ಮಾನವ ಸಂಪನ್ಮೂಲ ತರಬೇತಿ ಕೇಂದ್ರ, ಮೈಸೂರಿನಲ್ಲ್ಲಿ ಐದು ದಿನಗಳ ರಂಗವಿಜ್ಞಾನ ತರಬೇತಿ ಕಾರ್ಯಗಾರದ ಉದ್ಘಟನಾ ಸಮಾರಂಭ ನಡೆಸಲಾಯಿತು. ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀಯುತ ಮಂಡ್ಯ ರಮೇಶ್ ರವರು ಉಪಸ್ಥಿತರಿದ್ದರು. ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿ ಕಾರ್ಯಕ್ರಮವನ್ನು ದೀಪಬೆಳಗುವುದರ ಮೂಲಕ ತರಬೇತಿಗೆ ಚಾಲನೆಯನ್ನು ನೀಡಿದರು. ಪ್ರಾದೇಶಿಕ ನಿರ್ದೇಶಕರು ಸನ್ಮಾನ್ಯ ಎ ಶ್ರೀಹರಿ, ಪ್ರಾಂಶುಪಾಲರಾದ ಸಂತೋಷರಾವ್.ಪಿ ಮತ್ತು ರಂಗ ಉಪನ್ಯಾಸಕರಾದ ಶ್ರೀ ಚಂದ್ರಹಾಸ ರವರು ಉಪಸ್ಥಿತರಿದ್ದರು.
ಮಾನವ ಸಂಪನ್ಮೂಲ ತರಬೇತಿ ಕೇಂದ್ರದಲ್ಲಿ ಐದು ದಿನಗಳ ರಂಗವಿಜ್ಞಾನ ತರಬೇತಿ ಕಾರ್ಯಗಾರ ಉದ್ಘಾಟನೆ
