ದಿನಾಂಕ 08.01.2018 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು (HRTC) ಇಲ್ಲಿಗೆ A&M University of Texas, USA ಇಲ್ಲಿನ ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಎಸ್.ಡಿ.ಎಂ-ಐ.ಎಂ.ಡಿ ಮೈಸೂರು ಇವರ ಸಹಭಾಗಿತ್ವದಲ್ಲಿ ಭೇಟಿ ನೀಡಿದರು. ಸದ್ರಿಯವರನ್ನು ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸಂತೋಷ್ ರಾವ್.ಪಿ. ಮತ್ತು ಮೈಸೂರು ಪ್ರಾದೇಶಿಕ ಕಛೇರಿಯ ಆಡಳಿತ ಯೋಜನಾಧಿಕಾರಿಗಳಾದ ಸೋಮನಾಥ್.ಕೆ. ರವರು ಸ್ವಾಗತಿಸಿದರು. ಅನಂತರದಲ್ಲಿ ಪ್ರಾಂಶುಪಾಲರು ಶ್ರೀ ಕ್ಷೇತ್ರ ಧರ್ಮಸ್ಥಳದ ವಿವಿಧ ಜನಪರ ಕಾರ್ಯಕ್ರಮಗಳು ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ಮತ್ತು ಅನುಷ್ಠಾನ ವಿಧಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. ನಂತರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯ ವೈಖರಿಗಳ ಕುರಿತಾದ ವೀಡಿಯೋ ವೀಕ್ಷಣೆಯನ್ನು ಮಾಡಿ ನಂತರದಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರೊಂದಿಗೆ ಮುಕ್ತವಾಗಿ ಯೋಜನೆಗೆ ಸಂಬಂಧಿಸಿದ ವಿಷಯಗಳ ಕುರಿತು ಮುಕ್ತವಾಗಿ ಚರ್ಚಿಸಿದರು.
ಸದ್ರಿ ಸಂದರ್ಭದಲ್ಲಿ ಎಸ್.ಡಿ.ಎಂ-ಐ.ಎಂ.ಡಿ ಕಾಲೇಜು ಮೈಸೂರು ಇಲ್ಲಿನ ಉಪನ್ಯಾಸಕರಾದ ಶ್ರೀ ರಂಗನಾಥ್ ಮತ್ತು ಮೈಸೂರು ಪ್ರಾದೇಶಿಕ ಕಛೇರಿಯ ಆಡಳಿತ ಯೋಜನಾಧಿಕಾರಿಗಳಾದ ಶ್ರೀ ಸೋಮನಾಥ್.ಕೆ ಇವರು ಉಪಸ್ಥಿತರಿದ್ದರು.