success storyWomen Empowerment

‘ಬಿಡುವಿನ ಸಮಯದಲ್ಲಿ ಸ್ವ-ಉದ್ಯೋಗ’ ಮತ್ತು ಇನ್ನಿತರ ಯಶೋಗಾಥೆಗಳು

‘ಬಿಡುವಿನ ಸಮಯದಲ್ಲಿ ಸ್ವ-ಉದ್ಯೋಗ’

ಸೊರಬ ತಾಲೂಕಿನ ಮಾವಲಿ ವಲಯದ ಶಿವಪುರ ಗ್ರಾಮದ ಭಾಗ್ಯಲಕ್ಷ್ಮಿ ಸ್ವ-ಸಹಾಯ ಸಂಘದ ಸದಸ್ಯರು ಶ್ರೀಮತಿ ಸುನಿತಾ W/o ವೀರೇಶ್ ಎಂಬುವರು ತಮಗಿರುವ 1ಳಿ ಎಕ್ರೆ ಕೃಷಿ ಜಮೀನಿನಲ್ಲಿ ಕೃಷಿ ಮಾಡುವುದರೊಂದಿಗೆ ಬಿಡುವಿನ ಸಮಯದಲ್ಲಿ ಟೈಲರಿಂಗ್ ಮಾಡುವುದರ ಮೂಲಕ ಅಷ್ಟಿಷ್ಟು ಸಂಪಾದನೆ ಮಾಡಿಕೊಂಡು ಕೆಲಸ ಮಾಡುವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಅವರ ಭಾಗ್ಯಲಕ್ಷ್ಮಿ ಸ್ವ-ಸಹಾಯ ತಂಡ ಅವರಿಗೆ ಸ್ವ-ಉದ್ಯೋಗಕ್ಕೆ ಮತ್ತಷ್ಟು ಸ್ಪೂರ್ತಿಯಾಯಿತು. ರೂ. 50000/- ಪ್ರಗತಿನಿಧಿ ಪಡೆದು ಅದರಲ್ಲಿ ರೂ. 10000/- ಕೃಷಿಗೆ ಬಳಸಿ ರೂ. 40000/- ದಲ್ಲಿ ಹಿಟ್ಟಿನ ಗಿರಣಿಯನ್ನು ಕೃಷಿ ಇಲಾಖೆಯ ಸಹಾಯಧನದಿಂದ ಪಡೆದುಕೊಂಡು, ಈಗ ದಿನಕ್ಕೆ 150-200 ರೂಪಾಯಿಯನ್ನು ತಮ್ಮ ಬಿಡುವಿನ ಸಮಯದಲ್ಲಿ ಆದಾಯವನ್ನು ಗಳಿಸುತ್ತಿದ್ದಾರೆ. ಯೋಜನೆಯಿಂದ ಇವರ ಶ್ರಮಕ್ಕೆ ತಕ್ಕ ಪ್ರತಿಫಲವಾಗಿ ರೂ. 4000/- ಅನುದಾನ ನೀಡಿ ಮತ್ತಷ್ಟು ಪ್ರೋತ್ಸಾಹಿಸಿದಾಗ, ಯೋಜನೆ ನನಗೆ ದಾರಿದಿಪವಾಗಿ ಕೈಹಿಡಿದು ನಡೆಸಿ, ಆರ್ಥಿಕತೆಯಲ್ಲಿ ಸಾಫಲತೆ ಕಾಣುವ ನಿಟ್ಟಿನಲ್ಲಿ ಸಹಕಾರ ನೀಡಿದೆ ಎನ್ನುತ್ತಾರೆ. ಇವರ ಗಂಡ ವೀರೇಶ್.

ಹೀಗೆ ಸುನಿತಾರವರು ತಮ್ಮ ಬಿಡುವಿನ ಸಮಯದಲ್ಲಿ ಟೈಲರಿಂಗ್, ಹಿಟ್ಟಿನ ಗಿರಣಿ ಮಾಡಿಕೊಂಡು ಗ್ರಾಮದ ಇತರ ಮಹಿಳೆಯರಿಗೆ ಮಾದರಿಯಾಗಿರುತ್ತಾರೆ.

‘ಜೀವನಕ್ಕೆ ಆಸರೆಯಾಗಿ ಅಗರಭತ್ತಿ ಘಟಕ’

ಸೊರಬ ತಾಲೂಕಿನ ಆನವಟ್ಟಿ ವಲಯದ ತುರಬಿಗುಡ್ಡ ಗ್ರಾಮದಲ್ಲಿ ಶೈಲಾ W/o ಶಿವಲಿಂಗಪ್ಪ ಬಾಸೂರು ಎಂಬುವರು 8 ವರ್ಷದ ಹಿಂದೆ 13 ಜನ ಸದಸ್ಯರು ಸೇರಿ ಸಾವಳಿಗೇಶ್ವರ ಸ್ವ-ಸಹಾಯ ಸಂಘವನ್ನು ಮಾಡಿಕೊಂಡು ಅದರ ಸಹಕಾರದೊಂದಿಗೆ ಹೈನುಗಾರಿಕೆ, ಕಿರಾಣಿ ಅಂಗಡಿ ಮಾಇಕೊಂಡು ಉತ್ತಮ ಜೀವನ ನಡೆಸುತ್ತಾ ಬಂದರು ಜೊತೆಗೆ ಗ್ರಾಮದಲ್ಲಿ ಒಂದು ಡೈರಿಯನ್ನು ಮಾಡಿಕೊಂಡು ಈಗ ಒಟ್ಟು 350ಲೀಟರ್ ಹಾಲನ್ನು ಪ್ರತಿದಿನ ಹಲು ಸಂಗ್ರಹಣೆ ಯಾಗುತ್ತಿದ್ದು, ಅದರ ನಿರ್ವಹಣೆಯನ್ನು ಗಂಡ ಶಿವಲಿಂಗಪ್ಪ ನೋಡಿಕೊಳ್ಳುತ್ತಿದ್ದಾರೆ.

