ಕುಕ್ಕುಟೋದ್ಯಮ (ಕೋಳಿ ಸಾಕಾಣಿಕೆ) ತರಬೇತಿ
ಡಿ.20: ಕುಕ್ಕುಟ ಉದ್ಯಮವು ಉತ್ತಮ ಲಾಭದಾಯಕ ಹಾಗೂ ಬಹು ಬೇಡಿಕೆ ಇರುವ ಉದ್ಯಮವಾಗಿದೆ. ತಂತ್ರಜ್ಞಾನ ಅಳವಡಿಕೆ ಮೂಲಕ ಕುಕ್ಕುಟ ಉದ್ಯಮದಲ್ಲಿ ಹೆಚ್ಚು ಲಾಭ ಗಳಿಸಬಹುದು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ವಿಭಾಗದ ನಿರ್ದೇಶಕ ಶ್ರೀ ಮನೋಜ್ ಮಿನೇಜಸ್ ಇವರು ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 4 ದಿನಗಳ ‘ಕುಕ್ಕುಟ ಉದ್ಯಮ’ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಯೋಜನೆಯಲ್ಲಿ ಪ್ರಸಕ್ತ ವರ್ಷವನ್ನು ‘ಸ್ವಉದ್ಯೋಗ ವರ್ಷ’ವಾಗಿ ಆಚರಿಸುತ್ತಿರುವುದರಿಂದ ಸಂಘದ ಸದಸ್ಯರಿಗೆ ಇಂತಹ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಜಿಲ್ಲೆಯ ಜಂಟಿ ಬಾಧ್ಯತಾ ಸಂಘ/ಸ್ವಸಹಾಯ ಸಂಘ/ಪ್ರಗತಿಬಂಧು ಸಂಘದ ಒಟ್ಟು 40 ಮಂದಿ ಭಾಗವಹಿಸಿ ಪ್ರಯೋಜನ ಪಡಕೊಳ್ಳುತ್ತಿದ್ದಾರೆ. ಸಮಾರಂಭದಲ್ಲಿ ಕಾರ್ಕಳದ ಜೇಸಿಐ ತರಬೇತುದಾರ ಶ್ರೀ ಸುಧಾಕರ್, ಸಂಸ್ಥೆಯ ಯೋಜನಾಧಿಕಾರಿ ಶ್ರೀಮತಿ ಜಯಂತಿ, ಉಪನ್ಯಾಸಕ ಶ್ರೀ ರಾಜೇಶ್, ತರಬೇತಿ ಸಂಯೋಜಕ ಶ್ರೀ ಬಾಲಕೃಷ್ಣ ಉಪಸ್ಥಿತರಿದ್ದರು.