Agriculturesuccess story

ಸುಲಭ ನಿರ್ವಹಣೆಯ ಪಪ್ಪಾಯ ಕೃಷಿ….

Representative Image from web.

ರಾಣೆಬೆನ್ನೂರು ತಾಲೂಕಿನ ಮೆಡ್ಲೇ ರಿ ವಲಯದ ಅರೆಮಲ್ಲಾಪುರ ಕಾರ್ಯಕ್ಷೇ ತ್ರದ ಶ್ರೀ ಶಿವಶಕ್ತಿ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಗೀತಾ ವೀರೇಶ ಬೆನ್ನೂರುರವರದ್ದು 9 ಜನರ ತುಂಬು ಕುಟುಂಬ. ಮನೆಯಲ್ಲಿರುವ 5 ಜನ ಕೃಷಿಯನ್ನೇ ಅವಲಂಭಿಸಿರುತ್ತಾರೆ. ಮಳೆಯಾಶ್ರಿತ ಭೂಮಿಯಾಗಿರುವುದರಿಂದ ತಮ್ಮ 10 ಎಕ್ರೆ ಜಮೀನಿನಲ್ಲಿ ಗೋವಿನಜೋಳ, ಬೆಳ್ಳುಳ್ಳಿ, ಈರುಳ್ಳಿ, ತರಕಾರಿ ಕೃಷಿ ಮಾಡುತ್ತ ಬಂದಿರುತ್ತಾರೆ. ಕಳೆದ 9 ವರ್ಷಗಳ ಹಿಂದೆ ಯೊಜನೆಯ ಸಂಘದಲ್ಲಿ
ಸದಸ್ಯರಾದ ಮೇಲೆ ಇವರ ಕುಟುಂಬಕ್ಕೆ ಆರ್ಥಿಕ ಅಭಿವೃದ್ಧಿಗಾಗಿ ಪ್ರಗತಿನಿಧಿ ಪಡೆದುಕೊಂಡು ಸದಿನ್ವಿ ಯೋಗಪಡಿಸುವುದರೊಂದಿಗೆ ಕ್ರಮವತ್ತಾಗಿ ಸಮಯಕ್ಕೆ ಸರಿಯಾಗಿ ಮರು ಪಾವತಿಸುತ್ತ ಬಂದಿದ್ದಾರೆ. ಪ್ರಸ್ತುತ ಕೃಷಿ ಅಭಿವೃದ್ಧಿಗೋಸ್ಕರ ರೂ.1,00,000/- ಪ್ರಗತಿನಿಧಿ ಪಡೆದುಕೊಂಡು ತಮ್ಮ 2 ಎಕರೆ ಜಮೀನಿನಲ್ಲಿ ಪಪ್ಪಾಯ ಕೃಷಿ ಮಾಡಿರುತ್ತಾರೆ. ಉತ್ತಮ ನಿರ್ವಹಣೆ ಮಾಡಿರುವುದರಿಂದ ಇಳುವರಿ ಸಹ ಉತ್ತಮವಾಗಿ ಬರುತ್ತಿದೆ. ಪ್ರಸ್ತುತ 15 ದಿನಗಳ ಅಂತರದಲ್ಲಿ ಪ್ರತಿ ಕಟಾವಿಗೆ 2 ಟನ್ ಇಳುವರಿ ಪಡೆಯುತ್ತಿದ್ದು ತಿಂಗಳಿಗೆ ರೂ.40,000/- ರವರೆಗೆ ಸಂಪಾದನೆ ಮಾಡುತ್ತಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಅನೇಕ ತೋಟಗಾರಿಕೆ ಬೆಳೆ ಬೆಳೆಯಲು ಆಸಕ್ತಿ ಹೊಂದಿರುತ್ತಾರೆ.

Leave a Reply

Your email address will not be published. Required fields are marked *