News

ಪಾನಮುಕ್ತರ ಅಭಿನಂದನೆ ಮತ್ತು ನವ ಜೀವನೋತ್ಸವ ಕಾರ್ಯಕ್ರಮ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನೋತ್ಸವದ ಪ್ರಯುಕ್ತ ಪಾನಮುಕ್ತರ ಅಭಿನಂದನೆ ಮತ್ತು ನವ ಜೀವನೋತ್ಸವ ಕಾರ್ಯಕ್ರಮವನ್ನು ದಿನಾಂಕ 02.10.2017ರಂದು ಡಾ|| ಬಿ.ಆರ್.ಅಂಬೇಡ್ಕರ್ ಭವನ, ತಿ.ನರಸೀಪುರದಲ್ಲಿ ನಡೆಸಲಾಯಿತು.

ಅಕ್ಟೋಬರ್ 2ರ ಕಾರ್ಯಕ್ರಮವನ್ನು ಯೋಜನೆಯ ಬಹುಮುಖ್ಯ ಕಾರ್ಯಕ್ರಮವನ್ನಾಗಿ ಪರಿಗಣಿಸಿ ಅಂದು ಜನಜಾಗೃತಿ ವೇದಿಕೆಯ ದುಶ್ಚಟಮುಕ್ತ ಸಮಾಜ ನಿರ್ಮಾಣದ ಉದ್ದೇಶ, ಸಾಧನೆ ಮತ್ತು ಪೂಜ್ಯ ಖಾವಂದರ ಸ್ವಸ್ಥ ಸಮಾಜದ ಆಶಯವನ್ನು ವ್ಯಾಪಕವಾಗಿ ಸಾದರಪಡಿಸುವುದು ಹಾಗೂ ಕರ್ನಾಟಕದಲ್ಲಿ ಪಾನನಿಷೇಧ ಜಾರಿಗೊಳಿಸಲು ಹೇಳಿಕೆಗಳನ್ನು ನೀಡುವುದರ ಮೂಲಕ ಸರಕಾರಕ್ಕೆ ಮತ್ತು ರಾಜಕೀಯ ಪಕ್ಷಗಳಿಗೆ ಒತ್ತಾಯಿಸುವುದು. ಹಾಗೂ ಸಭೆಯಲ್ಲಿ ಪಕ್ಷಗಳ ಮುಖಂಡರುಗಳ ಮೂಲಕ ಈ ಉದ್ದೇಶವನ್ನು ಈಡೇರಿಸುವಂತೆ ಆಗ್ರಹಿಸುವುದಾಗಿದೆ. ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಾನನಿಷೇಧವನ್ನು ಜಾರಿಗೊಳಿಸುವ ಕುರಿತಂತೆ ಪ್ರನಾಳಿಕೆಯಲ್ಲಿ ವಿಷಯ ಸೇರ್ಪಡೆಗೆ ಒತ್ತಾಯಿಸುವುದು.

ಶ್ರೀ ಆರ್.ಧರ್ಮಸೇನ್, ವಿಧಾನ ಪರಿಷತ್ ಸದಸ್ಯರು, ಮೈಸೂರು, ಉದ್ಘಾಟಿಸಿ “ಶ್ರೀ ಕ್ಷೇತ್ರ ಸಮಾಜದ ಒಳಿತಿಗಾಗಿ ಉತ್ತಮ ಕಾರ್ಯ ಮಾಡುತ್ತಿದೆ. ಇಂತಹ ಕಾರ್ಯಗಳಲ್ಲಿ ವಿಚಾರವನ್ನು ತಿಳಿದುಕೊಳ್ಳುವ, ಅದರ ಮೂಲಕ ನಮ್ಮ ಜೀವನವನ್ನು ಸುಧಾರಿಸಿಕೊಳ್ಳುವ ಕೆಲಸ ನಾವು ಮಾಡಬೇಕಾಗಿದೆ. ಗಾಂಧೀಜಯಂತಿಯ ಪುಣ್ಯದಿನದಿಂದ, ಮದ್ಯವ್ಯಸನದಿಂದ ಮುಕ್ತರಾಗಿರುವ ವ್ಯಕ್ತಿಗಳನ್ನು ಸೇರಿಸಿ ಮಾರ್ಗದರ್ಶನ ನೀಡುವ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ” ಎಂದು ತಿಳಿಸಿದರು.

ಡಾ|| ಎಂ.ಪಿ.ಸೋಮಶೇಖರ್, ಮುಖ್ಯಸ್ಥರು, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಜೆ.ಎಸ್.ಎಸ್ ಕಾಲೇಜು, ಮೈಸೂರು, ಮಾತನಾಡಿ “ಯಾವುದೇ ಸಮಸ್ಯೆಗೂ ಕುಡಿತ ಪರಿಹಾರವಲ್ಲ” ಮನೆಯಲ್ಲಿರುವ ವೈಯಕ್ತಿಕ ಸಮಸ್ಯೆಗಳಾದ ಗಂಡ-ಹೆಂಡತಿ ಜಗಳ, ಅತ್ತೆಸೊಸೆ ಜಗಳ, ಸಾಲದ ಹೊರೆ ಅಥವಾ ಇತರೇ ಆರ್ಥಿಕ ತೊಂದರೆಗಳನ್ನು ಕಾರಣವಾಗಿಟ್ಟು, ಕುಡಿತದ ವ್ಯಸನಿ ಆದರೆ ಸಮಸ್ಯೆಗಳು ಪರಿಹಾರವಾಗಲ್ಲ. ಒಂದು ಸಾರಿ ಮದ್ಯವಸನಕ್ಕೆ ತುತ್ತಾದರೆ ಅವನು ಯಾವತ್ತು ಅಮಲು ರೋಗಿ. ಮದ್ಯದ ಮುಂದೆ ನಾನು ಬಲಹೀನನಾಗಬಾರದು, ಆತ್ಮ ವಿಶ್ವಾಸದಿಂದ ದೃಢಮನಸ್ಸಿನಿಂದ ವ್ಯಸನವನ್ನು ದೂರ ಮಾಡಬಹುದು. ದಿನನಿತ್ಯ ಈ ದಿನ ನಾನು ಕುಡಿಯುವುದಿಲ್ಲ ಎಂದು ಪ್ರಮಾಣ ಮಾಡಿದಾಗ, ಮಾನಸಿಕವಾಗಿ ಶಕ್ತನಾಗಿ ಈ ರೋಗದಿಂದ ಮುಕ್ತನಾಗಬಹುದು. ಸಾಯಂಕಾಲ ಸೆಳೆತದ ಸಮಯದಲ್ಲಿ ವ್ಯಸನದಿಂದ ದೂರ ಇರುವವರ ಜೊತೆ ಬೆರೆತು, ಭಾವನೆಗಳನ್ನು ಹಂಚಿಕೊಂಡಾಗ ನೋವನ್ನು ಮರೆತು, ಹಳೆಯ ಪಿಡುಗಿನಿಂದ ಹೊರಬರಲು ಮಾನಸಿಕ ಸ್ವಾಸ್ಥ್ಯ ಬೆಳೆಯಲು ಅನುಕೂಲವಾಗುತ್ತದೆ. ಮನೆಯ ಇತರರೆಲ್ಲರೂ ಬೆಂಬಲ, ಪ್ರೇರಣೆ ನೀಡಿದರೆ ವ್ಯಕ್ತಿಯನ್ನು ವ್ಯಸನ ಮುಕ್ತನನ್ನಾಗಿಸುವ ಕೆಲಸ ಸುಲಭವಾಗುತ್ತದೆ ಎಂದು ತಿಳಸಿದರು.

ಪೂಜ್ಯ ವಾಟಾಳು ಸ್ವಾಮಿಗಳು ಆಶೀರ್ವಚನ ನೀಡಿದರು. ಶ್ರೀ ಪ್ರಭುಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿ ಸದಸ್ಯರು, ತಿ.ನರಸೀಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ ಸುನೀತಾಪ್ರಭು ಯೋಜನಾಧಿಕಾರಿಗಳು, ತಿ.ನರಸೀಪುರ, ಪ್ರಾಸ್ತಾವಿಕ ಮಾತನಾಡಿ. ಕಾರ್ಯಕ್ರಮದ ಮತ್ತು ಯೋಜನೆಯ ಉದ್ದೇಶ ತಿಳಿಸಿದರು. ವಿ.ವಿಜಯಕುಮಾರ್ ನಾಗನಾಳ ನಿರ್ದೇಶರಕು, ಕಿರಗಸೂರು ಶಂಕರ್ ಅಧ್ಯಕ್ಷರು ಕಬ್ಬುಬೆಳೆಗಾರರ ಸಂಘ, ಸುರೇಶ್ ಪೊಲೀಸ್ ಕ್ರೈಂ ಉಪನಿರೀಕ್ಷಕರು, ಹೊನ್ನನಾಯಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪೂಜ್ಯ ಧರ್ಮಾಧಿಕಾರಿಗಳ ಸಂದೇಶವನ್ನು ಆಡಿಯೋ ಮೂಲಕ ತಿಳಿಸಲಾಯಿತು.ಪಾನಮುಕ್ತ ಚುನಾವಣೆ ಮತ್ತು ಪಾನ ನಿಷೇಧಿಸುವಂತೆ ಮನವಿಯನ್ನು ಮಾನ್ಯ ವಿಧಾನ ಪರಿಷತ್ ಸದಸ್ಯರ ಮೂಲಕ ಮುಖ್ಯಮಂತ್ರಿಗಳಿಗೆ ನೀಡಲಾಯಿತು. ನವಜೀವನ ಸದಸ್ಯರಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಯಿತು.ವಲಯ ಮೇಲ್ವಿಚಾರಕರಾದ ಸಂದೇಶ್ ಸ್ವಾಗತಿಸಿ, ಯೋಗೀಶ್.ಕೆ ನಿರೂಪಿಸಿ ವಂದಿಸಿದರು. ನವಜೀವನ ಸಮಿತಿ ಮತ್ತು ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *