NewsWomen Empowerment

ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ವರದಿ-ನವೆಂಬರ್-2017

ಹಿರಿಯೂರು ತಾಲೂಕು:

ತಂಪು ಪಾನೀಯ ಮತ್ತು ಹಣ್ಣಿನ ಜಾಮ್ ತಯಾರಿಕಾ ತರಬೇತಿ

ಗ್ರಾಮಾಭಿವೃದ್ದಿ ಯೋಜನೆ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಕೇಂದ್ರದ ಮಹಿಳೆಯರಿಗೆ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇಲಾಖೆಯ ಅಧಿಕಾರಿಗಳು ಪ್ರಾಯೋಗಿಕವಾಗಿ ಹಣ್ಣಿನ ರಸ ತಯಾರಿಕೆ ಮತ್ತು ಹಣ್ಣಿನ ಜಾಮ್ ತಯಾರಿಕೆಯ ಕುರಿತು ತರಬೇತಿ ನೀಡಿದರು. ಕೇಂದ್ರದ 40 ಮಂದಿ ಸದಸ್ಯರು ಪಾಲ್ಗೊಂಡು ತರಬೇತಿ ಪಡಕೊಂಡರು.

ಬಂಗಾರಪೇಟೆ ತಾಲೂಕು:

ಸ್ವಚ್ಚತಾ ಜಾಗೃತಿ ಅಭಿಯಾನ

ಬಂಗಾರಪೇಟೆ ಯೋಜನಾ ವ್ಯಾಪ್ತಿಯಲ್ಲಿ ಪುರಸಭೆ ಸಹಯೋಗದೊಂದಿಗೆ ಸ್ವಚ್ಚತಾ ಜಾಗೃತಿ ಅಭಿಯಾನವನ್ನು ಕರಪತ್ರ ಬಿಡುಗಡೆ ಮಾಡುವುದರ ಮೂಲಕ ಚಾಲನೆ ನೀಡುತ್ತಾ ಸ್ವಚ್ಚ ನಗರವನ್ನಾಗಿ ಮಾಡಲು ಈಗಾಗಲೇ ಸರ್ಕಾರ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದೊಟ್ಟಿಗೆ ವ್ಯವಸ್ತಿತವಾದ ಕಸ ವಿಲೇವಾರಿ ಯೋಜನೆಯನ್ನು ಅಳವಡಿಸಿದ್ದು ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸುವುದು ಅಗತ್ಯವಿದೆ ಎಂದು ಕೇಂದ್ರದ ಸದಸ್ಯರ ಮೂಲಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ನೆಲಮಂಗಲ ತಾಲೂಕು:

ಸ್ವ-ಉದ್ಯೋಗದಡಿಯಲ್ಲಿ ಪೇಪರ್ ಪ್ಲೇಟ್ ತಯಾರಿ

ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಕೇಂದ್ರದ ಸದಸ್ಯರಿಗೆ ಪ್ರಾಯೋಗಿಕವಾಗಿ ಪೇಪರ್ ಪ್ಲೇಟ್ ತಯಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಇದರಲ್ಲಿ ಕೇಂದ್ರದ 10 ಮಂದಿ ಮಹಿಳೆಯರು ಒಟ್ಟಾಗಿ ಸ್ವ ಉದ್ಯೋಗ ಆರಂಭಿಸಲು ಆಸಕ್ತಿಯನ್ನು ವ್ಯಕ್ತಪಡಿಸಿದ್ದು ಯೋಜನೆಯಿಂದ ಪ್ರಗತಿನಿಧಿ ಪಡಕೊಂಡು ಇದೀಗ ಸ್ವಉದ್ಯೋಗ ಆರಂಭಿಸಿರುತ್ತಾರೆ.

ಧಾರವಾಡ ತಾಲೂಕು:

ವಿಶ್ವ ಮಧುಮೇಹ ದಿನಾಚಾರಣೆಯ ಪ್ರಯುಕ್ತ ಆರೋಗ್ಯ ತಪಾಸಣಾ ಶಿಬಿರ

ವಿಶ್ವ ಮಧುಮೇಹ ದಿನಾಚಾರಣೆಯ ಪ್ರಯುಕ್ತ ನಾರಾಯಣ ಹಾರ್ಟ ಸೆಂಟರ್ ಸಹಯೋಗದೊಂದಿಗೆ ಉಚಿತ ಮಧುಮೇಹ ತಪಾಸಣಾ ಶಿಬಿರ ಹಮ್ಮಿಕೋಳ್ಳಲಾಗಿತ್ತು. ಮದ್ಯವಯಸ್ಸಿನ ಮಹಿಳೆಯರಲ್ಲಿ ಸಾಮಾನ್ಯವಾಗಿ ರಕ್ತದ ಒತ್ತಡ ಮತ್ತು ಮಧುಮೇಹ ಖಾಯಿಲೆಗಳು ಕಂಡು ಬರುತ್ತಿದ್ದು ಸರಿಯದ ಸಮಯಕ್ಕೆ ಆಹಾರ ಸೇವಿಸದೆ ಇರುವುದರ ಪರಿಣಾಮಗಳ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಂಡು 45 ಮಂದಿ ಸದಸ್ಯರ ತಪಾಸಣೆ ಮಾಡಿ ಆರೋಗ್ಯ ಸಲಹೆ ನೀಡಲಾಯಿತು.

ಬಾಗೇಪಲ್ಲಿ ತಾಲೂಕು:

ಬೀದಿ ನಾಟಕ ಕಾರ್ಯಕ್ರಮ

ಬಾಗೇಪಲ್ಲಿ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಮನೆಗೊಂದು ಶೌಚಾಲಯ ಹಾಗೂ ಮನೆಯ ಸುತ್ತಮತ್ತಲಿನ ಸ್ವಚ್ಛತೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು.

ಗೋಕಾಕ್ ತಾಲೂಕು:

ಕೇಂದ್ರದ ಸದಸ್ಯರಿಗೆ ರೂಪೇ ಕಾರ್ಡ್ ವಿತರಣೆ

ಜ್ಞಾನವಿಕಾಸ ಕಾರ್ಯಕ್ರಮ ಮತ್ತು ಕಾರ್ಪರೇಶನ್ ಬ್ಯಾಂಕ್‍ನ ಸಹಯೋಗದಲ್ಲಿ ಜ್ಞಾನವಿಕಾಸ ಕೇಂದ್ರದ 30 ಸದಸ್ಯರಿಗೆ ರೂಪೇ ಕಾರ್ಡ್‍ನ್ನು ವಿತರಿಸಿ ಬ್ಯಾಂಕಿನ್ ಅಧಿಕಾರಿಗಳು ರೂಪೇ ಕಾರ್ಡ್‍ನ ಬಳಕೆಯ ಕುರಿತು ಸದಸ್ಯರಿಗೆ ಮಾಹಿತಿಯನ್ನು ನೀಡಿದರು.

 

ಹುಕ್ಕೇರಿ ತಾಲೂಕು:

ಮಕ್ಕಳ ರಕ್ಷಣೆಯ ಕುರಿತು ಸ್ಥಳೀಯ ಶಾಲೆಗಳಲ್ಲಿ ಮಾಹಿತಿ ಕಾರ್ಯಕ್ರಮ

ತಾಲೂಕಿನ ಸ್ಥಳೀಯ ಶಾಲೆಗಳ ಮಕ್ಕಳಿಗೆ ಮಕ್ಕಳ ಮೇಲಾಗುವ ವಿವಿಧ ರೀತಿಯ ದೌರ್ಜನ್ಯದ ಕುರಿತಂತೆ ಮತ್ತು ದೌರ್ಜನ್ಯವಾದಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಕುರಿತು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕುಷ್ಟಗಿ ತಾಲೂಕು:

ಅಧ್ಯಯನ ಪ್ರವಾಸದಲ್ಲಿ ವಿವಿಧ ಸರಕಾರಿ ಇಲಾಖೆಗಳ ಭೇಟಿ ಮತ್ತು ಇಲಾಖೆ ಅಧಿಕಾರಗಳಿಂದ ಮಾಹಿತಿ

ಹುಕ್ಕೇರಿ ಯೋಜನಾ ಕಛೇರಿ ವ್ಯಾಪ್ತಿಯಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಅಧ್ಯಯನ ಪ್ರವಾಸ ಹಮ್ಮಿಕೊಂಡಿದ್ದು ಮುಖ್ಯವಾಗಿ ಮಹಿಳೆಯರಿಗಿರುವ ವಿಶೇಷ ಸರಕಾರಿ ಸೌಲಭ್ಯಗಳ ಕುರಿತು ಮಾಹಿತಿಗೆಂದು ವಿವಿಧ ಇಲಾಖೆಗಳಾದ ಮಹಿಳಾ ಪೋಲಿಸ್ ಠಾಣೆ, ಜಿಲ್ಲಾ ನ್ಯಾಯಾಲಯ, ಮಹಿಳಾ ಸಾಂತ್ವನ ಕೇಂದ್ರ, ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ನೀಡಲಾಯಿತು.

ಗದಗ ತಾಲೂಕು:

