AgricultureNews

ಮಾವಲಿ ವಲಯದ ಮಂಚಿ ಗ್ರಾಮದಲ್ಲಿ ಕೃಷಿ ವಿಚಾರ ಸಂಕೀರಣ ಕಾರ್ಯಕ್ರಮ

ದಿನಾಂಕ:21/12/17ರಂದು ಮಾವಲಿ ವಲಯದ ಮಂಚಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಪ್ರಗತಿಬಂಧು ಸ್ವಸಹಾಯ ತಂಡಗಳ ಸಹಬಾಗೀತ್ವದಲ್ಲಿ ಹೈನುಗಾರಿಗೆ ಮತ್ತು ಇತರ ಪಶುಸಂಗೋಪನೆಯ ಬಗ್ಗೆ ಕೃಷಿ ವಿಚಾರ ಸಮಕೀರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಸತೀಶ್.ಎಂ.ರವರು ಉದ್ಘಾಟನೆ ಮಾಡಿ, “ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಣ್ಣ ಸಣ್ಣ ರೈತರನ್ನು ಸಂಘಡಿಸಿಕೊಂಡು ವಿವಿಧ ರೀತಿಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ, ಕೃಷಿಕರು ಕೃಷಿ ಮಾಡುವುದರೊಂದಿಗೆ ಹೈನುಗಾರಿಕೆ ಮತ್ತು ಇತರ ಪಶುಸಂಗೋಪನೆಗೆ ಆದ್ಯತೆ ಕೊಡುವುದರಿಂದ ಆರ್ಥಿಕಮಟ್ಟ ಸುಧಾರಿಸಲು ಸಾಧ್ಯ ಎಂದು ಉದ್ಘಾಟಕರ ಮಾತನ್ನಾಡಿ, ಕೃಷಿಕರು ಈ ರೀತಿ ಚಟುವಟಿಕೆಗಳನ್ನು ಕೈಗೊಳ್ಳಲು ಯೋಜನೆ ಯೋಜನೆ ಅತೀ ಸುಲಭದಲ್ಲಿ ಆರ್ಥಿಕ ಸಹಕಾರವನ್ನು ನೀಡುತ್ತಿದ್ದು, ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು”.

ಯೋಜನಾಧಿಕಾರಿ ಶ್ರೀ ರಮೇಶ್.ಪಿ.ಕೆ. ಮಾತನಾಡಿ “ಸ್ಥಳಿಯವಾಗಿರುವ ಜ್ವಲಂತ ಸಮಸ್ಯೆಗಳಿಗೆ ಪೂರಕವಾಗಿ ಯೋಜನೆ ಕಾರ್ಯಕ್ರಮವನ್ನು ಮಾಡುತ್ತಿದ್ದು, ಸ್ವ-ಉದ್ಯೋಗಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಐಉ ಸಂಘಗಳ ಮುಖಾಂತರ ಯುವಕ ಯುವತಿಯರಿಗೆ, ವಿವಿಧ ರೀತಿಯ ಸ್ವಉದ್ಯೋಗಕ್ಕೆ ತರಬೇತಿಗಳ ಮುಖಾಂತರ ಪ್ರೇರಣೆಯನ್ನು ನೀಡಲಾಗುತ್ತದೆ. ಇದರೊಂದಿಗೆ ಕೃಷಿಕರು ಹೈನುಗಾರಿಕೆಗೆ ಆದ್ಯತೆ ನೀಡುವುದರಿಂದ ಆರ್ಥಿಕತೆಯಲ್ಲಿ ಹಿನ್ನಡೆ ಕಾಣುವುದಿಲ್ಲ, ಕೃಷಿ ಮತ್ತು ಹೈನುಗಾರಿಕೆ ಹಳ್ಳಿಗಳಿಗೆ ವರದಾನ” ಎಂದು ತಿಳಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯುವ ಬಗ್ಗೆ ತಿಳಿಸಿದರು.

ಡಾII ಜಗದೀಶ್.ಎಸ್.ಸಿ. ಹಿರಿಯ ಪಶು ವೈಧ್ಯಾದಿಕಾರಿಗಳು. ಇವರು ಹೈನುಗಾರಿಕೆಯನ್ನು ಮಾಡುವಾಗ, ತಳಿಗಳ ಆಯ್ಕೆ, ಹಸುಗಳಿಗೆ ಆಹಾರ ನೀಡುವುದು, ಹಸಿರು ಮತ್ತು ಒಣಮೇವು ನೀಡುವ ಬಗ್ಗೆ ಮತ್ತು ಕರುಗಳ ಪೋಷಣೆ ಬಗ್ಗೆ ,ಕುರಿಸಾಕಾಣಿಕೆಯ ಬಗ್ಗೆ ತಿಳಿಸಿ ಜಾನುವಾರುಗಳಿಗೆ ಬರುವ ರೋಗ ಮತ್ತು ಲಸಿಕೆಯ ಬಗ್ಗೆ ಮಾಹಿತಿ ನೀಡಿದರು.”

ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಮ್ಮ. ಗ್ರಾ.ಪಂ.ಸದಸ್ಯರು, ಶ್ರೀ ಪ್ರಕಾಶ್ ವಲಯ ಒಕ್ಕೂಟದ ಅಧ್ಯಕ್ಷರು, ಶ್ರೀ ಶಿವಾಜಿ.ಡಿ.ಹೆಚ್., ಶ್ರೀ ಗಣೇಶ್.ಡಿ.ಆರ್., ಕೃಷಿ ಮೇಲ್ವೀಚಾರಕರಾದ ಮಾಹಾಂತೇಶ್, ಪುರುಷೋತ್ತಮ, ಶ್ರೀಮತಿ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *