News

ಮೈಸೂರು ಜಿಲ್ಲಾ ನೂತನ ಕಛೇರಿ ಉದ್ಘಾಟನೆ ಅನುಧಾನ ವಿತರಣಾ ಕಾರ್ಯಕ್ರಮ

ಪರೋಪಕಾರ ಸಾರ್ಥಕ ಬದುಕಿನ ಸೂತ್ರವೆಂಬ ನೆಲೆಯಲ್ಲಿ, ತಾನು ನೀಡಿದ ಧಾನ ಒಂದು ವಸ್ತುವಿಗೆ ತುತ್ತಾಗದೆ, ಬಡವರಿಗೆ ಬದುಕುವ ದಾರಿ ಆಗಬೇಕು, ಹಸಿದವರಿಗೆ ಅನ್ನ ನೀಡುವ ಬದಲು ಅನ್ನವನ್ನು ಉತ್ಪಾದಿಸುವ ಕಲೆಯನ್ನು ಕಲಿಸಬೇಕು.

ಪೂಜ್ಯ ವೀರೇಂದ್ರ ಹೆಗ್ಗಡೆಯವರ ಚಿಂತನೆಗಳಿಂದ ಹೊರಬಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಸಮಾಜಿಕವಾಗಿ ಶೈಕ್ಷಣಿಕವಾಗಿ, ದುಳಿದ ಕುಟುಂಬಗಳ ಜನರನ್ನು ಸಂಘಟಿಸಿ ಅವರಲ್ಲಿ ಅಭಿವೃದ್ಧಿ ಎಂಬ ಕನಸುಗಳನ್ನು ಬಿತ್ತಿ ಅವುಗಳನ್ನು ನನಸು ಮಾಡಲು ಅವರೊಂದಿಗೆ ಒಂದಾಗಿ ಜನ ಸಂಘಟನೆಯ ಮೂಲಕ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳನ್ನು ರಚಿಸಿ ಈ ಮೂಲಕ ಯೋಜನೆಯ ಹಲವಾರು ಕುಟುಂಬಗಳಿಗೆ ಕಿರು ಆರ್ಥಿಕ ವ್ಯವಸ್ಥೆಯನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಹಾಗೂ ಕ್ಷೇತ್ರದಿಂದ ಅನುಧಾನಗಳನ್ನು ನೀಡುವ ಮೂಲಕ ಕೃಷಿ ಅಭಿವೃದ್ಧಿ ಕೃಷಿಯೇತರ ಚಟುವಟಿಗಳು ಸ್ವ ಉದ್ಯೋಗ ಜ್ಞಾನ ವಿಕಾಸ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಅಗತ್ಯವಾದ ಮಾಹಿತಿಯನ್ನು ನೀಡುವುದರೊಂದಿಗೆ ಸ್ವಾವಲಂಬನೆ ಜೀವನವನ್ನು ನಡೆಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರೇರಣೆ ನೀಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಪೂಜ್ಯ ಹೆಗ್ಗಡೆಯವರ ಅಧ್ಯಯನ ಪ್ರಯೋಗ ನಿರಂತರ ಪರಿವರ್ತನೆ, ಅವರ ನಿತ್ಯ ಮಂತ್ರ, ಪರಿಣಾಮ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಅಷ್ಷು ಕರಾರುವಕ್ಕು, ಅಚ್ಚುಕಟ್ಟು, ಫಲಪ್ರದ, ಸಾವಿರಾರು ಮಂದಿಯ ಬದುಕಿಗೆ ಹೊಸ ಬೆಳಕು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಲ್ಲಿ ಬಡವರ ದೀನ ದು:ಖಿಗಳ ಕೈ ಹಿಡಿದು ಮುನ್ನಡೆಸುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುತ್ತಿದೆ.

2016-17ನೇ ವರ್ಷವನ್ನು ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತಂತ್ರಜ್ಞಾನದ ವರ್ಷವಾಗಿ ಘೋಷಣೆ ಮಾಡಿದ್ದು, ಆ ಮುಖೇನ 7 ತಾಲೂಕು ಯೋಜನಾಕಛೇರಿಗಳನ್ನು ಒಳಗೊಂಡ ಮೈಸೂರು ಜಿಲ್ಲಾ ಕಛೇರಿಯನ್ನು ನೂತನವಾಗಿ ಪ್ರಾರಂಭಿಸಲಾಗಿದ್ದು, ಜಿಲ್ಲಾ ಕಛೇರಿಯ ಉದ್ಟಾಟನೆ ಮತ್ತು ಹಸಿರು ಇಂಧನ ಕಾರ್ಯಕ್ರಮ, ಸುಜ್ಞಾನ ನಿಧಿ ಶಿಷ್ಯ ವೇತನ ಮತ್ತು ಅಸಾಯಕರಿಗೆ ಮಾಸಾಶನದ ಅನುದಾನಗಳ ವಿತರಣೆ ಕಾರ್ಯಕ್ರಮಯನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಪೂಜ್ಯ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಲಿದ್ದಾರೆ.

ಹಸಿರು ಇಂಧನ ಕಾರ್ಯಕ್ರಮ :- ಕುಗ್ರಾಮಗಳಲ್ಲಿ ವಿದ್ಯುತ್ ಸೌಲಭ್ಯದಿಂದ ವಂಚಿತರಾದ ಜನರಿಗೆ ಹಸಿರು ಇಂಧನ ಪ್ರೋತ್ಸಾಹಿಸುವ ದೃಷ್ಠಿಯಿಂದ ಜನರಿಗೆ ಬೆಳಕನ್ನು ಒದಗಿಸುವುದು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಒದಗಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕಳೆದ ಒಂದುವರೆ ದಶಕಗಳಿಂದ ಹಸಿರು ಇಂಧನ ಕಾರ್ಯಕ್ರಮಗಳಿಗೆ ಪ್ರಾಧ್ಯಾನ್ಯತೆ ನೀಡುತ್ತಾ ಬಂದಿದೆ. ಈ ಕಾರ್ಯಕ್ರಮಕ್ಕೆ 2012ನೇ ವರ್ಷದಲ್ಲಿ ಇಂಗ್ಲೆಂಡ್‍ನ ಆಶ್ಡನ್ ಫೌಡೇಂಶನ್ ಸಂಸ್ಥೆಯವರು ಪ್ರತಿಷ್ಠಿತ ಆಶ್ಡನ್ ಗೋಲ್ಡನ್ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಿರುತ್ತಾರೆ. ಇದರ ಒಂದು ಸವಿ ನೆನಪಿಗಾಗಿ ಮೈಸೂರು ಜಿಲ್ಲೆಯಲ್ಲಿ ಈಗಾಗಲೇ 194 ಕುಟುಂಬಗಳಲ್ಲಿ ಗೋಬರ್ ಗ್ಯಾಸ್, 2077 ಕುಟುಂಬಗಳಲ್ಲಿ ಸೋಲಾರ್ ದೀಪಗಳ ಅನುಷ್ಠಾನ, 5000 ಗ್ರೀನ್ ವೇ ಕುಕ್ ಸ್ಟವ್ ನೀಡಿ ಪರಿಸರ ಸಂರಕ್ಷಣೆಯ ಜೋತೆಯಲ್ಲಿ ಸವಯವ ಇಂಗಾಲವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು ಈ ವರ್ಷದಲ್ಲಿ ಜಿಲ್ಲೆಯಲ್ಲಿ 7 ತಾಲೂಕಿಗಳಲ್ಲಿ 7 ಗ್ರಾಮಗಳನಬ್ನು ಸೋಲಾರ್ ಗ್ರಾಮವನ್ನಾಗಿ ಮಾಡುವರೇ ಪೂರ್ವ ಸಿದ್ದತೆಗಳನ್ನು ಮಾಡಿಕೊಂಡಿದ್ದು ಈಗಾಗಲೇ ಹುಣಸೂರು ತಾಲೂಕಿನ ಯಮಗುಂಬ ಗ್ರಾಮದಲ್ಲಿ 120 ಕುಟುಂಬಗಳಲ್ಲಿ ಮತ್ತು ಕೆ.ಆರ್ ನಗರ ತಾಲೂಕಿನ ಬೀಚನಹಳ್ಳಿ ಗ್ರಾಮದ 100 ಕುಟುಂಬದಲ್ಲಿ ಸೋಲಾರ್ ದೀಪಗಳನ್ನು ಅನುಷ್ಠಾನ ಮಾಡಲಾಗಿದೆ.

ಮಸಾಶನ ವಿತರಣೆ: ನಿರ್ಗತಿಕರು ವಯೋವೃದ್ಧರು, ಅಂಗವಿಕಲರು, ಬುದ್ಧಿಮಾಂಧ್ಯರು ಅಪಘಾತದಿಂದ ನೊಂದ ಕುಟುಂಬ ಆಕಸ್ಮಿಕ ಅವಘಡಗಳಿಗೆ ತುತ್ತಾದ ಜನರಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳು 428 ಮಂದಿಗೆ Rs. 1000 ಮಾಸಾಶನ ನೀಡಲಾಗುತ್ತಿದ್ದು, ಮಾಶಸನ ವಿತರಣೆ ಮಾಡಲಾಗುತ್ತಿದ್ದು. ಇದುವರೆಗೆ ರು. ೨೫ ಲಕ್ಷ ವಿತರಣೆ ಮಾಡಲಾಗಿದೆ

ಪ್ರಗತಿಬಂಧು/ಸ್ವಸಹಯ ಸಂಘ ರಚನೆ: ಮೈಸೂರು ಜಿಲ್ಲೆಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಸೇರಿಸಿಕೊಂಡು ಒಟ್ಟು 20795 ಸ್ವ-ಸಹಾಯ ಸಂಘ ರಚನೆ ಮಾಡಿದ್ದು, ಅದರಲ್ಲಿ 2,22,252 ಮಂದಿ ಸದಸ್ಯರು ಯೋಜನೆಯ ಕಾರ್ಯಕ್ರಮದ ಪಾಲುದಾರರಾಗಿರುತ್ತಾರೆ. ಸಂಘಗಳ ಬಲವರ್ದನೆಗೆ ಪೂರಕವಾಗಿ ಸಂಘಗಳ ಸದಸ್ಯರಿಗೆ ವಿವಿಧ ರೀತಿಯ ತ್ರಾಂತಿಕ ತರಭೇತಿಗಳನ್ನು ನೀಡಲಾಗಿದೆ.

ಉಳಿತಾಯ: ಗಳಿಸುವುದಕ್ಕಿಂತ ಉಳಿಸುವುದು ಅತೀ ಮುಖ್ಯ ಎಂಬ ಮಾತಿನಂತೆ ಇಂದಿನ ಉಳಿತಾಯ ಮುಂದಿನ ಜೀವನಕ್ಕೆ ದಾರಿ ದೀಪವಾಗಿರುತ್ತದೆ. ಹಾಗಾಗಿ ಸಂಘದ ಸದಸ್ಯರಿಗೆ ಉಳಿತಾಯದ ಬಗ್ಗೆ ಹೆಚ್ಚಿನ ಪ್ರಜ್ಞೆ ಮೂಡಿಸಲಾಗಿರುತ್ತದೆ. ಜಿಲ್ಲೆಯಲ್ಲಿ ಸಂಘದ ಸದಸ್ಯರು ಪ್ರತಿವಾರ ರೂ 10 ರಂತೆ ಉಳಿತಾಯ ಮಾಡುತ್ತಿದ್ದು ಇದುವರೆಗೆ ರೂ 4646ಲಕ್ಷ ಉಳಿತಾಯವಾಗಿರುತ್ತದೆ.

ಪ್ರಗತಿನಿಧಿ ವಿತರಣೆ: ಸಂಘದ ಸದಸ್ಯರ ವಿವಿಧ ಉದ್ದೇಶಗಳಿಗೆ ಮುಖ್ಯವಾಗಿ ಕೃಷಿ, ಹೈನುಗಾರಿಕೆ, ಇತರ ಪಶುಸಂಗೋಪನೆ ಸ್ವ-ಉದ್ಯೋಗ, ಶಿಕ್ಷಣ, ಮದುವೆ, ಮನೆ ರಚನೆ, ಮನೆ ರಿಪೇರಿ, ಶೌಚಾಲಯ ರಚನೆ, ವೈದ್ಯಕೀಯ ಚಿಕಿತ್ಸೆ ಹೀಗೆ ಪಾಲುದಾರರ ಅಗತ್ಯತೆಗಳಿಗೆ ಅನುಗುಣವಾಗಿ ಬೇರೆ ಬೇರೆ ಉದ್ದೇಶಗಳಿಗೆ ಯಾವುದೇ ಖರ್ಚಿಲ್ಲದೆ ಸುಲಭ ರೀತಿಯಲ್ಲಿ ಅವರ ಮನೆ ಬಾಗಿಲಿಗೆ ಕಡಿಮೆ ಬಡ್ಡಿಯಲ್ಲಿ ಅಂದರೆ 100 ರೂಪಾಯಿಗೆ ತಿಂಗಳಿಗೆ 0.69 ಪೈಸೆ ಬಡ್ಡಿಯಲ್ಲಿ ಯೂನಿಯನ್ ಬ್ಯಾಂಕಿನಿಂದ ಪ್ರಗತಿನಿಧಿ ನೀಡುತ್ತಿದ್ದು, ಈ ತನಕ ರೂ 75886 ಲಕ್ಷ ಪ್ರಗತಿನಿಧಿ ನೀಡಲಾಗಿದ್ದು 2017-18 ನೇ ಸಾಲಿನಲ್ಲಿ ರೂ 1300ಲಕ್ಷ ಹೊರಬಾಕಿ ಸಾಲವಿರುತ್ತದೆ.

ತಾಂತ್ರಿಕ ತರಬೇತಿಗಳು: ಸಂಘಗಳ ಬಲವರ್ದನೆ, ಪಾರದರ್ಶಕತೆ ಸಕಾಲದಲ್ಲಿ ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಪ್ರಗತಿನಿಧಿ ವಿತರಣೆ, ಮುಂತಾದ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಹಾಗೂ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸದಸ್ಯರಿಗೆ ಸರಿಯಾದ ಮಾಹಿತಿಯನ್ನು ನೀಡುವಲ್ಲಿ ತಾಂತ್ರಿಕ ತರಬೇತಿಗಳು ಪ್ರಮುಖ ಪಾತ್ರ ವಹಿಸುತ್ತಿದ್ದು ಇದರಿಂದಾಗಿ ತಂಡಗಳ ಸದಸ್ಯರಿಗೆ ಅವಶ್ಯಕತೆಗೆ ಅನುಗುಣವಾದ ತರಬೇತಿಗಳನ್ನು ನೀಡುವುದರಿಂದ ತಂಡಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಅನುಕೂಲಕರವಾಗುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಟ್ಟು 2017-18ರಲ್ಲಿ 2443 ತಾಂತ್ರಿಕ ತರಬೇತಿಗಳನ್ನು ನೀಡಲಾಗಿದೆ.

ರೈತ ಕ್ಷೇತ್ರ ಪಾಠಶಾಲೆ: ಸಣ್ಣ ಮತ್ತು ಅತೀ ಸಣ್ಣ ಮಧ್ಯಮ ವರ್ಗದ ರೈತರನ್ನು ಆಯ್ಕೆಮಾಡಿ ಅವರಲ್ಲಿ ಪ್ರಗತಿ ಬಂಧು/ಸ್ವ ಸಹಾಯ ಸಂಘಗಳನ್ನು ರಚಿಸಿ ರೈತರಿಗೆ ಸಮಯಕ್ಕೆ ಸರಿಯಾಗಿ ಬೇಕಾದಂತಹ ಕೃಷಿಯ ಮಾಹಿತಿ, ತಂತ್ರಜ್ಞಾನ ಅಳವಡಿಕೆ, ಮಣ್ಣಿನ ಫಲವತ್ತತೆ, ಪೋಷಕಾಂಶಗಳ ನಿರ್ವಹಣೆ, ನೀರಾವರಿ ವಿಧಾನಗಳ ಅಳವಡಿಕೆ, ಸಾವಯವ ಕೃಷಿ, ಸಸ್ಯ-ಸಂರಕ್ಷಣೆ ಇತ್ಯಾದಿ ವಿಷಯಗಳ ಬಗ್ಗೆ ವಿಷಯ ತಜ್ಞರಿಂದ ಮಾಹಿತಿಯನ್ನು ನೀಡಿ ಕೃಷಿಯನ್ನು ಲಾಭದಾಯಕವಾಗಿ ಮಾಡುವ ನಿಟ್ಟಿನಲ್ಲಿ, 49 ಮಾಹಿತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು 3300 ಮಂದಿ ರೈತರು ತರಬೇತಿಯ ಪ್ರಯೋಜನೆಯನ್ನು ಪಡೆದುಕೊಂಡಿರುತ್ತಾರೆ.

ಶೌಚಾಲಯ ರಚನೆ: ಬಯಲು ಮಲ ವಿಸರ್ಜನಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಣ್ಣು ನೀರು ಗಾಳಿ ಕಲುಷಿತಗೊಳ್ಳದಂತೆ ಹಾಗೂ ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ 2240 ಸದಸ್ಯರು ಶೌಚಾಲಯಗಳನ್ನು ರಚನೆ ಮಾಡಿದ್ದು, ಇವರಿಗೆ ತಲಾ ರೂ.1000/-ದಂತೆ ರೂ.23ಲಕ್ಷ ಅನುದಾನ ವಿತರಣೆ ಮಾಡಲಾಗಿದೆ.

ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ : ವೈಯುಕ್ತಿಕ ಶುಚಿತ್ವ, ಹಣಕಾಸಿನ ವ್ಯವಹಾರ ಆರ್ಥಿಕ ಶಿಸ್ತು. ಕುಟುಂಬ ನಿರ್ವಹಣಾ ಜಾಣ್ಮೆ, ಪೌಷ್ಠಕ ಆಹಾರ ತಯಾರಿ, ಮಕ್ಕಳ ಲಾಲನೆ-ಪಾಲನೆ, ಸ್ವ-ಉದ್ಯೋಗ, ಪರಸರ ಪ್ರಜ್ಞೆ ಮುಂತಾದ ವಿಷಯಗಳಿಗೆ ಪೂರಕವಾಗಿ ಮಹಿಳಾ ಸಬಳಿಕರಣ ದಡಿಯಲ್ಲಿ 175 ಜ್ಞಾನವಿಕಾಸ ಕೇಂದ್ರ ಪ್ರಾರಂಭಗೊಂಡಿದ್ದು, ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ನಡಸಲಾಗುತ್ತಿದೆ.

ದೇವಸ್ಥಾನ ಜೀರ್ಣೋದ್ದಾರಕ್ಕೆ ಅನುದಾನ: ಪುರಾತನ ಕಾಲದ ದೇವಸ್ಥಾನಗಳ ರಕ್ಷಣೆ, ಜಿರ್ಣೋದ್ದಾರ ಹಾಗೂ ಹೊಸದಾಗಿ ದೇವಸ್ಥಾನ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಲಾಗುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 33 ದೇವಸ್ಥಾನಗಳ ಜೀರ್ಣೋದ್ದಾಕ್ಕೆ ರೂ 25.55 ಲಕ್ಷ ಸಹಾಯಧನ ವಿತರಣೆ ಮಾಡಲಾಗಿದೆ.

ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ರಚನೆಗೆ ಸಹಾಯಧನ: ರೈತರ ಜೀವನಾಡಿ “ಹೈನುಗಾರಿಕೆ” ಆ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ ರೈತರ ಹೈನುಗಾರಿಕೆಗೆ ಪೂರಕವಗಿ ಹಾಲಿನ ಡೈರಿ ನಿರ್ಮಾಣಕ್ಕೆ ಯೋಜನೆಯಿಂದ ಸಹಾಯಧನ ನೀಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 161 ಹಾಲು ಉತ್ಪಾದಕರ ಕಟ್ಟಡ ರಚನೆಗೆ ರೂ 76.95 ಲಕ್ಷ ಸಹಾಯಧನ ವಿತರಣೆ ಮಾಡಲಾಗಿದೆ.

