ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಸಾಣೂರು ವಲಯದ ಸಾಣೂರು ಗ್ರಾಮದಲ್ಲಿ ದಿನಾಂಕ 06.1.18 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀರಾಮ್ ಭಟ್ರವರು ಉದ್ಘಾಟಿಸಿದರು. ಸದ್ರಿ ಕಾರ್ಯಕ್ರಮದಲ್ಲಿ ಒಕ್ಕೂಟದ ಅದ್ಯಕ್ಷರಾದ ಜಯ ಶೆಟ್ಟಿಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ಪ್ರಭಾಕರ್, ಆಶಾ ಕಾರ್ಯಕರ್ತೆಯಾದ ಸುನೀತ ರವರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕರಾದ ಶ್ರೀ ರಾಮ್ ಭಟ್ರವರು ಮಾತನಾಡಿ ಶ್ರೀ ಕ್ಷೇ.ಧ. ಗ್ರಾ. ಯೋಜನೆಯ ವತಿಯಿಂದ ನಡೆಯುವ ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮವು ದೇಶಕ್ಕೆ ಮಾದರಿ ಆಗುವ ಕಾರ್ಯಕ್ರಮವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆದು ಜನರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡುವಂತಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕರಾದ ವಾರಿಜ ವಿ ಶೆಟ್ಟಿ, ಸೇವಾಪ್ರತಿನಿಧಿ ಶ್ರೀಮತಿ ಅರುಣಿ, ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಸಾಣೂರು
