AgricultureNews

ತಿ.ನರಸೀಪುರದಲ್ಲಿ ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮ

ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಶ್ರೀನಂದಿಬಸವೇಶ್ವರ ಕಲ್ಯಾಣ ಮಂಟಪ, ಬೀಡನಹಳ್ಳಿ ಗ್ರಾಮ,ತಿ.ನರಸೀಪುರದಲ್ಲಿ ದಿನಾಂಕ:25.09.2017ರಂದು ನಡೆಸಲಾಯಿತು.

ಸಿರಿಧಾನ್ಯ ಮತ್ತು ಹೈನುಗಾರಿಕೆಗೆ ಸಂಸ್ಥೆ ಉತ್ತೇಜನ ನೀಡುತ್ತಿದ್ದು, ಸಂಘದ ಸದಸ್ಯರಿಗೆ ಪೂರಕವಾಗಿ ಲಾಭದಾಯಕ ಹೈನುಗಾರಿಕೆಯಲ್ಲಿ ಕೋಳಿ, ಕುರಿ, ಮೇಕೆ, ಮೊಲ ಇತ್ಯಾದಿ ಸಗಾಣಿಕೆ ಮಾಡಿ ಆರ್ಥಿಕ ಪ್ರಗತಿಗೆ ಹೈನುಗಾರಿಕೆಯು ಪೂರಕವಾಗಿರುತ್ತದೆ ಎಂದು ಸದಸ್ಯರಿಗೆ ತಿಳಿಸಲು, ಈಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಶ್ರೀಯುತ ವೆಂಕಟೇಶ್, ಎ.ಪಿ.ಎಂ.ಸಿ ಅಧ್ಯಕ್ಷರು, ನರಸೀಪುರ.”ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಂಘದ ಸದಸ್ಯರಿಗೆ ಸಿರಿ ಧಾನ್ಯ ಮತ್ತು ಹೈನುಗಾರಿಕೆಯು ಸೇರಿದಂತೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರ ಮಾಹಿತಿ ಪಡೆದುಕೊಂಡು ಸಂಘದ ಸದಸ್ಯರು ಅಭಿವೃದ್ಧಿಯಾಗಲು ಸಹಾಯಕವಾಗುತ್ತಿದೆ” ಎಂದರು.

