success storyWomen Empowerment

ಸೇವಾಪ್ರತಿನಿಧಿಯಾಗಿ ತನ್ನ ಬದುಕನ್ನು ಹಸನಾಗಿಸಿಕೊಂಡ ಮೀನಾಕ್ಷಿ

ಮಧುಗಿರಿ ತಾಲ್ಲೂಕಿನ ಮಧುಗಿರಿ ವಲಯದ ಬಿಜವರ-ಎ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿಯಾದ ಮೀನಾಕ್ಷಿ ಇವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯವರು. ಇವರು ಯೋಜನೆಗೆ ಸೇರುವ ಮುಂಚೆ ಟೈಲರಿಂಗ್ ಕೆಲಸ ಮಾಡುತ್ತಿದ್ದರು. ಯಜಮಾನರು ಇರುವುದಿಲ್ಲ. ಮೃದು ಸ್ವಭಾವವುಳ್ಳ ಇವರು 2011 ಜನವರಿಯಲ್ಲಿ ಗ್ರಾಮಾಭಿವೃಧ್ಧಿ ಯೋಜನೆಗೆ ಕಾಲಿಟ್ಟ ಸಂದರ್ಭದಲ್ಲಿ ಮೇಲ್ವಿಚಾರಕರು ಆಕಸ್ಮಿಕವಾಗಿ ಪರಿಚಯವಾದರು. ಗ್ರಾಮಾಭಿವೃಧ್ಧಿ ಯೋಜನೆ ಎಂದಾಕ್ಷಣ ಸೇವಾಪ್ರತಿನಿಧಿ ಕೆಲಸಕ್ಕೆ ತಕ್ಷಣ ಒಪ್ಪಿಕೊಳ್ಳುತ್ತಾರೆ ಆದರೆ ಅಕ್ಕಪಕ್ಕದವರ ಮನೆಗೂ ಹೋದವರಲ್ಲ. ತಾನಾಯ್ತು ತನ್ನ ಕೆಲಸವಾಯ್ತು ಹೀಗಿದ್ದವರು ಮೊದಲನೇ ಹಂತ ತರಬೇತಿಯಲ್ಲಿ ಮೂರು ದಿನ ತರಬೇತಿ ಪಡೆದರು ನಂತರ ವಲಯ ಮೇಲ್ವಿಚಾರಕರು ಯೋಜನಾಧಿಕಾರಿಗಳು ಕೃಷಿ ಮೇಲ್ವಿಚಾರಕರು ಹಾಗೂ ಹೈನುಗಾರಿಕೆ ಮೇಲ್ವಿಚಾರಕರು ಧೈರ್ಯತುಂಬಿ ಜೊತೆಗೆ ಮಾರ್ಗದರ್ಶನ ನೀಡಿದರು ನಂತರ ತಂಡ ರಚನೆ ಮಾಡುವ ಸಮಯದಲ್ಲಿ ಯೋಜನೆ ಎಂದರೆ ಎನು ದೇವರ ಹೆಸರಿನಲ್ಲಿ ಏನು ಮಾಡುತ್ತಿರಾ ಎಂದು ಜನ ಕೆಲವು ಪ್ರಶ್ನೆಗಳನ್ನು ಕೇಳಿದರು. ಆ ಸಂದರ್ಭದಲ್ಲಿ ಯೋಜನಾಧಿಕಾರಿಯವರು ಮತ್ತು ಮೇಲ್ವಿಚಾರಕರ ಮಾರ್ಗದರ್ಶನದಂತೆ ಸಮಾಲೋಚನಾ ಸಭೆ ಮಾಡಿಸಿ ಸದಸ್ಯರಿಗೆ ಮಾಹಿತಿ ನೀಡಲಾಯ್ತು ಜನಗಳಿಂದ ನಾನಾ ಪ್ರಶ್ನೆಗಳು ಎದುರಾದವು ಆ ಸಂದರ್ಭದಲ್ಲಿ ಯೋಜನಾಧಿಕಾರಿಯವರು ಸಮರ್ಪಕ ಉತ್ತರಗಳನ್ನು ನೀಡಿದ್ದು, ಪ್ರತಿದಿನ ಮನೆ ಭೇಟಿ ಮಾಡುವುದರಿಂದ ಒಂದೊಂದಾಗಿ ತಂಡ ರಚನೆಯಾದವು ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ಸಮಸ್ಯೆಗಳೇ ಹೆಚ್ಚು ಅದನ್ನು ಎದುರಿಸಿ ಮುನ್ನುಗ್ಗುವಾಗ ಅದರ ಫಲ ಸಿಹಿಯಾಗಿರುತ್ತದೆ. ವಾರದ ಕಂತನ್ನು ಕಟ್ಟಲು ಜನ ತಿರಸ್ಕಾರ ಮಾಡುತ್ತಿದ್ದರು ಈಗ ಸ್ವ ಇಚ್ಛೆಯಿಂದ ವಾರದ ಕಂತನ್ನು ವಾರವಾರವೇ ಕಟ್ಟುತ್ತಿದ್ದಾರೆ. ಬೆಳಿಗ್ಗೆ 10:30 ಒಳಗೆ ಹಣಸಂಗ್ರಹಣೆ ಮುಗಿಸುತ್ತಾರೆ, ಈಗ ಜನ ಯೋಜನೆಯನ್ನು ಮೆಚ್ಚಿಕೊಂಡಿರುತ್ತಾರೆ ಯಾಕೆಂದರೆ ವಾರದ ಕಂತಾದರೂ ಕಡಿಮೆ ಬಡ್ಡಿಯಲ್ಲಿ ಎಲ್ಲಾ ವ್ಯವಹಾರ ಪಾರದರ್ಶಕತೆಯಿಂದ ನಡೆಯುತ್ತಿದೆ, ಎನ್ನುತ್ತಾರೆ. 50 ಸಂಘ ರಚನೆ ಮಾಡಿದ್ದು, ಎಲ್ಲಾ ತಂಡಗಳು ಎ ಮತ್ತು ಎ + ಗ್ರೇಡ್‍ನಲ್ಲಿದ್ದು, 4 ಕೋಟಿ 90 ಲಕ್ಷ ರೂ ಸಾಲ ವಿತರಣೆಯಾಗಿರುತ್ತದೆ. 250 ಜೀವನಮಧುರ, 160 ಎನ್.ಪಿ.ಎಸ್, 350 ನಿರಂತರ ಪತ್ರಿಕೆ, ಗ್ರೀನ್‍ವೇ 160, ಸೆಲ್ಕೋಸೋಲಾರ್ 180 ಮಾವು, ಸಪೋಟ, ಸಸಿವಿತರಣೆ ಶೌಚಾಲಯ ಅನುದಾನ 80, ಸುಜ್ಞಾನ ನಿಧಿ 03 ಮಂದಿ, ಮಾಶಾಸನ 5 ಮಂದಿ, ದೇವಸ್ಥಾನ ಜೀರ್ಣೋದ್ದಾರಕ್ಕಾಗಿ 5 ಲಕ್ಷ 50 ಸಾವಿರ ಅನುದಾನ ಕೃಷಿ ವಿಚಾರಸಂಕೀರ್ಣ, ಹೈನುಗಾರಿಗೆ ವಿಚಾರಸಂಕಿರ್ಣ ಕಾರ್ಯಕ್ರಮ ಮಾಡಿಸಿರುತ್ತಾರೆ.

ಜೆ.ವಿ.ಕೆ ಕೇಂದ್ರವಿದ್ದು, 21 ಮಂದಿ ಮಧ್ಯವರ್ಜನ ಶಿಬಿರಕ್ಕೆ ಸೇರಿಸಿ, ಮಧ್ಯಮುಕ್ತಾರನ್ನಾಗಿ ಮಾಡಿರುತ್ತಾರೆ. 2 ಒಕ್ಕೂಟಗಳಿದ್ದು, ಒಂದು ಸರ್ವಶ್ರೇಷ್ಟ ಒಕ್ಕೂಟವಾಗಿದ್ದು, ಮತ್ತೊಂದು ಅತ್ಯುತ್ತಮ ಒಕ್ಕೂಟವಾಗಿರುತ್ತದೆ. ವಾರದ ಸಭೆಯಲ್ಲಿ ಎಲ್ಲಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾರೆ.

ಸದ್ರಿಯವರ ಮನೆಯಲ್ಲಿ ಮಕ್ಕಳ ಸಹಕಾರವಿದ್ದು, 7 ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು, ಜನರೊಂದಿಗೆ ಹೊಂದಾಣಿಕೆ, ಬ್ಯಾಂಕ್ ವ್ಯವಹಾರ ಜನರ ಮನಃ ಪರಿವರ್ತನೆ ಹೇಗೆ ಎಂದು ಸೇವಾಪ್ರತಿನಿಧಿ ಕೆಲಸದಿಂದ ತಿಳಿದಿರುತ್ತಾರೆ, ಸಂಘದ ಸದಸ್ಯರ ಮನೆಭೇಟಿ ಮಾಡಿ ಸಮಸ್ಯೆಯನ್ನು ಪರಿಹರಿಸಿ, ಜನರೊಂದಿಗೆ ಆತ್ಮವಿಶ್ವಾಸ ಗೌರವ ಗಳಿಸಿರುತ್ತಾರೆ. ಮಲೆನಾಡಿನಿಂದ ಬಯಲು ನಾಡಿಗೆ ಬರಿಗೈಯಲ್ಲಿ ಬಂದ ಇವರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಮನೆಗೆ ಬೇಕಾಗುವ ಎಲ್ಲಾ ಗೃಹ ಬಳಕೆ ವಸ್ತುಗಳನ್ನು ಪಡೆದುಕೊಂಡಿರುತ್ತಾರೆ. ಒಬ್ಬ ಮಗಳಿಗೆ ಮದುವೆ ಮಾಡಿ ಇಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಹಕಾರ ನೀಡಿದ ಹಾಗೂ ಸಹಕಾರ ನೀಡುತ್ತಿರುವ ಎಲ್ಲಾ ಅಧಿಕಾರಿ ವರ್ಗದವರನ್ನು ಧನ್ಯವಾದ ತಿಳಿಸುತ್ತಾ ಮಂಜುನಾಥ ಸ್ವಾಮಿಯ ಅಳಿಲು ಸೇವೆ ಮಾಡುತ್ತಾ ನಾನು ಯೋಜನೆಗೆ ಸದಾ ಚಿರರುಣಿಯಾಗಿರುತ್ತೇನೆಂದು ಧನ್ಯತಾ ಭಾವನೆಯನ್ನು ವ್ಯಕ್ತಪಡಿಸುತ್ತಾರೆ.

Leave a Reply

Your email address will not be published. Required fields are marked *