾದ ಸುಧಾಕರ್ ನಾಯಕ್,  ಪುರಸಭೆ ಅಧ್ಯಕ್ಷರಾದ ಶ್ರೀಮತಿ ಅನಿತಾ ಅಂಚನ್, ದ.ಕ. ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಎಂ.ಎನ್. ರಾಜೇಂದ್ರ ಕುಮಾರ್ ರವರು ಉಪಸ್ಥಿತರಿದ್ದರು.  ಪರಮ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು  ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಹಾಗೂ  ಲಾಭಾಂಶ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿ  ಮಾತನಾಡಿ ನಾವು ಅನ್ನುವ ಪರಿಕಲ್ಪನೆಯಲ್ಲಿ ಮನುಷ್ಯ ಬೆಳೆಯಬೇಕು. ಸ್ವಸಹಾಯ ಸಂಘಗಳು ನಾವು ಎನ್ನುವ ಅರ್ಥದಲ್ಲಿ ಬೆಳೆದಿದೆ. ತಮ್ಮ ಅಭಿವೃದ್ಧಿ ತಾವೇ ಮಾಡಬೇಕು ಎನ್ನುವ ನಿಟ್ಟಿನಿಂದ ಸ್ವಸಹಾಯ ಸಂಘವನ್ನು ಆರಂಭಿಸಿದ್ದೆವು. ಇದು ನಮ್ಮ ಸಂಘ ಎನ್ನುವ ಭಾವನೆಯಿಂದಲೇ ಸದಸ್ಯರು ಕೆಲಸ ಮಾಡಿರುವುದರಿಂದ ಸಂಘ ಇಷ್ಟೊಂದು ಪ್ರಗತಿ ಕಾಣಲು ಸಾಧ್ಯವಾಗಿದೆ ಎಂದರು. ಶಾಸಕರಾದ ಶ್ರೀ ವಿ. ಸುನೀಲ್ ಕುಮಾರ್‍ರವರು ಲಾಭಾಂಶ ವಿತರಿಸಿ ಮಾತನಾಡಿ ಗ್ರಾಮೀಣಾಭಿವೃದ್ಧಿ ಚಟಿವಟಿಕೆಗಳಿಗೆ ದೊಡ್ಡ ಮಟ್ಟದ ಬುನಾದಿ ಹಾಕಿದವರು  ಡಾ.ಡಿ. ವೀರೇಂದ್ರ ಹೆಗ್ಗಡೆಯವರು. ನೆಲದ ಗುಣಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ಪಂದಿಸಿ ರಾಜ್ಯದಾದ್ಯಂತ ವಿಸ್ತರಣೆಗೊಂಡಿದೆ ಎಂದರು. ಮಾಜಿ ಶಾಸಕರಾದ ಶ್ರೀ ಗೋಪಾಲ್ ಭಂಡಾರಿಯವರು ಮಲ್ಲಿಗೆ ನಾಟಿ ಅನುದಾನ ವಿತರಿಸಿ ಮಾತನಾಡಿ ಸ್ವಾರ್ಥವಿಲ್ಲದ ಸಮಾಜಸೇವೆಯ ಪರಿಕಲ್ಪನೆ ಇಟ್ಟುಕೊಂಡು ಗ್ರಾಮಾಭಿವೃದ್ಧಿ ಯೋಜನೆ ಸಮಭಾವ ಸಮಚಿತ್ತದಲ್ಲಿ ಕೆಲಸ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ  ಪ್ರಾದೇಶಿಕ ನಿರ್ದೇಶಕರಾದ ಮಹಾವೀರ ಅಜ್ರಿ,  ನಿಕಟಪೂರ್ವ ಅಧ್ಯಕ್ಷರಾದ ಪಾಂಡು ಬಿ, ನೂತನ ಅಧ್ಯಕ್ಷರಾದ ಜಯಕುಮಾರ್ ಜೈನ್ ರವರು ಉಪಸ್ಥಿತರಿದ್ದರು. ಜಿಲ್ಲಾ ನಿರ್ದೇಶಕರಾದ ಪುರುಷೋತ್ತಮ್ ಪಿ.ಕೆ.ಯವರು ಸ್ವಾಗತಿಸಿ, ಯೋಜನಾಧಿಕಾರಿ ಕೃಷ್ಣ ಟಿಯವರು ವರದಿ ಮಂಡಿಸಿದರು. ಮೇಲ್ವಿಚಾರಕರಾದ ಪ್ರವೀಣ್ ಮತ್ತು ಗೀತಾ ನಿರೂಪಿಸಿ, ಶ್ರೀಮತಿ ಮಲ್ಲಿಕಾ ವಂದಿಸಿದರು. ತದ ನಂತರ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು.

Leave a Reply

Your email address will not be published. Required fields are marked *