ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಬೈಲೂರು ವಲಯದ ಕಣಜಾರು ಹಾಗೂ ನೀರೆ ಬಿ ಒಕ್ಕೂಟದ ವತಿಯಿಂದ ದಿನಾಂಕ 07.1.18 ರಂದು ಪಾನಡ್ಕ ಮುಗೇರ್ಕಳ ದೈವಸ್ಥಾನ ಮತ್ತು ಪೆಲತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜಗದೀಶ್ ತೆಂಡುಲ್ಕರ್ ಗ್ರ್ರಾಮ ಪಂಚಾಯತ್ ಸದಸ್ಯರು ಕೌಡೂರು, ವಿಕ್ರಂ ಹೆಗ್ಡೆ ಪೂಜಾ ಸಮಿತಿ ಅಧ್ಯಕ್ಷರು ನೀರೆ ಕಣಜಾರು, ಉಮನಾಥ್ ಮಾಡ ಆಡಳಿತ ಮೊಕ್ತೇಸರರು, ಅಬ್ದುಲ್ ಸಲಾಂ ಒಕ್ಕೂಟದ ಅಧ್ಯಕ್ಷರು, ಪ್ರಕಾಶ್ ನಾಯಕ್ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು, ಉಷಾ ಗ್ರ್ರಾಮ ಪಂಚಾಯತ್ ಸದಸ್ಯರು, ಸಂದೇಶ್ ಶೆಟ್ಟಿ ಒಕ್ಕೂಟದ ಅಧ್ಯಕ್ಷರು, ಮೇಲ್ವಿಚಾರಕರಾದ ಪ್ರವೀಣ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಮಾರು 110 ಮಂದಿ ಸದಸ್ಯರು ಭಾಗವಹಿಸಿ ಮಾಹಿತಿ ಪಡೆದುಕೊಂಡಿರುತ್ತಾರೆ.
ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಪಾನಡ್ಕ ಮುಗೇರ್ಕಳ ದೈವಸ್ಥಾನ ಹಾಗೂ ಪೆಲತ್ತೂರು ಮಹಾಲಿಂಗೇಶ್ವರ ದೇವಸ್ಥಾನ
