ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಸಾಣೂರು ವಲಯದ ಹಿರಿಯಂಗಡಿ ಒಕ್ಕೂಟದ ವತಿಯಿಂದ ದಿನಾಂಕ 07.1.18 ರಂದು ಶ್ರೀ ಕೃಷ್ಣ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಆರ್ ಕೆ ತಿಲಕ್ ಆಡಳಿತ ಮೊಕ್ತೇಸರರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಸದಾನಂದ ಶಾಂತಿ ಪ್ರಧಾನ ಅರ್ಚಕರು, ಶ್ರೀ ಸುನೀಲ್ ಕೋಟ್ಯಾನ್ ಪುರಸಭಾ ಸದಸ್ಯರು, ಶ್ರೀ ಸುರೇಂದ್ರ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಶ್ರೀ ಪ್ರಕಾಶ್ ಕೋಟ್ಯಾನ್ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಕ್ಷೇತ್ರದ ಆವರಣ, ಒಳಾಂಗಣ ಮತ್ತು ದೇವಸ್ಥಾನದ ಪರಿಕರಗಳ ಸ್ವಚ್ಚತೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಸದಸ್ಯರು ಭಾಗವಹಿಸಿದ್ದರು. ಮೇಲ್ವಿಚಾರಕರಾದ ವಾರಿಜ ವಿ ಶೆಟ್ಟಿ, ಸೇವಾಪ್ರತಿನಿಧಿ ಶ್ರೀಮತಿ ದಮಯಂತೆ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ
