NewsWomen Empowerment

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವು ಇರಲಿ- ಶ್ರದ್ಧಾ ಅಮಿತ್

ದಿನಾಂಕ: 11-09-2017ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆಯ ಮೈಸೂರು ಜಿಲ್ಲಾ ಕಛೇರಿಯಲ್ಲಿ ನಡೆದ ಮಕ್ಕಳ ಸಂರಕ್ಷಣೆಯ ಕುರಿತು ಮೈಸೂರು ಪ್ರಾದೇಶಿಕ ವ್ಯಾಪ್ತಿಯ ಜ್ಞಾನವಿಕಾಸ ಸಮನ್ವಯಾಧಿಕಾರಿಗಳ ಕಾರ್ಯಗಾರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪುತ್ರಿಯಾದ ಶ್ರದ್ಧಾ ಅಮಿತ್‍ರವರು ಉದ್ಘಾಟಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಥಿ ಯೋಜನೆಯು ಜ್ಞಾನವಿಕಾಸ ಕೇಂದ್ರಗಳನ್ನು ಮಾಡುವ ಮೂಲಕ ಗ್ರಾಮೀಣ ಭಾಗದ ಮಹಿಳೆಯರಿಗೆ ವಿವಿಧ ತರಬೇತಿಯನ್ನು ನೀಡುವುದರೊಂದಿಗೆ ಜ್ಞಾನವನ್ನು ವಿಕಸನಗೊಳಿಸಲಾಗುತ್ತಿದೆ. ನಮ್ಮ ದೇಶವು ಸುಸಂಸ್ಕøತ ದೇಶವಾಗಿದ್ದು ಸಂಸ್ಕಾರದಿಂದ ಕೂಡಿದೆ. ಎಲ್ಲಿ ಸಂಸ್ಕಾರವಿರುವುದಿಲ್ಲವೋ ಅಲ್ಲಿ ಅನಾಚಾರ ತಾಂಡವವಾಡುತ್ತಿದೆ. ಮಕ್ಕಳಿಗೆ ಒಳ್ಳೆಯ ಶಾಲೆಗಳಲ್ಲಿ ಶಿಕ್ಷಣ ನೀಡಿದರೆ ಸಾಲದು ಅವರಿಗೆ ಸಂಸ್ಕಾರವನ್ನು ಕಲಿಸಬೇಕು. ಶಿಕ್ಷಣದ ಜೊತೆ ಸಂಸ್ಕಾರ ದೊರೆತಾಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ ಎಂದು ಹೇಳಿದರು. ಪೋಷಕರನ್ನು ಗೌರವಿಸುವ ಮೂಲಕ ಅವರಿಗೆ ನೋವುಂಟು ಮಾಡದೇ ಅವರಿಗೆ ಆಸರೆಯಾಗಬೇಕು. ಅಸೂಯೆ, ದ್ವೇಷದಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ಸತ್ಯ ಧರ್ಮದಲ್ಲಿ ನಡೆದಾಗ ಮಾತ್ರ ಆತ್ಮ ಸಂತೋಷ ಸಾಧ್ಯ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸುಮಾರು 32 ವರ್ಷಗಳಿಂದ ತನ್ನ ಸೇವೆಯಲ್ಲಿ ಹಲವಾರು ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತಾ ಬಂದಿದೆ. ಈ ಎಲ್ಲಾ ಕಾರ್ಯಕ್ರಮಗಳ ಮೂಲ ಉದ್ದೇಶ ಜನರಿಗೆ ಪೂರಕ ಮಾಹಿತಿಗಳು ನಿರಂತರವಾಗಿ ಲಭ್ಯವಿರುವಂತೆ ಮಾಡುವುದು ಮತ್ತು ಅದರ ಚಿಂತನಾ ಸಾಮಥ್ರ್ಯವನ್ನು ವೃದ್ಧಿಸಿ ತಮ್ಮ ಜೀವನದಲ್ಲಿ ಸ್ವಾವಲಂಭಿಗಳಾಗುವಂತೆ ಮಾಡುವುದು ಈ ನಿಟ್ಟನಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವು ಮಾತೃಶ್ರೀ ಹೇಮಾವತಿ.ವಿ ಹೆಗ್ಗಡೆಯವರ ಅಧ್ಯಕ್ಷತೆ ಮತ್ತು ಮಾರ್ಗದರ್ಶನದಲ್ಲಿ ತನ್ನ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ಗ್ರಾಮೀಣ ಮಹಿಳೆಯರನ್ನು ಸಂಘಟಿಸಿ ಅವರಲ್ಲಿ ಜೀವನಕ್ಕೆ ಅಗತ್ಯ ಇರುವ ವಿಚಾರಗಳ ಕುರಿತು ಮಾಹಿತಿ ನೀಡಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.

ಮೈಸೂರು ಪ್ರಾದೇಶಿಕ ವ್ಯಾಪ್ತಿಯಲ್ಲಿ 28 ಸಮನ್ವಯಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದು. ಒಟ್ಟು 650 ಜ್ಞಾನವಿಕಾಸ ಕೇಂದ್ರಗಳಿದ್ದು ಇದರಲ್ಲಿ 3207 ಸ್ವ-ಸಹಾಯ ಸಂಘಗಳನ್ನು ಒಳಗೊಂಡು 34797 ಪಾಲುದಾರ ಕುಟುಂಬಗಳು ಒಳಗೊಂಡಿರುತ್ತಾರೆ. ಪ್ರಾದೇಶಿಕ ವ್ಯಾಪ್ತಿಯಲ್ಲಿ ಕಳೆದ 5 ವರ್ಷಗಳಿಂದ ನಿರಂತರವಾಗಿ ಜ್ಞಾನವಿಕಾಸ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ. ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ ಜವಾಬ್ದಾರಿ, ಕುಟುಂಬದ ಯೋಗಕ್ಷೇಮ, ಆರೋಗ್ಯ ಕಾಪಾಡುವುದು ಹೇಗೆ? ಉತ್ತಮ ಆರೋಗ್ಯಕ್ಕಾಗಿ ಸೇವಿಸಬೇಕಾದ ಪೌಷ್ಠಿಕ ಆಹಾರಗಳು, ಶಿಕ್ಷಣದ ಮಹತ್ವ ಮತ್ತು ವಿವಿಧ ಶೈಕ್ಷಣಿಕ ಅವಕಾಶಗಳು, ಸ್ವಾವಲಂಬಿ ಬದುಕಿಗಾಗಿ ಸ್ವ-ಉದ್ಯೋಗ ಕೈಗೊಳ್ಳಲು ಇರುವ ವಿವಿಧ ಅವಕಾಶಗಳು, ಸರಕಾರಿ ಸೌಲಭ್ಯಗಳು ಮತ್ತು ಮಹಿಳಾ ಪರ ಇರುವ ಕಾನೂನು ವ್ಯವಸ್ಥೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನಮ್ಮ ಗ್ರಾಮೀಣ ಭಾಗದ ಮಹಿಳೆಯರಿಗೆ ನೀಡಲಾಗುತ್ತಿದೆ. ಅತ್ಯಂತ ಸರಳವಾದ ರೀತಿಯಲ್ಲಿ ವಿವಿಧ ಮಾಧ್ಯಮಗಳ ಮೂಲಕ ಮಾಹಿತಿಯನ್ನು ತಲುಪಿಸಲಾಗುತ್ತಿದೆ. ಪ್ರಾತ್ಯಕ್ಷಿಕೆ ಮಾದರಿಗಳು ಮತ್ತು ಶಿಬಿರಗಳು ಅತ್ಯುತ್ತಮ ಮೌಲ್ಯಗಳನ್ನು ಸಾರುವಂತಹ ಚಲನಚಿತ್ರಗಳು, ವಿವಿಧ ಸಾಕ್ಷ್ಯ ಚಿತ್ರಗಳು, ಚರ್ಚೆಗಳು, ಅಧ್ಯಯನ ಪ್ರವಾಸಗಳು, ಕೌಶಲ್ಯ ತರಬೇತಿ, ಆಟಪಾಠಗಳಿಂದ, ಕಿರುಪ್ರಹಸನಗಳು ಹೀಗೆ ನಾನಾ ವಿಧದ ಚಟುವಟಿಕೆ ಮೂಲಕ ಪ್ರಾದೇಶಿಕ ವ್ಯಾಪ್ತಿಯಲ್ಲಿ ಒಟ್ಟು 2070 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಿಂದ ಮಹಿಳೆಯರು ವಿಶೇಷ ಪ್ರೇರಣೆಯನ್ನು ಪಡೆದುಕೊಂಡು ಇವರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ ಮತ್ತು ಅವರಲ್ಲಿ ಧನಾತ್ಮಕ ಬದಲಾವಣೆಯನ್ನು ತರಲಾಗಿದೆ.

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಗುರುತಿಸಬಹುದಾದ ಕಾರ್ಯಕ್ರಮಗಳಾದ ಪ್ರಾದೇಶಿಕ ವ್ಯಾಪ್ತಿಯಲ್ಲಿ 15 ಬಾಲ್ಯವಿವಾಹವನ್ನು ತಡೆಯಲಾಗಿದೆ, ಸುಮಾರು 2558 ಕುಟುಂಬಗಳಿಗೆ ಸರಕಾರ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ, 235 ಕಾಲೋನಿ ಕುಟುಂಬಗಳಲ್ಲಿ ಸ್ವಚ್ಚತೆ ಅರಿವು ಮೂಡಿಸಲಾಗಿದೆ. 10196 ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ಕುರಿತು ಅರಿವು ಮೂಡಿಸಿ ಸಮಸ್ಯೆ ನಿವಾರಣೆ ಮಾಡಲಾಗಿದೆ. ಮಾಹಿತಿ ನೀಡಿ 4565 ಶೌಚಾಲಯ ರಚನೆ ಮಾಡಿಸಲಾಗಿದೆ 6214 ಮಹಿಳೆಯರು ಸ್ವ-ಉದ್ಯೋಗ ಕೈಗೊಂಡು ಸ್ವಾವಲಂಬನ ಜೀವನ ನಡೆಸುತ್ತಿದ್ದಾರೆ. ಹೀಗೆ ವಿವಿಧ ರೀತಿಯ ಬದಲಾವಣೆಗೆ ಜ್ಞಾನವಿಕಾಸ ಕಾರ್ಯಕ್ರಮವು ತನ್ನ ಚಾಪನ್ನು ಮೂಡಿಸಿದೆ.

ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಡಾ|| ಅಶ್ವಿನಿ, ಮನೋಶಾಸ್ತ್ರಜ್ಞರು ಮುಕ್ತ ಸಂಸ್ಥೆ ಬೆಂಗಳೂರು, ಮೈಸೂರು ಜಿಲ್ಲಾ ನಿರ್ದೇಶಕರಾದ ವಿ.ವಿಜಯಕುಮಾರ್ ನಾಗನಾಳ, ಯೋಜನಾಧಿಕಾರಿಗಳಾದ ಸೋಮನಾಥ್, ಚಂದ್ರಶೇಖರ್.ಯು.ಎನ್, ಸದಾಶಿವ, ಜ್ಞಾನವಿಕಾಸ ಸವiನ್ವಯಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *