Communnity DevelopmentNews

ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಸೊರಬ ನಗರದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ

ಸೊರಬ ನಗರದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದಿನಾಂಕ: 12.01.2018 ರಂದು ಶ್ರದ್ದಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾಯ್ರಮದಲ್ಲಿ ಶ್ರೀ ದಿನಕರ್‍ಭಟ್ ಭಾವೆ-ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು, ಶ್ರೀ ಗುರುರಾಜ್ ರೆವೆನ್ಯು ಇನ್ಸ್‍ಪೆಕ್ಟರ್,ದೇವಾಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಭಟ್, ವಲಯದ ಮೇಲ್ವೀಚಾರಕರಾದ ವಸಂತ್.ಎಸ್, ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ಪ್ರತಿಮಾ, ಲಯನೆಸ್ಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ, ಒಕ್ಕೂಟದ ಪಧಾಧಿಕಾರಿಗಳು, ಸಂಘದ ಸದಸ್ಯರುಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಶ್ರೀ ದಿನಕರ್ ಭಟ್ ಭಾವೆರವರು ಮಾತನಾಡಿ “ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ನಮ್ಮ ಜನರಲ್ಲಿ ಸ್ವಚ್ಛತೆಯ ಮನೋಭಾವ ಹೆಚ್ಚಾಗುವಂತೆ ಪ್ರೇರೇಪಿಸುವಂತಾಗಿದೆ ಎಂದು ಅಭಿಪ್ರಾಯಪಟ್ಟರು.’’

ವಲಯದ ಮೇಲ್ವೀಚಾರಕರಾದ ವಸಂತ್ .ಎಸ್‍ರವರು “ಶ್ರದ್ದಾ ಕೇಂದ್ರ ಸ್ವಚ್ಛತೆ ಕಾರ್ಯಕ್ರಮದ ಉದ್ದೇಶ ವಿವರಿಸುತ್ತಾ ಇವತ್ತಿನ ಈ ಕಾರ್ಯಕ್ರಮ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗು ಮಾನ್ಯ ತಹಶೀಲ್ದಾರರವರ ಸಹಕಾರದಲ್ಲಿ ಜರುಗುತ್ತಿದ್ದು, ಸಾಮೂಹಿಕವಾಗಿ ನಡೆಯುವ ಇಂತಹ ಕಾರ್ಯಕ್ರಮಗಳಿಂದ ಪುಣ್ಯ ಸಂಪಾದನೆಯಾಗುತ್ತದೆಂದು, ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕೆಂದು ಅಭಿಪ್ರಾಯಪಟ್ಟರು.”

ಕಾರ್ಯಕ್ರಮದ ವಿಶೇಷತೆ : ದೇವಸ್ಥಾನದ ಕಸ ಸಂಗ್ರಹಣೆಗೆ 4 ಡಸ್ಟ್‍ಬಿನ್‍ಗಳನ್ನು ವಿತರಿಸಲಾಗಿದೆ. ಮತ್ತು ದೇವಸ್ಥಾನದ ಆವರಣವನ್ನು ಸ್ವಚ್ಛತೆ ಮಾಡಲಾಯಿತು.

Leave a Reply

Your email address will not be published. Required fields are marked *