NewsNews on Groups

3013ನೇ ಪ್ರಗತಿಬಂಧು-ಸ್ವ-ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ

3013ನೇ ಪ್ರಗತಿಬಂಧು-ಸ್ವ-ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ:06.01.2018 ರಂದು ಶ್ರೀಯುತ ಎ.ಶ್ರೀಹರಿ, ಮನ್ಯ ಪ್ರಾದೇಶಿಕ ನಿರ್ದೇಶಕರು, ಶ್ರೀ ಕ್ಷೇ.ಧ.ಗ್ರಾ.ಯೋ(ರಿ.) ಪ್ರಾದೇಶಿಕ ಕಛೇರಿ ಮೈಸೂರು. ಅಂಬೇಡ್ಕರ್ ಭವನ, ತಿ.ನರಸೀಪುರ ತಾಲೂಕಿನಲ್ಲಿ ನಡೆದಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕುಕ್‍ಸ್ಟವ್, ಗೋಬರ್ ಗ್ಯಾಸ್, ಸೋಲಾರ್ ದೀಪಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಬಯಲು ಮುಕ್ತ ರಾಜ್ಯವನ್ನು ಮಾಡುವ ದೃಷ್ಠಿಯಿಂದ ಶೌಚಾಲಯ ರಚನೆಗೆ ಹೆಚ್ಚು ಒತ್ತುಕೊಟ್ಟು ಶೌಚಾಲಯ ರಚನೆಗೆ ಅನುದಾನ ನೀಡಿ ಶೌಚಾಲಯ ರಚನೆ ಮಾಡಲಾಗುತ್ತಿದೆ. ಆರ್ಥಿಕ ಬಡತನ ನಿರ್ಮೂಲನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಯೋಜನೆಯ ಮುಖೇನ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಪ್ರಧಾನಮಂತ್ರಿ ಭೀಮಾ ಯೋಜನೆ, ಪಿಂಚಣಿ ಯೋಜನೆ ಇನ್ನೂ ಅನೇಕ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ.