ಸ್ವಚ್ಚತಾ ಅಭಿಯಾನ ಕಾರ್ಯಕ್ರಮ: ಗ್ರಾಮ ಮಟ್ಟದಲ್ಲಿ ನಾಗರೀಕ ಪ್ರಜ್ಞೆ ಮೂಡಿಸುವ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡುವ ನಿಟ್ಟಿನಲ್ಲಿ ಗ್ರಾಮ ನೈರ್ಮಲ್ಯ, ತ್ಯಾಜ್ಯ, ವಿಲೇವಾರಿ, ಪ್ರಾಸ್ಟಿಕ್ ನಿಷೇದ ಕುರಿತು ಅರಿವು, ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ, ಗುಟ್ಕ ಪ್ಯಾಕೇಟ್ ಬಿಸಾಡುವುದು, ವೈಯಕ್ತಿಕ ಸ್ವಚ್ಚತೆ, ಹಾಗೂ ಪರಿಸರ ಸ್ವಚ್ಚತೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಶೌಚಾಲಯ ರಚನೆಗೆ ಸಹಾಯಧನ ನೀಡುವುದರೊಂದಿಗೆ ಪರಿಸರ ಆರೋಗ್ಯವನ್ನು ಕಾಪಾಡುವುದರಿಂದ ಶುದ್ಧವಾದ ಗಾಳಿ, ನೀರು ಪಡೆಯಲು ಸಾಧ್ಯ. ಇಲ್ಲದೇ ಹೋದಲ್ಲಿ ಅನೇಕ ಮಾರಕ ಕಾಯಿಲೆಗಳಿಗೆ ಜನಸಮೂಹ ತುತ್ತಾಗುತ್ತೆ, ಆ ನಿಟ್ಟಿನಲ್ಲಿ ಸ್ವಚ್ಚ ಭಾರತದ ಕನಸನ್ನು ನನಸು ಮಾಡಲು ಯೋಜನೆಯ ಸ್ವ-ಸಹಾಯ ಸಂಘಗಳ ಸದಸ್ಯರ ಸಹಭಾಗಿತ್ವದಲ್ಲಿ ಸ್ವಚ್ಚತಾ ಕಾರ್ಯಕ್ರಮದ ಬಗ್ಗೆ ತರಬೇತಿ ಮಾಹಿತಿ, ಜಾಗೃತಿ ಹಾಗೂ ಜಾಥವನ್ನು ಮಾಡುವುದಲ್ಲದೆ,

 