ಶ್ರೀಯುತ ವಿ.ವಿಜಯ ಕುಮಾರ್ ನಾಗನಾಳ ನಿರ್ದೇಶಕರು ಶ್ರೀ ಕ್ಷೇ.ಧ.ಗ್ರಾ.ಯೋ (ರಿ.) ಮೈಸೂರು ಜಿಲ್ಲೆ ಪ್ರಾಸ್ತಾವಿಕ ಮಾತನಾಡಿ. “ಮೈಸೂರು ಜಿಲ್ಲೆಯಲ್ಲಿ ಸುಮಾರು 13 ಸಾವಿರ ಸ್ವಸಹಾಯ ಸಂಘಗಳಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿ.ನರಸೀಪುರ ತಾಲೂಕಿಗೆ ಪಾದಾರ್ಪಣೆಗೊಂಡು 05 ವರ್ಷ ಕಳೆದಿದೆ. ಈ ಅವಧಿಯಲ್ಲಿ ಸ್ವಸಹಾಯ ಸಂಘ ಹಾಗೂ ಪ್ರಗತಿಬಂಧು ತಂಡ ರಚನೆಗೊಂಡಿದ್ದು, ಪ್ರಸ್ತುತ ಹೊಸದಾಗಿ ಜೆ.ಎಲ್.ಜಿ(ಜಂಟಿ ಭಾಧ್ಯತೆ ಗುಂಪುಗಳು) ಸಂಘ ರಚನೆ ಮಾಡುತ್ತಿದ್ದು, ಇದಕ್ಕೆ ಪೂರಕಾವಾಗಿ ತರಬೇತಿ ನೀಡಿ ಪ್ರಗತಿನಿಧಿ ನೀಡಿ ಅಭಿವೃದ್ಧಿಯಾಗಲು ಸ್ವಾವಲಂಭಿಯಾಗಿ ಬದುಕಲು ಸರ್ಕಾರಿ ಇಲಾಖೆಯಿಂದ ಸಿಗುವ ಸೌಲಭ್ಯಗಳು, ಹೈನುಗಾರಿಕೆ ಇಲಾಖೆಯಲ್ಲಿ ಸೌಲಭ್ಯಗಳನ್ನು ಪಡೆದು ಸದಸ್ಯರು ಅಭಿವೃದ್ಧಿಯಾಗಲು ಸಹಾಯಕವಾಗಿದೆ ಈ ಬಗ್ಗೆ ಮಾಹಿತಿ ಪಡೆದುಕೊಂಡು ಅಭಿವೃದ್ಧಿ ಹೊಂದುವಂತೆ ತಿಳಿಸಿದರು” ಹಾಗೆಯೇ ಯೋಜನೆಯಿಂದ ಸಿಗುವ ಅನುದಾನಗಳಾದ ಸರಳ ಕೊಟ್ಟಿಗೆ ರಚನೆ, ಗೋಬರ್ ಗ್ಯಾಸ್ ಅಳವಡಿಕೆ, ಯಂತ್ರೋಪಕರಣಗಳ ಅಳವಡಿಕೆ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಡಾ|ಲಿಂಗರಾಜು, ಪಶುವೈದ್ಯಾಧಿಕಾರಿಗಳು, ಪಶುಪಾಲನಾ ಇಲಾಖೆ, ಬನ್ನೂರು ಮಾತನಾಡಿ. ಹೆಚ್ಚಿನ ಹಾಲು ಇಳುವರಿಗೆ ತಳಿಗಳ ಆಯ್ಕೆ, ಮಾದರಿ ಸರಳ ಕೊಟ್ಟಿಗೆ ರಚನೆ, ಹಸಿರು ಹುಲ್ಲು, ರೋಗನಿರೋಧಕ ಲಸಿಕೆಗಳ ಮಹತ್ವ, ಗೋಬರ್ ಗ್ಯಾಸ್ ಉಪಯೋಗದ ಬಗ್ಗೆ ತಿಳಿಸುತ್ತಾ ಹೈನುಗಾರಿಕೆಯಲ್ಲಿ ಹಾಲು ಮಾತ್ರ ಲಾಭವಲ್ಲ ಅದರಿಂದ ಸಗಣಿ ಮತ್ತು ಹಸುವಿನ ಗಂಜಲ ಇದರಿಂದ ಭೂಮಿಯ ಫಲವತ್ತತೆಯು ಹೆಚ್ಚಾಗಿರುತ್ತದೆ ಎಂದು ತಿಳಿಸಿದರು. ಹಾಗೆಯೇ ಹೈನುಗಾರಿಕೆಯಲ್ಲಿ ಹಸು, ಕುರಿ, ಕೋಳಿ, ಮೊಲ ಸಾಗಾಣಿಕೆಯಿಂದ ಬರುವ ರೋಗಗಳ ಹತೋಟಿ ಕ್ರಮಗಳು ಮತ್ತು ಸಾಕಾಣಿಕೆ ಬಗ್ಗೆ ಮತ್ತು ಮೇವಿನ ಸಂಗ್ರಹಣೆ ಬಗ್ಗೆ ಮತ್ತು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳು ಶ್ರೀಮತಿ ಶಿವಮ್ಮ ಪುಟ್ಟರಾಜು, ಗ್ರಾ.ಪಂ.ಅ.ಬೀಡಹಳ್ಳಿ ಮಾತನಾಡಿ. “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳನ್ನು ರಚನೆ ಮಾಡಿ ಪ್ರಗತಿನಿಧಿಯನ್ನು ವಿತರಣೆ ಮಾಡಿ ಸದಸ್ಯರ ಅಭಿವೃದ್ಧಿಗೆ ಸಹಕಾರಿಯಾಗುತ್ತಿರುವುದಲ್ಲದೇ ಸರ್ಕಾರಿ ಸೌಲಭ್ಯಗಳನ್ನು ಬಗ್ಗೆ ಮಾಹಿತಿ ನೀಡಿ ರೈತರು ಅಭಿವೃದ್ಧಿಗೂ ಶ್ರಮಿಸುತ್ತಿರುವುದು ತುಂಬಾ ಸಂತೋಷಕರ ವಿಷಯ” ಎಂದು ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಕೃಷಿ ಮೇಲ್ವಿಚಾರಕರು ಮಧುರಾಜ್‍ರವರು ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕರಾದ ಕು|ಸವಿತ, ಊರಿನ ಮುಖಂಡರಾದ ನವೀನ್, ದಾಸೇಗೌಡ, ಸಿದ್ದರಾಜು, ರಾಜು, ಬಸವರಾಜು, ಪ್ರಕಾಶ್, ನಂದೀಶ್ ಸೇರಿದಂತೆ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

One thought on “ತಿ.ನರಸೀಪುರದಲ್ಲಿ ಸಿರಿ ಧಾನ್ಯ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಕಾರ್ಯಕ್ರಮ

Leave a Reply

Your email address will not be published. Required fields are marked *