ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ 1 ತಿಂಗಳು ವಾಹನ ಚಾಲನೆಯ ಬಗ್ಗೆ ವಾಹನ ಚಾಲನೆಯನ್ನು ಡ್ರೈವಿಂಗ್ ಸ್ಕೂಲ್ ಮುಖಾಂತರ ತರಬೇತಿ ನೀಡಲಾಗಿದ್ದು, ಒಟ್ಟು 37 ಜನರಿಗೆ ತಲಾ ರೂ. 2000/- ದಂತೆ ಒಟ್ಟು ಮೊತ್ತ ರೂ. 74000/- ಅನುದಾನವನ್ನು ವಿತರಣೆಯನ್ನು ಮಾಡಿದ್ದು, ಪ್ರತಿಯೊಬ್ಬರು ಉತ್ತಮರೀತಿಯಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡು ಅಭಿವೃದ್ಧಿಯತ್ತ ಮುಖ ಮಾಡಬೇಕು ಎಂದು ಕೃಷಿ ಮೇಲ್ವಿಚಾರಕರಾದ ಮಹಾಂತೇಶ್ರವರು ತಿಳಿಸಿದರು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಸಂತೋಷ್ ಎಸ್, ಒಕ್ಕೂಟದ ಅಧ್ಯಕ್ಷರಾದ ಪ್ರಕಾಶ್, ಸೇವಾಪ್ರತಿನಿಧಿ ವಿಶ್ವನಾಥ, ಶಶಿಕಲಾ ಮತ್ತಿತರರು ಉಪಸ್ಥಿರಿದ್ದರು.
ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿವಾಹನ ಚಾಲನಾ ತರಬೇತಿ ಕಾರ್ಯಕ್ರಮ