ವಿಷೇಶವಾಗಿ ರಾಷ್ಟ್ರೀಯ ದಿನಾಚರಣೆಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಗಾಂಧಿಜಯಂತಿಯ ದಿನದಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಶುದ್ದಗಂಗಾ ಕುಡಿಯುವ ನೀರಿನ ಘಟಕ: ಗ್ರಾಮಗಳಲ್ಲಿ ಕುಡಿಯುವ ನೀರು ಪ್ಲೋರೈಡ್ ಮತ್ತು ಗಡಸುತನದಿಂದ ಕಲುಶಿತವಾಗಿದ್ದು ಇದರಿಂದ ಬಹಳಷ್ಟು ಸಮಸ್ಯೆಗೂ ತಲೆದೋರುತ್ತಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 5 ಶುದ್ದಗಂಗಾ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿ ಕೇವಲ 10 ಪೈಸೆಯಲ್ಲಿ 1 ಲೀಟರ್ ನೀರನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ಕೃಷಿ ಯಂತ್ರಧಾರೆ ಕಾರ್ಯಕ್ರಮ: ಕರ್ನಾಟಕ ಸರ್ಕಾರ ಕೃಷಿ ಇಲಾಖೆ ಕೃಷಿ ಯಂತ್ರೋಪಕರಣ ಯೋಜನೆಯಡಿಯಲ್ಲಿ ಸಾಮಾನ್ಯ ವರ್ಗದ ರೈತರಿಗೆ ಶೇ50% ಹಾಗೂ ಪ.ಜಾತಿ/ಪ. ಪಂಗಡದ ರೈತರಿಗೆ ಶೇ 90% ಸಹಾಯಧನದಲ್ಲಿ ಹೈಟೆಕ್ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗುತ್ತಿದೆ. ಸಾಮಾನ್ಯವಾಗಿ ರೈತರು ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಾಗಿದ್ದು. ಈ ರೈತರು ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ ತಮ್ಮ ಪಾಲಿನ ವಂತಿಕೆಯನ್ನು ಪಾವತಿಸಿ ಹೈಟೆಕ್ ಯಂತ್ರೋಪಕರಣಗಳನ್ನು ಪಡೆದು ಕೃಷಿಯಲ್ಲಿ ಬಳಕೆ ಮಾಡುವುದು ಕಷ್ಟ ಸಾಧ್ಯವಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಒಳಗೊಂಡಂತೆ ಎಲ್ಲಾ ವರ್ಗದ ರೈತರು ಕೃಷಿ ಚಟುವಟಿಕೆಗಳಲ್ಲಿ ಹೈಟೆಕ್ ಕೃಷಿ ಯಂತ್ರೋಪಕರಣಗಳನ್ನು ಹೆಚ್ಚಾಗಿ ಬಳಸಿ ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಹಾಗೂ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ 7 ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು (ವರುಣ, ಬಿಳಿಗೆರೆ, ದೊಡ್ಡಮಗ್ಗೆ, ಬಿಳಿಕೆರೆ, ಬನ್ನೂರು, ಚುಂಚನಕಟ್ಟೆ ಮತ್ತು ಅಂತರಸಂತೆ ಹೋಬಳಿಗಳಿಲ್ಲಿ ಸ್ಥಾಪಿಸಲಾಗಿದ್ದು, ಸರ್ಕಾರದ ವತಿಯಿಂದ ರೂ 350.00 ಲಕ್ಷ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ರೂ 150.00 ಲಕ್ಷ ಪಾಲಿನೊಂದಿಗೆ ಯಂತ್ರೋಪಕರಣಗಳನ್ನು ಖರೀದಿಸಿ ಸೇವಾ ಕೇಂದ್ರದಲ್ಲಿ ಬಾಡಿಗೆ ರೂಪದಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲಾಗುತ್ತಿದೆ. 320 ಕೃಷಿ ಯಂತ್ರೋಪಕರಣಗಳು ಸೇವಾ ಕೇಂದ್ರದಲ್ಲಿ ಲಭ್ಯವಿದ್ದು ಜಿಲ್ಲೆಯ 4336 ಮಂದಿ ರೈತರು ಕೃಷಿ ಯಂತ್ರಧಾರೆಯ ಪ್ರಯೋಜನೆಯನ್ನು ಪಡೆದಿದ್ದು, 280 ಬೇರೆ ಬೇರೆ ಮಾಹಿತಿ ಪ್ರಾತ್ಯೆಕ್ಷಿಕೆ ಕಾರ್ಯಕ್ರಮಗಳ ಮೂಲಕ ರೈತರಿಗೆ ಅರಿವನ್ನು ಮೂಡಿಸಲಾಗಿರುತ್ತದೆ.

ಈ ದಿನದ ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿದ್ದು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ ಎಲ್ ಗಣಪತಿ ಉಪ ಮಹಾ ಪ್ರಬಂಧಕರು ಕಾರ್ಪೆರೇಶನ್ ಬ್ಯಾಂಕ್ ಮೈಸೂರು. ಇವರು ಸೋಲಾರ್ ಅನುದಾನಗಳನ್ನು ವಿತರಣೆ ಮಾಡಿದರು. ಹೆಚ್. ವಿ ರಾಜೀವ್ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ಸೌಹಾರ್ಧ ಸಹಕಾರ ಬ್ಯಾಂಕ್ ಸುಜ್ಞಾನ ನಿಧಿ ಶಿಷ್ಯವೇತನ, ಸೀಮಾ ಪ್ರಸಾದ್ ಮಹಾ ನಗರ ಪಾಲಿಕೆ ಸದಸ್ಯರು ಮಾಶಾಸನ ವಿತರಣೆ ಮಾಡಿದರು. ಪ್ರಾದೇಶಿಕ ನಿರ್ದೇಶ.ಕರಾದ ಎ. ಶ್ರೀಹರಿ ಮೈಸೂರು ಜಿಲ್ಲೆಯ ನಿರ್ದೇಶಕರಾದ ವಿ.ವಿಜಯ್ ಕುಮಾರ್ ನಾಗನಾಳ, ಯೋಜನಾಧಿಕಾರಿಗಳಾದ ಚಂದ್ರಶೇಖರ್, ಸೋಮನಾಥ್, ಆನಂದ್, ಕೇಶವದೇವಾಂಗರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *