NewsTraining

ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಹೈನುಗಾರಿಕೆ/ಮಿನಿಡೈರಿ’ ತರಬೇತಿ

ಮೈಸೂರು ಫೆಬ್ರವರಿ 06: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಪ್ರಾಯೋಜಿತ ‘ಜಂಟಿ ಬಾಧ್ಯತಾ ಸಂಘ’ಗಳ ನಿರುದ್ಯೋಗಿ ಯುವಕ ಯುವತಿಯರಿಗೆ ‘ಕೌಶಲ್ಯಾಭಿವೃದ್ಧಿ ತರಬೇತಿ’ ಕಾರ್ಯಕ್ರಮದಡಿಯಲ್ಲಿ ಹಲವು ವಿಷಯಗಳ ಕುರಿತಾದ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ದಿನಾಂಕ:06.02.2018 ರಿಂದ 10.02.2018 ರವರೆಗೆ ‘ಹೈನುಗಾರಿಕೆ/ಮಿನಿಡೈರಿ’ ತರಬೇತಿಯನ್ನು ‘ಮಾನವ ಸಂಪನ್ಮೂಲ ತರಬೇತಿ ಕೇಂದ್ರ ಮೈಸೂರು’ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಹೈನುಗಾರಿಕೆ/ಮಿನಿಡೈರಿ ತರಬೇತಿಯನ್ನು ಡಾ.ದೇವದಾಸ್, ಜಂಟಿ ನಿರ್ದೇಶಕರು ಪಶುಸಂಗೋಪನಾ ಮತ್ತು ಪಶು ಸೇವೆ ಮೈಸೂರು ವಿಭಾಗ ಇವರು ಉದ್ಘಾಟಿಸಿ ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಹಸುಗಳನ್ನು ಸಾಕಿಕೊಂಡು ಹಾಲನ್ನು ಮಾರಾಟ ಮಾಡಬೇಕೆಂದರೆ ನಗರ ಪ್ರದೇಶ ಅಥವಾ ದೂರದೂರಿನ ಡೈರಿಗಳಿಗೆ ತಾವೇ ಹೋಗಿ ಮಾರಾಟ ಮಾಡಿಕೊಂಡು ಬರಬೇಕಾದ ಪ್ರಮೇಯವಿದ್ದು, ಇದರಿಂದ ರೈತರು ವೈವಿಧ್ಯಮಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕಷ್ಟ ಸಾಧ್ಯವಾಗುತ್ತಿತ್ತು. ಆದರೆ ಇಂದು ಕಾಲ ಚಕ್ರವು ಬದಲಾಗಿದ್ದು, ಹಳ್ಳಿ ಹಳ್ಳಿಗಳಲ್ಲೂ ಹಾಲು ಉತ್ಪಾದಕರ ಸಂಘಗಳನ್ನು ತೆರೆಯಲು ಧರ್ಮಸ್ಥಳದ ಮೂಲಕ ಅನುದಾನಗಳನ್ನು ನೀಡಿ ಹಾಲು ಸಂಗ್ರಹಣೆಯನ್ನು ಮಾಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಿ.ವೀರೇಂದ್ರ ಹೆಗ್ಗಡೆಯರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಸದಸ್ಯರಿಗೆ ಉಚಿತವಾಗಿ ತರಬೇತಿಗಳನ್ನು ಕೊಡಿಸುವುದರ ಮೂಲಕ ಯಶಸ್ವಿ ಹೈನುಗಾರಿಕೋದ್ಯಮಿಗಳನ್ನು ಸೃಷ್ಟಿಮಾಡುತ್ತಿದ್ದಾರೆ. ಇದರಿಂದಾಗಿ ನಿರುದ್ಯೋಗ ಸಮಸ್ಯೆಯ ಮಟ್ಟವೂ ಕಡಿಮೆಯಾಗಿ ವಿದ್ಯಾವಂತರು ಅಥವಾ ಅವಿದ್ಯಾವಂತರೆಂಬ ಬೇಧವಿಲ್ಲದೇ ಸರಳವಾಗಿ ಲಾಭದಾಯಕ ಹೈನುಗಾರಿಕೆಯನ್ನು ಮಾಡಲು ಸಹಕಾರಿಯಾಗಿದೆ. ಹೈನುಗಾರಿಕೆ ಮತ್ತು ದುಷ್ಚಟಗಳು ಒಂದೆಡೆ ಸೇರಿಕೊಂಡು ಮುನ್ನಡೆಯಲು ಸಾಧ್ಯವಿಲ್ಲವಾಗಿದ್ದು, ದುಷ್ಚಟ ಮತ್ತು ದುರಭ್ಯಾಸಗಳನ್ನು ಹೈನುಗಾರಿಕೋಧ್ಯಮಿಯು ತ್ಯಜಿಸಿದರಷ್ಟೇ ಯಶಸ್ವೀ ಹೈನುಗಾರರಾಗಲು ಸಾಧ್ಯ ಎಂದು ಶ್ರೀಯುತರು ತಿಳಿಸಿದರು.

ಪ್ರಾದೇಶಿಕ ಕಛೇರಿ ಮೈಸೂರು ಇದರ ಪ್ರಾದೇಶಿಕ ನಿರ್ದೇಶಕರಾದ ಶ್ರೀಯುತ ಎ.ಶ್ರೀಹರಿ ಇವರು ನಿರುದ್ಯೋಗಿ ಯುವಕ ಯುವತಿಯರನ್ನು ಜಂಟಿ ಬಾಧ್ಯತಾ ಸಂಘಗಳ ಮೂಲಕ ಸಂಘಟಿಸಿ ಅವರಿಗೆ ನಿರ್ವಹಿಸಬಹುದಾದ ವಿವಿಧ ಉದ್ಯೋಗಗಳ ಕುರಿತಾದ ತರಬೇತಿಗಳನ್ನು ಕೊಡಿಸಿ ಅವರನ್ನು ಸ್ವ-ಉದ್ಯೋಗಿಗಳನ್ನಾಗಿಸುವಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದು ತಿಳಿಸಿದು.

ತರಬೇತಿ ಕೇಂದ್ರದ ಪ್ರಾಶುಪಾಲರಾದ ಶ್ರೀಯುತ ಸಂತೋಷ್ ರಾವ್.ಪಿ ಇವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 2017-18 ನೇ ಆರ್ಥಿಕ ವರ್ಷವನ್ನು ‘ಸ್ವ-ಉದ್ಯೋಗ ವರ್ಷ’ವೆಂದು ಅಚರಿಸಲಾಗುತ್ತಿದ್ದು, ಅದರ ಅಂಗವಾಗಿ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸುತ್ತಾ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯ ಸಮಗ್ರ ರೂಪುರೇಷೆಯ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ರೀ ಶಿವಕುಮಾರ್.ಆರ್ ಉಪಸ್ಥಿತರಿದ್ದರು.

5 ದಿನಗಳ ಈ ತರಬೇತಿಯಲ್ಲಿ ಚಾಮರಾಜನಗರ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳ ವಿವಿಧ ತಾಲೂಕುಗಳ ಒಟ್ಟು 38 ಮಂದಿ ಭಾಗವಹಿಸುತ್ತಿದ್ದು, ತರಬೇತಿಯಲ್ಲಿ ಮಾಹಿತಿ, ಪ್ರಾಯೋಗಿಕ ಕಲಿಕೆ, ಪ್ರಾತ್ಯಕ್ಷಿಕೆ, ಅನುಭವಿ ಹೈನುಗಾರಿಕೋದ್ಯಮಿಗಳಿಂದ ಅನುಭವ ಹಂಚಿಕೆ, ವೀಡಿಯೋ ವೀಕ್ಷಣೆ, ವಿವಿಧ ಚಟುವಟಿಕೆಗಳು ಮತ್ತು ಕ್ಷೇತ್ರ ಸಂದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ.

One thought on “ಜಂಟಿ ಬಾಧ್ಯತಾ ಸಂಘಗಳ ಸದಸ್ಯರಿಗೆ ‘ಹೈನುಗಾರಿಕೆ/ಮಿನಿಡೈರಿ’ ತರಬೇತಿ

Leave a Reply

Your email address will not be published. Required fields are marked *