ಯೋಜನೆಯ ಮೂಲಕ ಸ್ವಾವಲಂಭಿ ಜೀವನ

ಗದಗ ತಾಲೂಕಿನ ನಾಗಸಮುದ್ರ ವಲಯದ ನರಸಾಪುರ ಕಾರ್ಯಕ್ಷೇತ್ರದ “ಶ್ರೀ ಮಂಜುನಾಥ” ಕೇಂದ್ರದ ಸದಸ್ಯರಾದ ರಾಧಾರವರು ಕಳೆದ 8 ವರ್ಷಗಳಿಂದ ಸ್ವಸಹಾಯ ಸಂಘಕ್ಕೆ ಸೇರಿಕೊಂಡಿದ್ದು ಪ್ರಥಮ ಹಂತದಲ್ಲಿ 10,000 ರೂಗಳನ್ನು ಮನೆ ನಿರ್ಮಾಣಕ್ಕೆ, ಎರಡನೇ ಹಂತದಲ್ಲಿ 30000/-ಬೇಕರಿ ವ್ಯಾಪಾರಕ್ಕೆ, ಮೂರನೇ ಹಂತದಲ್ಲಿ 50000/-ರೂಗಳನ್ನು ಬೇಕರಿ ನಿರ್ಮಾಣಕ್ಕೆ,ನಾಲ್ಕನೇ ಹಂತದಲ್ಲಿ ರೂ.100000/-ರೂ.ಗಳನ್ನು ಬೇಕರಿ ಸಾಮಾನು ಖರೀದಿಗೆ ಯೋಜನೆಯ ಪ್ರಗತಿ ನಿಧಿಯನ್ನು ಹಂತ-ಹಂತವಾಗಿ ಪಡೆದುಕೊಂಡು ಮನೆಯಲ್ಲಿ ಸ್ವೀಟ್ ಬಾಕ್ಸ್‍ಗಳನ್ನು ತಯಾರಿಸಿ ಬೇಕರಿಗಳಿಗೆ ಮಾರಾಟ ಮಾಡುತ್ತಾ ಉತ್ತಮ ಲಾಭವನ್ನು ಗಳಿಸುತ್ತಾ ಸ್ವಾವಲಂಭಿ ಜೀವನ ಸಾಗಿಸುತ್ತಿದ್ದಾರೆ.

ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಡರಾಗಲು ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ಮತ್ತು ಕೇಂದ್ರದ ಸದಸ್ಯರಿಗೆ ನೀಡುವ ತರಬೇತಿಗಳು ಮತ್ತು ಪ್ರೇರಣೆ ಹಾಗೂ ಪ್ರಗತಿನಿಧಿ ನಮಗೆ ತುಂಬಾ ಉಪಯುಕ್ತವಾಗಿದ್ದು ಮಹಿಳೆಯರು ಅಭಿವೃದ್ದಿ ಹೊಂದಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲ್ಲಾ ರೀತಿಯಲ್ಲೂ ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತೀರ್ಥಹಳ್ಳಿ ತಾಲೂಕು:

ಕೇಂದ್ರದ ಸದಸ್ಯರ ಕೌಶಲ್ಯ ದಿನ

ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಕೌಶಲ್ಯ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದಸ್ಯರಲ್ಲಿರುವ ಕೌಶಲ್ಯಗಳನ್ನು ಗುರಿತಿಸಿ ಪ್ರೋತ್ಸಾಹಿಸಲಾಯಿತು. ಕೆಂದ್ರದ 35 ಮಂದಿ ಸದಸ್ಯರು ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ತಯಾರಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶನ ಮಾಡಿದರು.

ಸಕಲೇಶಪುರ ತಾಲೂಕು:

ಮಹಿಳೆಯರ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ

ಮಂಗಳೂರಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಸಕಲೇಶಪುರ ಯೋಜನಾ ವ್ಯಾಪ್ತಿಯ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಬಿ.ಪಿ. ಶುಗರ್, ಕಣ್ಣಿನ ತೊಂದರೆ, ಹೃದಯ ತಪಾಸಣೆ, ಎಲುಬು ಮತ್ತು ಮೂಳೆ ಸಮಸ್ಯೆ ತಪಾಸಣೆ, ಮಹಿಳೆಯರಿಗೆ ಸಂಬಂಧ ಪಟ್ಟ ಇನ್ನಿತರ ಖಾಯಿಲೆಗಳ ಬಗ್ಗೆ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. 16 ಜನರಿಗೆ ಕಣ್ಣಿನ ಸಮಸ್ಯೆ ಗುರುತಿಸಿ ರಿಯಾಯಿತಿ ದರದಲ್ಲಿ ಕನ್ನಡಕವನ್ನು ನೀಡಲಾಯಿತು. 11 ಜನರಿಗೆ ಶುಗರ್ ಸಮಸ್ಯೆ ಇರುವುದು ಕಂಡು ಬಂತು. 15 ಜನರಿಗೆ ಬಿ.ಪಿ ಸಮಸ್ಯೆ ಇದ್ದು ಇದಕ್ಕೆ ಸೂಕ್ತ ಮಾಹಿತಿ ಮತ್ತು ಚಿಕಿತ್ಸೆಯನ್ನು ನೀಡಲಾಯಿತು. ಹಲವಾರು ಮಹಿಳೆಯರಿಗೆ ಸಂಬಂದಪಟ್ಟ ಸಮಸ್ಯೆಗಳನ್ನು ಗುರುತಿಸಿ ಮಾಹಿತಿ ಮತ್ತು ಚಿಕಿತ್ಸೆಯನ್ನುನೀಡಲಾಯಿತು. ಸದ್ರಿ ಕಾರ್ಯಕ್ರಮದಲ್ಲಿ 300 ಜನ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *