AgricultureNewsTraining

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಹೈನುಗಾರಿಕೆ/ಮಿನಿಡೈರಿ’ ತರಬೇತಿ

ಮೈಸೂರು ಡಿಸೆಂಬರ್ 18: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ಸದಸ್ಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವಾರು ತರಬೇತಿಗಳನ್ನು ನಿರುದ್ಯೋಗಿ ಯುವಕ ಯುವತಿಯರಿಗೆ ಹಮ್ಮಿಕೊಳ್ಳಲಾಗಿದ್ದು ಅದರ ಅನ್ವಯ ದಿನಾಂಕ: 18.12.2017 ರಿಂದ 22.12.2017 ರವರೆಗೆ ಹೈನುಗಾರಿಕೆ/ಮಿನಿಡೈರಿ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸದ್ರಿ ಹೈನುಗಾರಿಕೆ/ಮಿನಿ ಡೈರಿ ಪ್ರಥಮ ಬ್ಯಾಚ್ ತರಬೇತಿಯನ್ನು ಡಾ.ಪ್ರಸಾದ್ ಮೂರ್ತಿ ಜಿಲ್ಲಾ ನಿರ್ದೇಶಕರು ಪಶುಸಂಗೋಪನಾ ಇಲಾಖೆ ಮೈಸೂರು ಜಿಲ್ಲೆ ಇವರು ಉದ್ಘಾಟಿಸಿದರು. ಉದ್ಘಾಟನೆಯನ್ನು ನೆರವೇರಿಸಿದ ಶ್ರೀಯುತರು ಹೈನುಗಾರಿಕೆಯು ಇಂದು ಪ್ರತೀ ಹಳ್ಳಿಯ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರ ಜೀವನಾಡಿಯಾಗಿದ್ದು, ಇದರಿಂದಾಗಿ ಇಂದು ಇತರ ಬೇರೆ ಕ್ಷೇತ್ರಗಳಿಗಿಂತ ಶೀಘ್ರವಾಗಿ ಹೈನುಗಾರಿಕೆಗೆ ನಿರುದ್ಯೋಗಿಗಳು ಹೊಂದಿಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಬಹುದು. ರೈತರು ಸಾಂಪ್ರದಾಯಿಕ ಪದ್ದತಿಯನ್ನು ಬಿಟ್ಟು ಆಧುನಿಕ ಪದ್ದತಿಯ ಕ್ರಮಗಳನ್ನು ಹೈನುಗಾರಿಕೆಯಲ್ಲಿ ಅನುಸರಿಸುವುದರಿಂದ ಉತ್ತಮ ರಾಸುಗಳ ನಿರ್ವಹಣೆಯನ್ನು ಮಾಡುವುದಲ್ಲದೆ ಹೆಚ್ಚುವರಿ ಹಾಲಿನ ಉತ್ಪಾದನೆಯನ್ನು ಮಾಡಬಹುದು. ಕಾಲ ಕಾಲಕ್ಕೆ ತಕ್ಕಂತೆ ರೋಗಗಳು ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಿಂದ ಮುಂದೊದಗಿ ಬರರಬಹುದಾದ ನಷ್ಟವನ್ನು ಗುರುತಿಸಿಕೊಂಡು ಅವುಗಳಿಂದ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದರು. ಪ್ರಾಣಿಗಳು ಮನುಷ್ಯರಂತೆ ಭಾವನಾ ಜೀವಿಗಳಾಗಿದ್ದು, ಅವುಗಳನ್ನು ಮನುಷ್ಯನಂತೆಯೇ ಕಾಳಜಿ ವಹಿಸುವುದು ಅತೀ ಅಗತ್ಯ, ಹಾಗೂ ಪಶುಸಂಗೋಪನಾ ಇಲಾಖೆಗಳಿಂದ ಸಿಗುವ ಮಾಹಿತಿ ಮತ್ತು ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಯಶಸ್ವಿ ಹೈನುಗಾರಿಕೋಧ್ಯಮಿಗಳಾಗಿ ಹೊರಹೊಮ್ಮಿರಿ ಎಂದು ಮಾಹಿತಿ ನೀಡಿದರು.

ಸದ್ರಿಯವರು ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು ಇಲ್ಲಿ 5 ದಿನಗಳ ಹೈನುಗಾರಿಕೆ/ಮಿನಿ ಡೈರಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತರಬೇತಿಯಲ್ಲಿ ಚಾಮರಾಜನಗರ, ಮಂಡ್ಯ, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 35 ಮಂದಿ ಜಂಟಿ ಬಾಧ್ಯತಾ ಸಂಘಗಳ ಸದಸ್ಯರು ಭಾಗವಹಿಸಿರುತ್ತಾರೆ. ತರಬೇತಿ ಕೇಂದ್ರದ ಪ್ರಾಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ತರಬೇತಿಯ ಸಮಗ್ರ ರೂಪು ರೇಶೆಯಯ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ರುಡ್‍ಸೆಟಿ ನೆಲಮಂಗಲ ಇದರ ನಿವೃತ್ತ ನಿರ್ದೇಶಕರಾದ ಶ್ರೀಯುತ ಕೃಷ್ಣಮೂರ್ತಿ.ಎಚ್.ಎಸ್, ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್ ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *