NewsTraining

ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಯಡಿಯಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ

ದಿನಾಂಕ:14.11.2017ರಂದು ಅಂಬೇಡ್ಕರ್ ಭವನ, ತಿ.ನರಸೀಪುರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯಡಿಯಲ್ಲಿ ಕಂಪ್ಯೂಟರ್ ತರಬೇತಿ ನಡೆಸಲಾಯಿತು. ತರಬೇತಿಗೆ ಪ್ರಸ್ತುತ ಆಧ್ಯತೆ ನೀಡಿರುವ ಉದ್ದೇಶ ವಿದ್ಯಾವಂತರಾಗಿಯೂ ನಿರುದ್ಯೋಗಿಗಳಾಗಿರುವ ಸಂಘದ ಸದಸ್ಯರನ್ನು ಆಯ್ಕೆ ಮಾಡಿ ಕಂಪ್ಯೂಟರ್ ತರಬೇತಿ ನೀಡಿ ಸ್ವ-ಉದ್ಯೋಗಿಗಳನ್ನಾಗಿ ಮಾಡುವುದು. 

ಕಾರ್ಯಕ್ರಮದ ಉದ್ಘಾಟನೆ ಶ್ರೀಯುತ ಉಮೇಶ್, ಅಧ್ಯಕ್ಷರು, ಪುರಸಭೆ, ತಿ.ನರಸೀಪುರ ಮಾಡಿದರು. “ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದಲ್ಲಿ ಬದಲಾವಣೆಯಾಗುತ್ತಿದ್ದು, ಕಂಪ್ಯೂಟರ್ ಜ್ಞಾನ ಎಲ್ಲರಿಗೂ ಅಗತ್ಯವಾಗಿರುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರುದ್ಯೋಗಿಗಳಿಗೆ ತರಬೇತಿಯನ್ನು ನೀಡಿ ಸ್ವ-ಉದ್ಯೋಗಿಗಳನ್ನಾಗಿ ಮಾಡುವ ಈ ಕಾರ್ಯಕ್ರಮ ತುಂಬಾ ಶ್ಲಾಘನೀಯವಾಗಿದ್ದು”, ಎಂದು ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಸುನೀತಾಪ್ರಭು ಯೋಜನಾಧಿಕಾರಿ ತಿ.ನರಸೀಪುರ, ವಹಿಸಿದ್ದರು. “ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸ್ವ-ಉದ್ಯೋಗಕ್ಕೆ ಪ್ರೇರಣೆ ನೀಡುವಂತ ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದು, ಕಳೆದ ವರ್ಷದಲ್ಲಿ ಟೈಲರಿಂಗ್ ತರಬೇತಿ, ಡ್ರೈವಿಂಗ್ ಚಾಲನಾ ಪರವಾನಗಿ ತರಬೇತಿ ಹೀಗೆ ಅನೇಕ ತರಬೇತಿಗಳನ್ನು ನೀಡಲಾಗಿದೆ. ಪ್ರಸ್ತುತ ವರ್ಷದಲ್ಲಿ ನಿರುದ್ಯೋಗಿ ಯುವಕ ಯುವತಿಯರನ್ನು ಗುರುತಿಸಿ ಅವರಿಗೆ ಕಂಪ್ಯೂಟರ್‍ನ ಜ್ಞಾನವನ್ನು ನೀಡಿ ಸ್ವ-ಉದ್ಯೋಗಿಗಳನ್ನಾಗಿ ಮಾಡಲು ನಿರ್ಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಸದ್ರಿ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮದ ಕುರಿತು ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇತರ ಸ್ವ-ಉದ್ಯೋಗಗಳಿಗೆ ಒತ್ತು ನೀಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರಂತರ ಶ್ರಮಿಸಲಾಗುತ್ತದೆ.” ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಬಸವರಾಜ್ ಹೆಚ್ ಚಿಗರಿ, ಸಹಾಶೀಲ್ದಾರರು, ತಿ.ನರಸೀಪುರ ತಾಲೂಕು ಆಗಮಿಸಿದ್ದರು. “ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅನೇಕ ಕಾರ್ಯಕ್ರಮಗಳಿಗೆ ಭಾಗವಹಿಸಿದ್ದು, ಅನೇಕ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಸರ್ಕಾರದಿಂದ ಅನೇಕ ಕಾರ್ಯಕ್ರಮಗಳು ಇದ್ದರೂ ಕೂಡ ಕ್ಲಪ್ತ ಸಮಯಕ್ಕೆ ಜನರ ಬಳಿ ತಲುಪುವುದಿಲ್ಲ. ಧರ್ಮಸ್ಥಳ ಯೋಜನೆಯಿಂದ ಗ್ರಾಮೀಣ ಜನರರಲ್ಲಿರುವ ನಿರುದ್ಯೋಗಿ ಯುವಕ ಯುವತಿಯರನ್ನು ಆಯ್ಕೆ ಮಾಡಿ ತರಬೇತಿಗಳನ್ನು ನೀಡುತ್ತಿರುವುದು ಉತ್ತಮ ವಿಷಯವಾಗಿದೆ” ಎಂದು ತಿಳಿಸುತ್ತಾ ಸರ್ಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಶ್ರೀಯುತ ಪ್ರಭುಸ್ವಾಮಿ, ಜಿಲ್ಲಾ ಜನಜಾಗೃತಿ ಸದಸ್ಯರು ಮಾತನಾಡಿ “ಏನೇ ವಿದ್ಯಾಭ್ಯಾಸ ಮಾಡಿದರೂ ಕೂಡ ಪ್ರಸ್ತುತ ತಾಂತ್ರಜ್ಞಾನ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಇಲ್ಲದೇ ಹೋದಲ್ಲಿ ಅವನು ಪರಿಪೂರ್ಣನಲ್ಲ ಆ ನಿಟ್ಟಿನಲ್ಲಿ ಈ ತರಬೇತಿ ನಿಮಗೆ ತುಂಬಾ ಸಹಾಯವಾಗುತ್ತದೆ. ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸಿದಂತಹ ಮದ್ಯವರ್ಜನ ಶಿಬಿರ ಮಹತ್ವ ಪೂರ್ಣ ಕಾರ್ಯಕ್ರಮವಾಗಿದ್ದು, 400 ಜನ ಮದ್ಯವ್ಯಸನಿಗಳು ನವಜೀವನಕ್ಕೆ ಪಾದಾಪ್ರಣೆ ಮಾಡಿರತುತಾರೆ.” ಎಂದು ತಿಳಿಸಿದರು.