ಮನೆಯಲ್ಲಿ 05 ಜನರಿದ್ದು, ಈ ಎಲ್ಲಾ ಕೆಲಸದೊಂದಿಗೆ ಬಿಡುವಿನ ಸಮಯದಲ್ಲಿ ಏನಾದರೂ ಒಂದು ಕೆಲಸ ಮಾಡಬೇಕು ಎಂದು ಆಲೋಚನೆ ಮಾಡಿದಾಗ ಇವರಿಗೆ ಹೊಳೆದಿದ್ದು, ಅಗರಭತ್ತಿ ತಯಾರಿ ಮಾಡುವ ಬಗ್ಗೆ ಇದರ ಬಗ್ಗೆ ಗಮನಹರಿಸಿದಾಗ ಇವರಿಗೆ ಆಸರೆಯಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘದಲ್ಲಿ ಎಲ್ಲಾ ಸದಸ್ಯರೊಂದಿಗೆ ಚರ್ಚಿಸಿ ರೂ. 72000/- ಪ್ರಗತಿನಿಧಿಯನ್ನು ಪಡೆದುಕೊಂಡು ಅಗರಭತ್ತಿ ಮೆಶಿನ್ ಖರೀದಿ ಮಾಡಿ ಇದಕ್ಕೆ ಬೇಕಾಗುವ ಕಚ್ಚಾ ಸಾಮಾಗ್ರಿಗಳಾದ ಕಡ್ಡಿ & ಹಿಟ್ಟನ್ನು ದಾವಣಗೆರೆಯಿಂದ 1 ಕೆ.ಜಿ ಹಿಟ್ಟಿಗೆ ರೂ. 20/-, 1 ಕೆ.ಜಿ ಕಡ್ಡಿಗೆ ರೂ. 125/- ರೂಪಾಯಿಯಂತೆ ಖರೀದಿಸಿ ದಿನಕ್ಕೆ 5 ರಿಂದ 6 ತಾಸು ಬಿಡುವಿನ ಸಮಯದಲ್ಲಿ 20 ರಿಂದ 25 ಕೆ.ಜಿ ಊದು ಭತ್ತಿ ತಯಾರಿಸಿ ಶ್ರೀ ಸಾಯಿ ಸೇಲ್ಸ್ & ಸರ್ವಿಸ್‍ನವರಿಗೆ 1 ಕೆ.ಜಿ ಊದುಭತ್ತಿಗೆ ರೂ. 60/- ರಂತೆ ದಿನಕ್ಕೆ 25 ಕೆ.ಜಿ ನೀಡುತ್ತಿದ್ದು, ರೂ. 1500/- ಸಂಪಾದನೆ ಮಾಡುತ್ತಿದ್ದಾರೆ. ಇದರಲ್ಲಿ 1 ಕೆ.ಜಿ ಗೆ ಖರ್ಚೆಲ್ಲಾ ತಗೆದು, ರೂ. 20/- ಉಳಿಸಿದರೆ ದಿನಕ್ಕೆ 25 ಕೆ.ಜಿ ಗೆ ರೂ. 500/- ಆದಾಯ ಪಡೆದು 30 ದಿನಕ್ಕೆ ರೂ. 15000/- ಲಾಭವನ್ನು ಪಡೆಯುವಲ್ಲಿ ಶೀಲಾ & ಶಿವಲಿಂಗಪ್ಪರವರು ಯಶಸ್ಸನ್ನು ಕಂಡುಕೊಂಡು ಎಷ್ಟೋ ಜನ ನಿರುದ್ಯೊಗಿಗಳಿಗೆ ಇವರು ಮಾದರಿಯಾಗಿರುತ್ತಾರೆ. ಈ ಉದ್ಯೋಗ ಹೇಗೆ ಮಾಡುತ್ತೀರಿ? ಎಂದು ಕೇಳಿದಾಗ, ಮಾಡುವ ಕೆಲಸದಲ್ಲಿ ಶ್ರದ್ಧೆ, ಆಸಕ್ತಿ, ನಂಬಿಕೆ ಇದ್ದರೆ ಯಾವುದೇ ಕೆಲಸವನ್ನು ಸುಲಲಿತವಾಗಿ ಮಾಡಲು ಸಾಧ್ಯ ಎನ್ನುತ್ತಾರೆ. ಈ ದಂಪತಿಗಳು.

One thought on “‘ಬಿಡುವಿನ ಸಮಯದಲ್ಲಿ ಸ್ವ-ಉದ್ಯೋಗ’ ಮತ್ತು ಇನ್ನಿತರ ಯಶೋಗಾಥೆಗಳು

Leave a Reply

Your email address will not be published. Required fields are marked *