ಜ.8: ವ್ಯಾಪಾರ ಎಂಬುದು ಒಂದು ಕೌಶಲ್ಯ. ಇಲ್ಲಿ ಶಿಸ್ತು ಬಹಳ ಮುಖ್ಯ. ಜನರ ಅಭಿರುಚಿಗೆ ತಕ್ಕಂತೆ ವಸ್ತುಗಳ ಪೂರೈಕೆಯಾಗಬೇಕು ಜೊತೆಗ ವ್ಯವಹಾರ ಕೂಡ ಪಾರದರ್ಶಕವಾಗಿರಬೇಕು. ಆಗಿದ್ದಾಗ ಮಾರಾಟದಲ್ಲಿ ಯಶಸ್ಸನ್ನು ಹೊಂದಬಹುದು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ|. ಎಲ್. ಎಚ್. ಮಂಜುನಾಥ್ ಗ್ರಾಮೀಣ ಶ್ರೇಷ್ಠತಾ ಕೇಂದ್ರ, ಲಾೈಲದಲ್ಲಿ ಆಯೋಜಿಸಲಾದ 3 ದಿನಗಳ ‘ಸಿರಿ ಉತ್ಪನ್ನಗಳ ಮಾರಾಟ ಕೇಂದ್ರ ಸ್ಥಾಪನೆ’ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದರು.
ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ತರಬೇತಿಯು ಉಚಿತವಾಗಿ ನಡೆಯುತ್ತಿದ್ದು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಜಿಲ್ಲೆಯ ಜಂಟಿ ಬಾಧ್ಯತಾ ಸಂಘ/ಸ್ವ ಸಹಾಯ ಸಂಘ/ಪ್ರಗತಿಬಂಧು ಸಂಘದ ಒಟ್ಟು 20 ಮಂದಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ತರಬೇತಿ ಸಂಸ್ಥೆಯ ಯೋಜನಾಧಿಕಾರಿ ಶ್ರೀಮತಿ ಜಯಂತಿ, ಸಿರಿ ಸಂಸ್ಥೆಯ ಮಾರುಕಟ್ಟೆ ಹಿರಿಯ ಪ್ರಬಂಧಕ ಶ್ರೀ ಸುಧಾಕರ್, ತರಬೇತಿ ಸಂಯೋಜಕ ಶ್ರೀ ಬಾಲಕೃಷ್ಣ ಉಪಸ್ಥಿತರಿದ್ದರು.
ಗ್ರಾಮೀಣ ಜನರ ‘ಸಿರಿ’ ಉತ್ಪನ್ನಗಳ ಮಾರಾಟ ಕೇಂದ್ರ ಸ್ಥಾಪನೆ ಬಗ್ಗೆ ತರಬೇತಿ