ಆನ್ ಲೈನ್ ಮೂಲಕ ಇಂದಿನ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಜನರಿಗೆ ಸೇವೆ ನೀಡುವಲ್ಲಿ ಯಶಸ್ವಿಯತ್ತ ಕಾಲಿಡುತ್ತಿರುವ ಸಂಸ್ಥೆಯೆಂದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಥೆ. ನರಸೀಪುರ ತಾಲೂಕಿನಲ್ಲಿ 15000 ಸಾವಿರ ಜನರಿಗೆ ರೂಪೇ ಕಾರ್ಡ್ ವಿತರಣೆ ಮಾಡಿದ್ದು, ನಮ್ಮ ಯೋಜನೆಯ ಪಾಲುದಾರರಾಗಿರುವ ಎಲ್ಲಾ ಸದಸ್ಯರಿಗೂ ಕ್ಯಾಸ್‍ಲೆಸ್ ಸೌಲಭ್ಯ ಒದಗಿಸಿಕೊಡುವ ಉದ್ದೇಶ ಹೊಂದಲಾಗಿದೆ. ಫಾಲುದಾರ ಕುಟುಂಬದವರಿಗೆ ಶಿಕ್ಷಣ, ಕೃಷಿ, ಸ್ವಉದ್ಯೋಗ, ಪಶುಪಾಲನೆ, ಮೂಲಭೂತ ಸೌಕರ್ಯ ಇನ್ನೂ ಮುಂತಾದ ಕೆಲಸಗಳಿಗೆ ಆರ್ಥಿಕ ವ್ಯವಸ್ಥೆಯನ್ನು ಯೂನಿಯನ್ ಬ್ಯಾಂಕ್ ಮೂಲಕ ಮಾಡಲಾಗಿದೆ. ನರಸೀಪುರ ತಾಲೂಕಿನಲ್ಲಿ ಆರ್ಥಿಕ ಪ್ರಗತಿನಿಧಿ ನೀಡಿದ್ದು, ಜನರಿಗೆ ಅನುಕೂಲವಾಗಿದೆ. ಸಂಸ್ಥೆಯು “ಆಡುಮುಟ್ಟದ ಸೊಪ್ಪಿಲ್ಲ” ಎಂಬ ಗಾದೆಯಂತೆ ಯೋಜನೆ ಮಾಡದ ಯಾವುದೇ ಕೆಲಸ ಕಾರ್ಯ ಇರುವುದಿಲ್ಲ. ಕುಡಿಯುವ ನೀರಿನ ವ್ಯವಸ್ಥೆಗಾಗಿ 100 ಕೆರೆಗಳ ಹೂಳು ಎತ್ತುವ ಕಾರ್ಯಕ್ರಮ, ಚಿಕ್ಕಮಗಳೂರಿನಲ್ಲಿ ವಿದ್ಯುತ್ ಕೊರತೆ ಇದ್ದ ಕಾರಣ ಹರಿಯುವ ಸಣ್ಣ ನೀರಾವರಿ ವ್ಯವಸ್ಥೆಯನ್ನು ಬಳಕೆ ಮಾಡಿಕೊಂಡು 250 ಕುಟುಂಬಗಳಿಗೆ ವಿದ್ಯುತ್ ಒದಗಿಸಲಾಗುತ್ತಿದೆ. 8000ಕ್ಕೂ ಹೆಚ್ಚು ನಿರ್ಗತಿಕರಿಗೆ ಮಾಸಾಶನವನ್ನು ರೂ.750.00 ರಿಂದ 1000.00 ರೂಪಾಯಿಗಳನ್ನು ಪ್ರತೀ ತಿಂಗಳು ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಶಿಕ್ಷಣಕ್ಕಾಗಿ ಪ್ರೋತ್ಸಾಹಿಸಲಾಗುತ್ತಿದೆ. ಸ್ವಚ್ಛತಾ ಕಾರ್ಯಕ್ರಮ, ವೈಯಕ್ತಿಕ ಸುಚಿತ್ವ ಇನ್ನು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ. ಇಂದಿನ ದಿನ 3013ನೇ ಸಂಘ ಉದ್ಘಾಟನಾಗೆ ಕಾರಣ ಕಾರ್ಯಕರ್ತರ ಪರಿಶ್ರಮ ಮತ್ತು ಯೋಜನೆಯ ಬಗ್ಗೆ ಜನರು ಇಟ್ಟಿರುವ ಅಭಿಮಾನವಾಗಿತ್ತದೆ. ತಾಲೂಕಿನಲ್ಲಿ ಇತರೆ ಕೃಷಿ ಕಾರ್ಯಕ್ರಮಗಳು, ಕೊಟ್ಟಿಗೆ ರಚನೆ, ಹೈನುಗಾರಿಕೆ ಅನುದಾನ ಹಾಗೂ ಸ್ವ-ಉದ್ಯೋಗ ತರಬೇತಿಗಳನ್ನು ನೀಡಲಾಗುತ್ತಿದೆ. ಹಾಗೂ ಪ್ರತಿಯೊಬ್ಬ ಸದಸ್ಯರಿಗೆ ಸ್ವ್ವಾವಲಂಭಿಗಳಾಗಿ ಬದುಕಲು ಸಹಕರಿಸುತ್ತಿದೆ.

