Communnity DevelopmentNews

ಧಾರ್ಮಿಕ ಜಾಗೃತಿ ಕಾರ್ಯಕ್ರಮ – ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ

ಆದಿಚುಂಚನಗಿರಿ ಸಮುದಾಯ ಭವನ, ಹಳೆತಿರುಮಕೂಡಲು ತಿ.ನರಸೀಪುರದಲ್ಲಿ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ದೃಷ್ಠಿಯಿಂದ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.

ಶ್ರೀ ಶ್ರೀ ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಮದ್ವಾಟಾಳು ಸೂರ್ಯಸಿಂಹಾಸನ ಮಠಾಧ್ಯಕ್ಷರು ಆಶಿರ್ವಚನ ನೀಡಿದರು. ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಈ ಒಂದು ಸಂದರ್ಭದಲ್ಲಿ ನೆರೆವೇರಿಸಿದ್ದು, ಇಲ್ಲಿ ಜನರನ್ನು ಒಗ್ಗೂಡಿಸಿ, ಜಾತಿ-ಧರ್ಮ, ಮೇಲು-ಕೀಳು ಎಲ್ಲಾ ಭಾವನೆಗಳನ್ನು ತೊರೆದು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಜನರು ಕುಳಿತು ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಮಾಡುತ್ತಿದ್ದು, ಗ್ರಾಮೀಣ ಮಟ್ಟದಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಕಾರ್ಯಕ್ರಮಗಳು ಜಾತ್ಯಾತೀತತೆ, ಬಡವ-ಶ್ರೀಮಂತಿಕೆಯನ್ನು ಹೋಗಲಾಡಿಸಲು ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು. ಮನೆಯಲ್ಲಿ ಬಂಗಾರ-ಹಣವಿಟ್ಟು ಆಡಂಬರದ ಪೂಜೆಗಿಂತ ಸರ್ವರೂ ಸೇರಿ ಒಂದೇ ಭಾವನೆಯಿಂದ ಭಕ್ತಿಯಿಂದ ಈ ಒಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಜನರಿಗೆ ನಿಜವಾದ ಅರ್ಥದಲ್ಲಿ ಧಾರ್ಮಿಕತೆಯ ಜಾಗೃತಿ ಮೂಡಿಸುವುದು ಒಂದು ಉತ್ತಮ ಕಾರ್ಯ ಬಸವಣ್ಣನವರು ಹೇಳಿದ ಹಾಗೆ “ಕಳಬೇಡ-ಕೊಲಬೇಡ ಹುಸಿಯ ನುಡಿಯಲುಬೇಡ, ತನ್ನಬಣ್ಣಿಸಬೇಡ ಇದಿರ ಹಳಿಯಲುಬೇಡ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮ ನೋವಿನ ಪರಿ” ಎಂದು ಹೇಳಿ ಇವತ್ತಿನ ಜಗತ್ತಿನಲ್ಲಿ ಜನರಲ್ಲಿ ಮೋಸ, ವಂಚನೆ, ದರೋಡೆ, ಅಸೂಯೆ ಮಾಡಿರುವ ಜನರಲ್ಲಿ ಈ ಕಾರ್ಯಕ್ರಮಗಳು ಧಾರ್ಮಿಕತೆ ಅಂದರೆ ಏನು ಎಂಬ ಅರಿವು ಮೂಡಿಸುತ್ತದೆ ಮತ್ತು ಮಹಿಳೆಯರಿಗೆ ಪ್ರಧಾನ್ಯತೆ ನೀಡಿ ಅವರಲ್ಲಿ ಸಬಲೀಕರಣದ ಬಗ್ಗೆ ಅರಿವು ಮೂಡಿಸುವ ಕಾರ್ಯ ಹಾಗೂ ಆರ್ಥಿಕವಾಗಿ ನೆರವು ನೀಡಿ ಮಹಿಳೆಯರು ಈ ಮಟ್ಟಿಗೆ ಬೆಳೆಯಲು ಈ ಯೋಜನೆಯ ಕಾರ್ಯ ಮಹತ್ತರವಾದದ್ದು ಯೋಜನೆಯವರು ಬಹಳ ಉತ್ತಮ ಕಾರ್ಯ ಹಮ್ಮಿಕೊಂಡಿದ್ದೀರಿ ಸರ್ವರಿಗೂ ಒಳಿತಾಗಲಿ ಎಂದು ಆಶೀರ್ವಾಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಉಮೇಶ್, ಪುರಸಭೆ ಅಧ್ಯಕ್ಷರು ವಹಿಸಿದ್ದರು.ಧಾರ್ಮಿಕ ಜನ ಜಾಗೃತಿ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲ್ಲಾ ಜನರನ್ನು ಒಗ್ಗೂಡಿಸಿ ತುಂಬಾ ಒಳ್ಳೆಯ ಕೆಲಸವನ್ನು ನೆರವೇರಿಸುತ್ತಿದೆ. ಹಾಗೂ ಜನರಲ್ಲಿ ಧಾರ್ಮಿಕ ಚಿಂತನೆಯನ್ನು ಮೂಡಿಸುವ ಕೆಲಸ ನಿರ್ವಹಿಸುತ್ತಿದೆ. ಎಂದು ಕಾರ್ಯಕ್ರಮದ ಕುರಿತು ಶುಭ ಹಾರೈಸಿದರು.

