AgricultureNewsTraining

ಕಾರ್ಕಳದಲ್ಲಿ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ ತಾಲೂಕಿನ ಅಜೆಕಾರು ವಲಯದ ಶಿರ್ಲಾಲು ಗ್ರಾಮದ ಶ್ರೀ ಸಿದ್ದಲಕ್ಷ್ಮಿ ಸಭಾಭವನದಲ್ಲಿ ದಿನಾಂಕ 10.09.17 ರಂದು ವಲಯಮಟ್ಟದ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಮಾನ್ಯ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಹರೀಶ್ ನಾಯಕ್ ರವರು ಉದ್ಘಾಟಿಸಿ ಕೃಷಿ ವಿಚಾರ ಸಂಕಿರಣವು ರೈತರ ಕೃಷಿಯನ್ನು ಹೆಚ್ಚಿಸಲು ಹಾಗೂ ಜ್ಞಾನವನ್ನು ವೃದ್ಧಿಸಲು ಕೃಷಿಯ ಕಡೆಗೆ ಮನಸ್ಥಿತಿಯನ್ನು ಬದಲಾಯಿಸಲು ಸಹಕಾರಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿರ್ಲಾಲಿನ ಪ್ರಗತಿಪರ ಕೃಷಿಕರಾದ ಗುಣಪಾಲ್ ಕಡಂಬರವರು ಸಣ್ಣ ಹಿಡುವಳಿದಾರರು ತಮ್ಮ ಜಮೀನಿನಲ್ಲಿ ಅಲ್ಪಾವಧಿ ಹಾಗೂ ದೀರ್ಘಾವಧಿ ಬೆಳೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಯೋಜನಾಧಿಕಾರಿ ಕೃಷ್ಣ ಟಿ ಯವರು ಮಾತನಾಡಿ ರೈತರು ಹೆಚ್ಚು ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಎರಡು ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲ ವಿಷಯವಾಗಿ ರೈತರ ಆದಾಯ ದ್ವಿಗುಣಗೊಳಿಸುವ ತಂತ್ರಜ್ಞಾನಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಡಾ| ಧನಂಜಯ ಹಿರಿಯ ವಿಜ್ಞಾನಿಗಳು, ಕೆ.ವಿ.ಕೆ. ಬ್ರಹ್ಮಾವರ ಇವರು ಮಾತನಾಡಿ ಮಣ್ಣಿನ ಪರೀಕ್ಷೆ ಪೋಷಕಾಂಶಗಳು ಹಾಗೂ 5 ರಿಂದ 10 ಸೆಂಟ್ಸ್ ನಲ್ಲಿ ತರಕಾರಿ ಕೃಷಿ ಅಳವಡಿಕೆ ಮಾಡುವ ಬಗ್ಗೆ ಮಾಹಿತಿ ನೀಡಿದರು. ಡಾ | ಚೈತನ್ಯ ರವರು ಕಾಳು ಮೆಣಸಿನ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಎರಡನೇ ವಿಷಯವಾಗಿ ಕೃಷಿ ಯಂತ್ರದಾರೆ ರೈತರಿಗೆ ವರದಾನ ಇದರ ಬಗ್ಗೆ CHSC ಪ್ರಬಂಧಕರಾದ ಶೇಖರ್ ವೈ ಮಾಹಿತಿ ನೀಡಿದರು. ಶ್ರೀ ಪ್ರಭಾತ್ ಯುವ ಪ್ರಗತಿಪರ ಕೃಷಿಕರು ಅನುಭವ ಹಂಚಿಕೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ರಾಜು ಶೆಟ್ಟಿ, ಶ್ರೀ ಸುದರ್ಶನ್ ಅತಿಕಾರಿ, ಶ್ರೀ ಶಾಂತಿರಾಜ್ ಜೈನ್, ಶ್ರೀ ದಯಾನಂದ್ ನಾಯಕ್, ಶ್ರೀ ಶಶಿಧರ್ ಕುಲಾಲ್, ರವಿಕಾಂತ್ ಶೆಟ್ಟಿ, ಸುಕೇಶ್ ಕುಲಾಲ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಶಿಕಿರಣ್ ಕೃಷಿ ಅಧಿಕಾರಿ ನಿರೂಪಿಸಿ, ರಾಜಶ್ರೀಯವರು ಸ್ವಾಗತಿಸಿ ವಂದಿಸಿದರು. ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *