DharmasthalaNewsNews on Groups

ಸ್ವಸಹಾಯ ಸಂಘಗಳಿಂದ ಸದಸ್ಯರಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ಯು ಕಳೆದ ನಾಲ್ಕು ದಶಕಗಳಿಂದ ಕರ್ನಾಟಕ ರಾಜ್ಯದಲ್ಲಿ ಸ್ವಸಹಾಯ ಸಂಘಗಳನ್ನು ಮತ್ತು ಜಂಟಿ ಬಾಧ್ಯತಾ ಸಂಘಗಳನ್ನು ರಚಿಸಿ ಬ್ಯಾಂಕುಗಳೊಡನೆ ಜೋಡಿಸುತ್ತಿದೆ. ಸಂಘದಲ್ಲಿರುವ ಪ್ರತಿಯೊಬ್ಬ ಸದಸ್ಯರ ಕ್ರಿಯಾ ಯೋಜನೆ ತಯಾರಿ, ಅಗತ್ಯವಿರುವ ತರಬೇತಿಗಳು, ಉಳಿತಾಯ ಸಂಗ್ರಹಣೆ ಮತ್ತು ಬ್ಯಾಂಕಿಗೆ ಜಮೆ, ಬ್ಯಾಂಕಿನಿಂದ ಸಾಲ ವಿತರಣೆ ಮತ್ತು ಮರುಪಾವತಿ ಇತ್ಯಾದಿ ಜವಾಬ್ದಾರಿಗಳನ್ನು ಯೋಜನೆಯ ಕಾರ್ಯಕರ್ತರು ನಿರ್ವಹಿಸಿಕೊಂಡು ಬರುತ್ತಾರೆ. ಬ್ಯಾಂಕುಗಳೊಡನೆ ಚರ್ಚಿಸಿ, ಸಾಧ್ಯವಾದಷ್ಟು ಕಡಿಮೆ ಬಡ್ಡಿಯಲ್ಲಿ ವಿವಿಧ ಆವಶ್ಯಕತೆಗಳಿಗೆ ಅಗತ್ಯವಿರುವ ಆರ್ಥಿಕ ನೆರವಿನ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಸ್ವಸಹಾಯ ಸಂಘವು ಒಂದು ಕಿರು ಆರ್ಥಿಕ ಸಂಸ್ಥೆಯಾಗಿ
ಕಾರ್ಯನಿರ್ವಹಿಸುತ್ತಿದೆ.

ಬ್ಯಾಂಕುಗಳಿಂದ ಬರುವ ಮೊತ್ತವನ್ನು ಸದಸ್ಯರುಗಳಿಗೆ ವಿತರಿಸುವಾಗ ನಡೆಯುವ ವ್ಯವಹಾರದಲ್ಲಿ ಗುಂಪುಗಳಿಗೂ ಸ್ವಲ್ಪ ಲಾಭಾಂಶ ಲಭ್ಯವಾಗುತ್ತದೆ. ಈ ಮೊತ್ತವನ್ನು ಸಂಘಗಳು ತಮ್ಮ ಸದಸ್ಯರಿಗೆ ಹಂಚಿಕೆ ಮಾಡುವ ಕಾರ್ಯಕ್ರಮವೇ ಲಾಭಾಂಶ ಹಂಚಿಕೆ. ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಉಂಟಾಗಿರುವ ಬರಗಾಲವನ್ನು ಗಮನದಲ್ಲಿಟ್ಟುಕೊಂಡು ಗುಂಪುಗಳಲ್ಲಿರುವ ಲಾಭಾಂಶದ 80% ರಷ್ಟನ್ನು ವಿತರಣೆ ಮಾಡಬೇಕೆಂದು ಗುಂಪುಗಳು ನಿರ್ಧರಿಸಿದ್ದು, ಇದರನ್ವಯ ಸುಮಾರು ಎರಡು ಲಕ್ಷ ಸಂಘಗಳು ರೂ. 201 ಕೋಟಿ ಮೊತ್ತವನ್ನು ವಿತರಣೆ ಮಾಡುತ್ತಿವೆ.

ಕರ್ನಾಟಕ ರಾಜ್ಯದಾದ್ಯಂತ ನಡೆಯಲಿರುವ ಈ ಕಾರ್ಯಕ್ರಮದ ಸಾಂಕೇತಿಕ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಧರ್ಮಸ್ಥಳದಲ್ಲಿ ದಿನಾಂಕ 22-10-2017ರಂದು ಸಂಜೆ 4-00 ಗಂಟೆಗೆ ನೆರವೇರಿಸಲಿದ್ದಾರೆ.

Invitation

Leave a Reply

Your email address will not be published. Required fields are marked *