ಶ್ರೀ ಅಶ್ವಿನ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರು ಸೋಮನಾಥಪುರ ಮಾತನಾಡಿ. ಈ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯವನ್ನು ಒದಗಿಸಿಕೊಡುವಲ್ಲಿ ಒಳ್ಳೆಯ ಕಾರ್ಯ ನಿರ್ವಹಿಸುತ್ತಿದೆ. ಯೋಜನೆಯ ಕಾರ್ಯಕ್ರಮ ಮಹಿಳೆಯರಿಗೆ ಒಳ್ಳೆಯ ತಿಳುವಳಿಕೆ ಹಾಗೂ ಸಂಸ್ಕತಿ ಸಂಸ್ಕಾರವನ್ನು ಮೂಡಿಸುತ್ತಿದೆ. ಸಮಾಜದ ಮುಖ್ಯವಾಹಿನಿಗೆ ಮಹಿಳೆಯರು ಬರಲು ಒಂದು ಮಾದರಿ ಯೋಜನೆಯಾಗಿದೆ.

ಶ್ರೀ ಸಿ.ರಮೇಶ್, ಮಾಜಿ ವಿಧಾನ ಪರಿಷತ್ ಸದಸ್ಯರು. ಬೇರೆ ಯಾವುದೇ ಸಂಘ ಸಂಸ್ಥೆಗಳಿಗಿಂತ ವಿಭಿನ್ನವಾಗಿ ಸರ್ಕಾರ ಮಾಡುವಂತಹ ಹಲವಾರು ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಡುತ್ತಿದೆ. ಹಣದ ವ್ಯವಹಾರ ಜ್ಞಾನ ಅಷ್ಟೇ ಅಲ್ಲದೇ, ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಪ್ರತಿ ಕುಟುಂಬಗಳಿಗೆ ಧಾರ್ಮಿಕತೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಧಾರ್ಮಿಕ ಜಾಗೃತಿ ನಮ್ಮಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಮಹಿಳೆಯರಲ್ಲಿ ಅರಿವು ಮೂಡಿಸುವ ಕಾರ್ಯ ಯೋಜನೆಯಿಂದ ನಡೆಯುತ್ತಿದೆ ಎಂದು ಹೇಳಿದರು.

ಶ್ರೀಮತಿ ಸುನೀತಾಪ್ರಭು, ಯೋಜನಾಧಿಕಾರಿ, ಶ್ರೀ ಕ್ಷೇ.ಧ.ಗ್ರಾ.ಯೋ(ರಿ.) ತಿ.ನರಸೀಪುರ ಪ್ರಾಸ್ತಾವಿಕ ಮಾತನಾಡಿ. ಯೋಜನೆಯ ಕಾರ್ಯಕ್ರಮಗಳಾದ ಸೋಲಾರ್, ಕುಕ್‍ಸ್ಟವ್, ಕೃಷಿ ಮತ್ತು ಕೃಷಿಯೇತರ ಕಾರ್ಯಕ್ರಮಗಳು, ಪ್ರಗತಿನಿಧಿ ವಿತರಣೆ, ಧಾರ್ಮಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಯೋಜನೆಯ ಎಲ್ಲಾ ಸಂಘವು ಸ್ವಾರ್ಥತೆಯನ್ನು ಬಿಟ್ಟು ನಿಸ್ವಾರ್ಥದಿಂದ ಸಮಾಜದ ಒಳಿತಿನ ಬಗ್ಗೆ ಯೋಚಿಸಿ ಕಾರ್ಯ ನಿರ್ವಹಿಸಿದಲ್ಲಿ ಜನರಲ್ಲಿ ಮೌಢ್ಯತೆ, ಮೂಢನಂಬಿಕೆಗಳನ್ನು ಹೋಗಲಾಡಿಸಿ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯ ಸತ್ಯನಾರಾಯಣ ಪೂಜೆ ಆಡಂಬರ ಮಾಡುವುದರ ಬದಲು ದಾನಿಗಳ ಸಹಕಾರದಿಂದ ಸರಳವಾಗಿ ಮಾಡುವುದು ಶ್ರೇಷ್ಠ ಎಂದು ತಿಳಿಸಿದರು. ತಾನು ಬದುಕುವುದರ ಜೊತೆ ಇತರರನ್ನು ಬದುಕಲು ಕಲಿಸುವುದೇ ಧರ್ಮ. ಈ ಒಂದು ಸ್ಥಳದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡಿದ್ದು ಎಲ್ಲಾರಿಗೂ ಶ್ರೀ ಸತ್ಯನಾರಾಯಣ ಸ್ವಾಮಿ ಹಾಗೂ ಮಂಜುನಾಥ ಸ್ವಾಮಿಯ ಅನುಗ್ರಹ ನೀಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಮೂರು ವಲಯದ ಮೇಲ್ವಿಚಾರಕರುಗಳಾದ ಮಮತ, ಸಂದೇಶ್, ರಾಜೇಶ್ವರಿ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ, ಕೃಷಿ ಮೇಲ್ವಿಚಾರಕರಾದ ಮಧುರಾಜ್ ಮತ್ತು ಸೇವಾವಾಪ್ರತಿನಿಧಿಗಳು ಸೇರಿದಂತೆ 1500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದರು.

Leave a Reply

Your email address will not be published. Required fields are marked *