ಸೊರಬ ತಾಲೂಕಿನ ಸೊರಬ ವಲಯದ ಕೆರೆಹಳ್ಳಿ ಗ್ರಾಮದ ಶ್ರೀ ಗಾಳಮ್ಮ ದೇವಿ ದೇವಸ್ಥಾನದಲ್ಲಿ ದಿನಾಂಕ: 11.01.2018 ರಂದು ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾಯ್ರಮದಲ್ಲಿ ಡಾ|| ವಿಶ್ವನಾಥ ನಾಡಿಗೇರ್-ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ವೈದ್ಯರು, ಶ್ರೀ ರಮೆಶ್ ಪಿ.ಕೆ, ತಾಲೂಕಿನ ಯೋಜನಾಧಿಕಾರಿಗಳು, ಶ್ರೀ ಮಂಜಪ್ಪ ಗ್ರಾ.ಪಂ ಸದಸ್ಯರು. ಶ್ರೀಮತಿ ಶ್ಯಾಮಲ ಒಕ್ಕೂಟದ ಅಧ್ಯಕ್ಷರು ಉಪಸ್ಥಿತರಿದ್ದರು.
ಡಾ|| ವಿಶ್ವನಾಥ ನಾಡಿಗೇರ್ರವರು “ಸಮಾಜದಲ್ಲಿ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕಬೇಕಾದರೆ ಮನೆ ಮನಸ್ಸುಗಳ ಜೊತೆಗೆ ಧಾರ್ಮಿಕ ಕೇಂದ್ರಗಳು ಸ್ವಚ್ಛವಾಗಿರಬೇಕಾಗಿದ್ದು, ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪೂಜ್ಯರ ಆಶಯದಂತೆ ನಡೆದ ಶ್ರದ್ಧಾಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮ” ಎಂದು ಅಭಿಪ್ರಾಯ ಪಟ್ಟರು.
ಶ್ರೀ ರಮೆಶ್ ಪಿ.ಕೆ, ತಾಲೂಕಿನ ಯೋಜನಾಧಿಕಾರಿಗಳು ಮಾತನಾಡಿ “ಧರ್ಮಸ್ಥಳಕ್ಕೆ ಸ್ವಚ್ಛ ಧಾರ್ಮಿಕ ನಗರಿ ಎಂಬ ಪ್ರಶಸ್ತಿ ಬಂದಿದ್ದು, ಇದರ ಪ್ರೇರೇಪಣೆಯಿಂದ ಪ್ರತಿಯೊಂದು ಗ್ರಾಮದ ಎಲ್ಲಾ ಶ್ರದ್ಧಾ ಕೇಂದ್ರಗಳು ಸ್ವಚ್ಛವಾಗಿರಬೇಕೆಂದು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀ ವಸಂತ್ ಎಸ್, ಸೇವಾಪ್ರತಿನಿಧಿಗಳಾದ ಶ್ರೀಮತಿ ಚೈತ್ರ, ಅನಿತಾ, ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಶ್ಯಾಮ¯, ಗ್ರಾ ಪಂ ಸದಸ್ಯರಾದ ಶ್ರೀಯುತ ಮಂಜಪ್ಪ, ದೇವಸ್ಥಾನ ಸಮಿತಿ ಸದಸ್ಯರಾದ ಗುಡ್ಡಪ್ಪ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಹಾಜರಿದ್ದರು.
ಕಾರ್ಯಕ್ರಮದ ವಿಶೇಷತೆ : ದೇವಸ್ಥಾನದ ಕಸ ಸಂಗ್ರಹಣೆಗೆ 2 ಡಸ್ಟ್ಬಿನ್ಗಳನ್ನು ವಿತರಿಸಲಾಗಿದೆ. ಮತ್ತು ದೇವಸ್ಥಾನದ ಆವರಣವನ್ನು ಸ್ವಚ್ಛತೆ ಮಾಡಲಾಯಿತು.