ಶ್ರೀಯುವ ಬಿ.ಎಂ.ಮಹೇಂದ್ರ, ಮುಖ್ಯಸ್ಥರು, ಕಿಯೋನಿಕ್ಸ್ ಸಂಸ್ಥೆ ತಿ.ನರಸೀಪುರ. ಕಿಯೋನಿಕ್ಸ್ ಸಂಸ್ಥೆಯ ತರಬೇತಿಯ ವಿಷಯಗಳ ಬಗ್ಗೆ ಮತ್ತು ಸಮಯ ಪಾಲನೆ, ಹಾಜರಾತಿ, ಪರೀಕ್ಷೆಯ ತಯಾರಿ, ಕಲಿಕಾ ಆಸಕ್ತಿಗಳ ಬಗ್ಗೆ ಮಾಹಿತಿ ನೀಡಿದರು.ಇದೇ ಸಂದರ್ಭ ವಲಯದ ಮೇಲ್ವಿಚಾರಕರಾದ ಸಂದೇಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ.ಟಿ, ಆಯ್ಕೆಯಾದ ಯುವಕ ಯುವತಿಯರು ಹಾಜರಿದ್ದರು.

One thought on “ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಯಡಿಯಲ್ಲಿ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ

  1. ಸ್ವಾಮಿ ನಾನು ನಿರುದ್ಯೋಗಿ ಬಡ ರೈತ ನನಗೆ ಕೆಲಸ ಕೊಡಿ

Leave a Reply

Your email address will not be published. Required fields are marked *