Communnity DevelopmentNews

ಶ್ರದ್ಧಾ ಕೇಂದ್ರ ಸ್ವಚ್ಚತಾ ಕಾರ್ಯಕ್ರಮ – ಶ್ರೀ ಕೊಡಮಣಿತ್ತಾಯ ಬ್ರಹ್ಮಶ್ರೀ ಬೈದರ್ಕಳ ಗರಡಿ

ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕಾರ್ಕಳ ತಾಲೂಕಿನ ಪುತ್ತಿಗೆ ವಲಯದ ತೋಡಾರು ಒಕ್ಕೂಟದ ವತಿಯಿಂದ ದಿನಾಂಕ 14.1.18 ರಂದು ಶ್ರೀ ಕೊಡಮಣಿತ್ತಾಯ ಬ್ರಹ್ಮಶ್ರೀ ಬೈದರ್ಕಳ ಗರಡಿಯ ಒಳಾಂಗಣ ಮತ್ತು ಹೊರಾಂಗಣ ಹಾಗೂ ದೇವಸ್ಥಾನದ ಪರಿಕರಗಳ ಸ್ವಚ್ಚತಾ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗರಡಿ ಧರ್ಮದರ್ಶಿಗಳು ವಿಶಾಲ್ ಕೀರ್ತಿ ಬಲಿಪ, ಊರಿನ ಗಣ್ಯರು ಬಾಲಕೃಷ್ಣ ಶೆಟ್ಟಿ, ಜನಜಾಗೃತಿ ಶಿಬಿರಾಧಿಕಾರಿ ದೇವಿಪ್ರಸಾದ್, ಒಕ್ಕೂಟದ ಅಧ್ಯಕ್ಷರು ಸುಗುಣ, ಮೇಲ್ವಿಚಾರಕರಾದ ನಿರಂಜನ್, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಸದಸ್ಯರೆಲ್ಲರೂ ದೇವಸ್ಥಾನದ ಆವರಣ ಹಾಗೂ ಪರಿಕರಗಳನ್ನು ಸ್ವಚ್ಚಗೊಳಿಸಿ ದೇವರ ಕೃಪೆಗೆ ಪಾತ್ರರಾದರು. ಪೂಜ್ಯರ ಈ ಕಾರ್ಯಕ್ರಮ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿದ್ದು ಒಂದು ತಿಂಗಳ ಕಾಲಾವಕಾಶದಲ್ಲಿ ಗರಡಿಯ ಸ್ವಚ್ಚತೆ ದಿನಕೂಲಿಯಲ್ಲಿ ಇದುವರೆಗೆ ಮಾಡುತ್ತಿದ್ದು ಪ್ರಸ್ತುತ ಧರ್ಮಸ್ಥಳ ಗ್ರ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಂದ ಒಂದೇ ದಿನದಲ್ಲಿ ಮಾಡುವಂತಾಯಿತು. ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಸುಮಾರು 90 ಮಂದಿ ಸದಸ್ಯರು ಭಾಗವಹಿಸಿ ಮಾಹಿತಿ ಪಡೆದುಕೊಂಡಿರುತ್ತಾರೆ.

Leave a Reply

Your email address will not be published. Required fields are marked *