ಡಿ.26: ಸಿದ್ಧ ಉಡುಪು ತಯಾರಿಕೆ ಕಲಿಕೆಯಿಂದ ಸ್ವಂತ ಉದ್ಯಮ ನಡೆಸಲು ಅನುಕೂಲ. ಟೈಲರಿಂಗ್ ಬಗ್ಗೆ ಸ್ವಲ್ಪ ಮಟ್ಟಿನ ಜ್ಞಾನವಿದ್ದರಿಗೆ ಇಲ್ಲಿ ಕೌಶಲ್ಯದ ಜೊತೆಗೆ ಸ್ವಂತ ಉದ್ಯಮ ಪ್ರೇರಣೆ ನೀಡಲಾಗತ್ತದೆ. ಸ್ವಂತ ಉದ್ಯಮ ನಡೆಸುವುದರ ಜೊತೆಗೆ ನಾವು ಇತರರಿಗೂ ಉದ್ಯೋಗ ನೀಡುವಲ್ಲಿ ಯಶಸ್ವಿ ಕಾಣಬಹುದು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಶ್ರೀಮತಿ ಮಮತಾ ರಾವ್ ಇವರು ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 5 ದಿನಗಳ ‘ಸಿದ್ಧಉಡುಪು ತಯಾರಿಕೆ’ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿಯಲ್ಲಿ ತರಬೇತಿ ಕೇಂದ್ರದ ಟೈಲರಿಂಗ್ ಶಿಕ್ಷಕಿ ಶ್ರೀಮತಿ ಉಷಾ ಹಾಗೂ ಬೆಳ್ತಂಗಡಿಯ ಉದ್ಯಮಿ ಶ್ರೀಮತಿ ಶಾಂಭವಿ ಬಂಗೇರ ಇವರು ಮಾಹಿತಿ ನೀಡುತ್ತಿದ್ದಾರೆ.
ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಜಿಲ್ಲೆಯ ಜಂಟಿ ಬಾಧ್ಯತಾ ಸಂಘ/ಸ್ವಸಹಾಯ ಸಂಘ/ಪ್ರಗತಿಬಂಧು ಸಂಘದ ಒಟ್ಟು 43 ಮಂದಿ ಭಾಗವಹಿಸಿ ಪ್ರಯೋಜನ ಪಡಕೊಳ್ಳುತ್ತಿದ್ದಾರೆ. ಸಮಾರಂಭದಲ್ಲಿ ಸಂಸ್ಥೆಯ ಯೋಜನಾಧಿಕಾರಿ ಶ್ರೀಮತಿ ಜಯಂತಿ, ಪ್ರಬಂಧಕಿ ಶ್ರೀಮತಿ ಚಂದ್ರಾವತಿ, ತರಬೇತಿ ಸಂಯೋಜಕ ಶ್ರೀ ದೇವಪ್ಪ ಎಂಕೆ. ಉಪಸ್ಥಿತರಿದ್ದರು.