ಶ್ರೀಯುತ ಧರ್ಮಸೇನ್, ವಿಧಾನ ಪರಿಷತ್ ಸದಸ್ಯರು, ಮೈಸೂರು ಜಿಲ್ಲೆ ಅನ್ನಪೂರ್ಣೇಶ್ವರಿ ಸಂಘಕ್ಕೆ ದಾಖಲಾತಿ ಹಸ್ತಾಂತರಿಸುವ ಮುಖೇನ ಕಾರ್ಯಕ್ರಮವನ್ನು ಕುರಿತು ಶುಭ ಹಾರೈಸಿ, ಸಂಕ್ರಾಂತಿ ಹಬ್ಬದ ಸುಭಾಷಯಗಳನ್ನು ತಿಳಿಸಿದರು. ಡಾ||ಬಿ.ಆರ್.ಅಂಬೇಡ್ಕರ್ ರವರು ಹೇಳಿರುವಂತೆ ದೇಶವನ್ನು ಮುಂದೆ ಪ್ರಧಾನ ಮಂತ್ರಿಯಿಂದ ಕಟ್ಟಕಡೆಯ ವ್ಯಕ್ತಿ ಕೂಡ ದೇಶವನ್ನು ಮುನ್ನಡೆಸಬಲ್ಲ. ಗಾಂಧೀಜೀಯವರು ಹೇಳಿರುವಂತೆ ಓರ್ವ ಮಹಿಳೆ ತಡ ರಾತ್ರಿ ಯಾವುದೇ ಕೆಡಕುಗಳಿಲ್ಲದೇ ಓಡಾಡಿದಾಗ ಮತ್ತು ಗ್ರಾಮಗಳ ಅಭಿವೃದ್ಧಿಯಾದಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು. ಯಾವುದೇ ಒಂದು ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲಾರು ಒಟ್ಟಾಗಿ ಸೇರಿ ಶಿಸ್ತು, ಪ್ರಾಮಾಣಿಕತೆಯಿಂದ ತಾರತಮ್ಯ ಮನೋಭವನೆಯನ್ನು ಹೋಗಲಾಡಿಸಿ ಒಗ್ಗಟ್ಟಾಗಿ ದುಡಿದಾಗ ಮಾತ್ರ ಸಾಧ್ಯ ಎಂದು ತಿಳಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ರಾಜ್ಯದಲ್ಲಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಎಲ್ಲಾ ಕೆಲಸಗಳನ್ನು ತಮ್ಮ ಗ್ರಾಮಾಭಿವೃದ್ಧಿ ಯೋಜನೆಯ ಮುಖೇನ ಸಾಮಾನ್ಯ ಜನರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಒಬ್ಬ ಉತ್ತಮ ವ್ಯಕ್ತಿಗೆ ನಮ್ಮ ರಾಜ್ಯದ ಎಲ್ಲಾ ಜನರು ಸೇರಿ ಭಾರತರತ್ನ ಪ್ರಶಸ್ತಿಗೆ ಪ್ರಧಾನಿಯವರಲ್ಲಿ ಹಾಗೂ ಮುಖ್ಯಮಂತ್ರಿಗಳಲ್ಲಿ ಕೇಳಿಕೊಳ್ಳಬಾರದೇಕೆ ಈ ಪ್ರಶಸ್ತಿಯೂ ಕೂಡ ಧರ್ಮಾಧಿಕಾರಿಗಳಿಗೆ ಕಡಿಮೆಯೇ ಎಂದು ತಿಳಿಸಿದರು.

ನಾವು ಸರ್ಕಾರದ ಪರವಾಗಿ ಮತ್ತು ಸರ್ಕಾರದ ಯೋಜನೆಗಳ ಪರವಾಗಿ ಸಭೆ ಸಮಾರಂಭಗಳಲ್ಲಿ ಮಾತನಾಡಬಹುದಷ್ಟೇ, ಆದರೆ ಸರ್ಕಾರಿ ಯೋಜನೆಗಳು ಸಾಮಾನ್ಯರಿಗೆ ತಲುಪುವಲ್ಲಿ ತುಂಬಾ ಕಷ್ಟಸಾದ್ಯವಿದೆ. ಆದರೆ ಧರ್ಮಸ್ಥಳ ಯೋಜನೆ ಯಾವುದೇ ಕಾರ್ಯಕ್ರಮಗಳನ್ನು ಕೊಟ್ಟರೂ ಪ್ರತಿಯೊಬ್ಬ ಸಾರ್ವಜನಿಕನಿಗೂ ತಲುಪುವ ಕೆಲಸ ಮಾಡುತ್ತಿದೆ. ಇದು ನಿಜಕ್ಕೂ ಸಂತೋಷಕರ ವಿಷಯ ಎಂದು ತಿಳಿಸಿದರು. ನಿಮ್ಮ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೂ ನನ್ನ ಸಂಪೂರ್ಣ ಸಹಕಾರವಿದೆ ಎಂದು ತಿಳಿಸುತ್ತಾ ಮುಂದೆ ಯಾವುದೇ ನಾಯಕನನ್ನು ಆಯ್ಕೆ ಮಾಡುವ ಸಂದರ್ಭ ಬಂದರೆ ಓಟ್ ಮಾಡುವ ಸಂದರ್ಭ ಯಾವುದೇ ಆಸೆ ಆಮೀಷಗಳಿಗೆ ಒಳಗಾಗದೇ ಸರ್ವ ಸ್ವತಂತ್ರರಾಗಿ ಓಟ್ ಮಾಡಿ ಜನಕ್ಕೆ ಮತ್ತು ರಾಜ್ಯಕ್ಕೆ ಉತ್ತಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬಲ್ಲ ಎಂಬ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಿದರು.

ಶ್ರೀ ಪ್ರಭುಸ್ವಾಮಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ತಿ.ನರಸೀಪುರ ಮಾತನಾಡಿ. ನಮ್ಮ ತಾಲೂಕಿನಲ್ಲಿ ಬ್ಯಾಂಕ್ ಸಾಲ ಉತ್ತಮವಾಗಿ ಮರುಪಾವತಿಯಾಗುತ್ತಿರುವುದು, ಸಂತೋಷದ ವಿಷಯ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ನಮ್ಮ ತಾಲೂಕಿಗೆ ಪಾದಾರ್ಪಣೆ ಮಾಡಿ ಜನವರಿ-21ಕ್ಕೆ ಒಂದು ವರ್ಷ ಕಳೆಯುತ್ತದೆ. ತದನಂತರ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಕಾರ್ಯಗಳಲ್ಲಿ ಅಮೋಘ ಬದಲಾವಣೆಯನ್ನು ಕಂಡಿದೆ ಎಂದು ತಿಳಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ತಮ ಕೆಲಸ ಕಾರ್ಯಗಳನ್ನು ಗುರುತಿಸಿಯೇ ನಮ್ಮ ಸಮಿತಿಯಿಂದ ಸಮುದಾಯ ಭವನವನ್ನು ಅತೀ ಕಡಿಮೆ ಬಾಡಿಗೆಗೆ ನೀಡಲಾಗುತ್ತಿದೆ. ಇಂತಹ ಅವಕಾಶವನ್ನು ನಾವು ಯಾರಿಗೂ ಕಲ್ಪಿಸಿಕೊಟ್ಟಿಲ್ಲ ಎಂದು ಸಂತೋಷ ವ್ಯಕ್ತಪಡಿಸಿದರು.

ಶ್ರೀಮತಿ ಸುನೀತಾಪ್ರಭು, ಯೋಜನಾಧಿಕಾರಿಗಳು, ತಿ.ನರಸೀಪುರ ಮಾತನಾಡಿ. ನಾನು ಈ ತಾಲೂಕಿಗೆ ಯೋಜನಾಧಿಕಾರಿಯಾಗಿ ಬಂದ ಸಂದರ್ಭ ತಾಲೂಕಿನಲ್ಲಿ 2060 ಸಂಘಗಳಿದ್ದವು. ನನಗೆ ತಾಲೂಕಿನಲ್ಲಿ 3000ಕ್ಕೂ ಹೆಚ್ಚು ಸಂಘಗಳನ್ನು ಮಾಡಿ ಸಾರ್ವಜನಿಕರನ್ನು ಮತ್ತು ನಮ್ಮ ಕೃಷಿ ಬಾಂಧವರನ್ನು ನಮ್ಮ ಯೋಜನೆಯ ಪಾಲುದಾರರನ್ನಾಗಿ ಮಾಡಿಕೊಂಡು ಯೋಜನೆಯ ಮತ್ತು ಸರ್ಕಾರದ ಕೆಲಸ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವುದು ನನ್ನ ಉದ್ದೇಶವಾಗಿದ್ದು, ಅದು ಈಗ ಕಾರ್ಯಗತಗೊಳ್ಳುತ್ತಿದೆ ಎಂದು ಸಂತೋಷ ವ್ಯಕ್ತಪಡಿಸುವುದ ಮುಖೇನ 3013ನೇ ಸಂಘಗಳ ಉದ್ಘಾಟನೆಯ ಸಂತೋಷಕ್ಕೆ ಎಲ್ಲರಿಗೂ ಸಿಹಿ ಹಂಚುವುದರೊಂದಿಗೆ ಸಂತೋಷ ಹಂಚಿಕೊಂಡರು.

ಕಾರ್ಯಕ್ರಮವನ್ನು ಕುರಿತು ಬನ್ನೂರು ವಲಯದ ಮೇಲ್ವಿಚಾರಕರಾದ ಶೋಭರವರು ನಿರೂಪಿಸಿದರೆ, ಸೋಸಲೆಯದ ಮೇಲ್ವಿಚಾರಕರಾದ ಯೋಗೀಶ್‍ರವರು ಕಾರ್ಯಕ್ರಮವನ್ನು ಕುರಿತು ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ, ಆಂತರಿಕ ಲೆಕ್ಕಪರಿಶೋಧಕರು, ಎಲ್ಲಾ ವಲಯದ ಮೇಲ್ವಿಚಾರಕರು ಮತ್ತು ಸೇವಾಪ್ರತಿನಿಧಿಗಳು, ಕಛೇರಿ ಸಿಬ್ಬಂದಿಗಳು ಹಾಜರಿದ್ದರು.

One thought on “3013ನೇ ಪ್ರಗತಿಬಂಧು-ಸ್ವ-ಸಹಾಯ ಸಂಘಗಳ ಉದ್ಘಾಟನಾ ಕಾರ್ಯಕ್ರಮ

Leave a Reply

Your email address will not be published. Required fields are marked *